Dharwad: ಸರ್ಕಾರಿ ಕಾಮಗಾರಿಗೆ ರೈತನ ಜಮೀನಿನ ಮಣ್ಣು ಬಳಕೆ; ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹ

ರೈತನ ಜಮೀನಲ್ಲಿನ ಮಣ್ಣು ಹಾಗೂ ಕಲ್ಲನ್ನು ಅಕ್ರಮವಾಗಿ ತೆಗೆದು ಕೆರೆ ಕಾಮಗಾರಿಗೆ ಬಳಕೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ

  • Share this:
ಧಾರವಾಡ : ಇಂದಿರಮ್ಮನ ಕೆರೆ ಧಾರವಾಡ ಜಿಲ್ಲೆಯ ಬೃಹತ್ ಕೆರೆಗಳಲ್ಲಿ (Dharwad Lakes) ಒಂದಾಗಿರುವ ಕೆರೆ.  ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರೆ ಗ್ರಾಮದ (Hulikere Village) ಈ ಕೆರೆ ಕಳೆದ ಎರಡು ವರ್ಷಗಳ ಹಿಂದೆ ಸುರಿದ ಬಾರಿ ಮಳೆಯಿಂದ ಕೆರೆಯ ತಡೆ ಗೋಡೆ ಒಡೆದಿತ್ತು. ಇದರ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ‌ ಕೋಟಿ ಕೋಟಿ ಹಣ ಬಿಡುಗಡೆ ಸಹ ಮಾಡಿದೆ. ಕಾಮಗಾರಿಯೂ ಸಹ ಭರದಿಂದ ಸಾಗಿದೆ. ಆದ್ರೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಮಾಡಿರುವ ಯಡವಟ್ಟಿ ನಿಂದ‌ ಕೆರೆಯ ಪಕ್ಕದ‌ ಜಮೀನ ರೈತ ಕಂಗಾಲಾಗುವಂತೆ ಮಾಡಿದೆ.  ಕೆರೆಯ ಪಕ್ಕದಲ್ಲಿನ ಸರ್ವೆ ನಂಬರ್ 33/p1 ನಲ್ಲಿನ 4 ಎಕರೆ 15 ಗುಂಟೆ ಜಮೀನು ಮೃತ್ಯುಂಜಯ ಯರಗಂಬಳಿಮಠ ಅವರಿಗೆ ಸೇರಿದ ಜಮೀನು. ಈ ಜಮೀನಲ್ಲಿನ ಮಣ್ಣು ಹಾಗೂ ಕಲ್ಲನ್ನು ಅಕ್ರಮವಾಗಿ ತೆಗೆದು ಕೆರೆ ಕಾಮಗಾರಿಗೆ ಬಳಕೆ ಮಾಡಲಾಗಿದೆ.

ಜಮೀನಿನಿಂದ ಅಕ್ರಮವಾಗಿ ಮಣ್ಣು ತೆಗೆದು ಬಳಕೆ 

ಮೃತ್ಯುಂಜಯ ಅವರು ಮೂಲತಃ ಹುಲಿಕೆರಿ ಗ್ರಮದ ನಿವಾಸಿ, ಆದ್ರೆ ವೃತ್ತಿಯಲ್ಲಿ ಇವರು ವಕೀಲರಾದ ಕಾರಣ ಬೆಂಗಳೂರಲ್ಲಿ ಇರುತ್ತಾರೆ. ಇವರು ಗ್ರಾಮದಲ್ಲಿ ಇರೋದಿಲ್ಲ ಎಂದು ತಿಳಿದ ಹೆಗಡೆ ಎಂಬುವ ಗುತ್ತಿಗೆದಾರರು ರೈತರ ಪರವಾನಿಗೆ ಇಲ್ಲದೇ ಹಗಲು ರಾತ್ರಿ ಎನ್ನದೆ ಮಣ್ಣು ಹಾಗೂ ಕಲ್ಲನು ತೆಗೆದು ತಮ್ಮ ಕಾಮಗಾರಿಗೆ ಬಳಕೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ‌ ಜಮೀನ‌ ಮಾಲೀಕರಾದ ಮೃತ್ಯುಂಜಯ ಅವರು ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸಿ ತಮ್ಮ‌ ಜಮೀನಲ್ಲಿ‌ನಡೆಯುತ್ತಿರೊ ಅಕ್ರಮದ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಜಮೀನಿಗೆ ಹೋದ ಸಮಯದಲ್ಲಿ ಜಮೀನಿನಲ್ಲಿ ಇದ್ದ ಹಿಟ್ಯಾಚ್, ಟಿಪ್ಪರ್ ಅನ್ನು ತಡೆದು ಪೊಲೀಸ್ ರ ವಶ ಪಡೆಯುವಂತೆ‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Kolar News: ಹೈಬ್ರಿಡ್ ಹಸುಗಳನ್ನು ಪರಿಚಯಿಸಿದ ಕೇಂದ್ರದ ಮಾಜಿ ಸಚಿವರ ಹುಟ್ಟೂರಲ್ಲೇ ಹಾಲಿನ ಡೈರಿ ಇಲ್ಲ

ಸರ್ಕಾರಿ ಇಲಾಖೆಗಳಿಗೆ ದೂರು 

ತಮ್ಮ ಪರವಾನಿಗೆ ಇಲ್ಲದೆ ಜಮೀನಿನಲ್ಲಿ ಮಣ್ಣು ತೆಗೆದುಕೊಂಡು ಹೋಗುವಾಗ ಅಲ್ಲಿನ ವಾಹನಗಳನ್ನು ಜಪ್ತಿ ಮಾಡುವಂತೆ ಸ್ಥಳಕ್ಕೆ‌ ಪೊಲೀಸರನ್ನು ಕರೆಸಿದ್ದಾರೆ. ಆದ್ರೆ ಆ ಸಮಯದಲ್ಲಿ ಪೊಲೀಸರು ಸಹ ರೈತರ‌ ಪರವಾಗಿ ನಿಲ್ಲದೆ ವಾಹನಗಳನ್ನು ಬಿಟ್ಟಿದ್ದಾರೆ.‌ ಇದು ಹಲವು ಅನುಮಾನಗಳುಗೆ ಕಾರಣವಾಗಿದೆ. ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಣ್ಣ ನೀರಾವರಿ‌ ಇಲಾಖೆಗಳಿಗೆ ದೂರು‌ ನೀಡಿದ್ದಾರೆ. ದೂರಿನನ್ವಯ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಮ್ಮ ಜಮೀನಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ  ಟಿಪ್ಪರ್ ಮಣ್ಣು ಹಾಗೂ ಕಲ್ಲು ತೆಗೆದಿದ್ದಾರೆ, ಈ ಕುರಿತು ಗುತ್ತಿದಾರರ ವಿರುದ್ಧ ಸೂಕ್ತ ಕ್ರಮ ಪರಿಹಾರ ಅಲ್ಲದೆ ತಮಗೆ ಸೂಕ್ತ ಪರಿಹಾರ ನೀಡುವಂತೆ ರೈತ ಮೃತ್ಯುಂಜಯ ಅವರು ಮನವಿ ಮಾಡುದ್ದಾರೆ. ಈ ಬಗ್ಗೆ ಮಾತನಾಡಿದ ಗಣಿ‌ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹೇಶಕುಮಾರ ಮಾತನಾಡಿ, ರೈತರ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಕಬಳಿಸಿರೊ ದೂರು ನೀಡಲಾಗಿತ್ತು, ಈ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಸ್ಥಳ ಪರಿಶೀಲನೆ ನಡೆಸಲಾಗಿದೆ. ಆದ್ರೆ ಸರ್ವೆ ಇಲಾಖೆಗೆ ಜಮೀನಿ ಅಳತೆ ಮಾಡಿದ ಬಳಿಕ ಮುಂದಿನ‌ ಕ್ರಮ‌ ಜರುಗಿಸುವುದಾಗಿ ಹೇಳಿದರು.

ಒಟ್ಟಿನಲ್ಲಿ ಕೆರೆ ತಡೆಗೋಡೆ ಕಾಮಗಾರಿಗೆ ಗುತ್ತಿಗೆ ಪಡೆದ ಗುತ್ತುಗೆದಾರ ಕೆರೆಯ ಪಕ್ಕದ‌ ಜಮೀನಿನಲ್ಲಿ ಅಕ್ರಮವಾಗಿ‌ಮಣ್ಣು ಹಾಗೂ ಕಲ್ಲು ಬಳಕೆ‌ಮಾಡಿದ್ದು ಮೆಲ್ನೊಟಕ್ಕೆ ನೋಡಿದರೆ ಇಕ್ಕೆ ಕೆಲವು ಅಧಿಕಾರಿಗಳು ಸಾಥ್ ನೀಡಿರೊ ಅನುಮಾನ‌ ಮೂಡುತ್ತಿವೆ. ಏನೇ ಆಗಲಿ ಅಮಾಯಕ ರೈತ ತನ್ನ ಜಮೀನನಲ್ಲಿ ಮಣ್ಣು ಹಾಗೂ ಕಲ್ಲು ಕಳೆದುಕೊಂಡು ಈಗ ಅಧಿಕಾರಿಗಳ ಕಚೇರಿ ಅಲೆಯುವಂತೆ‌ ಆಗಿದೆ.
Published by:Kavya V
First published: