• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • UPSC Exam: ಬಸ್ ಚಾಲಕನ ಮಗ ಈಗ IPS ಅಧಿಕಾರಿ; ಕೆಎಸ್ಆರ್​​ಟಿಸಿಗೆ ಹೆಮ್ಮೆಯೋ ಹೆಮ್ಮೆ

UPSC Exam: ಬಸ್ ಚಾಲಕನ ಮಗ ಈಗ IPS ಅಧಿಕಾರಿ; ಕೆಎಸ್ಆರ್​​ಟಿಸಿಗೆ ಹೆಮ್ಮೆಯೋ ಹೆಮ್ಮೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಅನುರಾಗ್ ದಾರು ಅವರು ಶಿಕ್ಷಣದಿಂದ ಎಂಜಿನಿಯರ್ ಆಗಿದ್ದು, ಐದನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

  • Share this:

ಬೆಂಗಳೂರು: ಇತ್ತೀಚೆಗಷ್ಟೇ UPSC ಫಲಿತಾಂಶಗಳು ಹೊರ ಬಿದ್ದಿವೆ. ಅನೇಕ ಅಭ್ಯರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ (UPSC Exam) ತೇರ್ಗಡೆಯಾಗಿ ಉನ್ನತ ಹುದ್ದೆಗೇರಲಿದ್ದಾರೆ. ಒಬ್ಬೊಬ್ಬ ಸಾಧಕರ ಹಿಂದೆಯೂ ಒಂದು ಕಥೆಯಿದೆ (Inspiring Stories). ಅದು ಅನೇಕರಿಗೆ ಸ್ಪೂರ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಸಹ ಅಂತಹದ್ದೇ ಕಷ್ಟಗಳ ಮಧ್ಯೆ ಪ್ರಜ್ವಲವಾಗಿ ಬೆಳಗಿದ ಪ್ರತಿಭೆ ಬಗ್ಗೆ ಪರಿಚಯಿಸುತ್ತಿದ್ದೇವೆ. ಅವರ ಹೆಸರು ಅನುರಾಗ್ ದಾರು (Anurag Daru). ಉತ್ತರ ಕರ್ನಾಟಕದ ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಬೆಳೆದ ಇವರು ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಟೋಪಿ ಧರಿಸಲು ಹೊರಟಿದ್ದಾರೆ. ಆ ಮೂಲಕ ಕುಟುಂಬಸ್ಥರು, ಹುಟ್ಟೂರಿನ ಜನರಲ್ಲಿ ಕಣ್ಮಣಿಯಾಗಿದ್ದಾರೆ. UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ 569 ನೇ ರ್ಯಾಂಕ್ ಗಳಿಸಿದ ನಂತರ, ಅನುರಾಗ್ ದಾರು IPS ಆಗಲು ಸಜ್ಜಾಗಿದ್ದಾರೆ.


KSRTCಯಿಂದ ಅಭಿನಂದನಾ ಸಭಾರಂಭ


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅನುರಾಗ್ ದಾರು ಅವರ ಯಶಸ್ಸನ್ನು ಆಚರಿಸಲು ಅಭಿನಂದನಾ ಸಮಾರಂಭವನ್ನು ಆಯೋಜಿಸಿತ್ತು. ಅಲ್ಲಿ KSRTC ಅಧ್ಯಕ್ಷ ಎಂ ಚಂದ್ರಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಅವರರು ಅನುರಾಗ್​ ಅವರನ್ನು ಮತ್ತು ಅವರ ಪೋಷಕರಾದ ಮಾಣಿಕ್ ರಾವ್, ಕಾಶಿಬಾಯಿ ಅವರನ್ನು ಸನ್ಮಾನಿಸಿದರು. ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ಅನುರಾಗ್ ದಾರು ಅವರ ತಂದೆ ಬೀದರ್ ವಿಭಾಗದ ಬಾಲ್ಕಿ ಡಿಪೋದಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಾಗಿದ್ದಾರೆ.


ಅನುರಾಗ್​ ಹಿನ್ನೆಲೆ 


ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಅನುರಾಗ್ ದಾರು ಅವರು ಶಿಕ್ಷಣದಿಂದ ಎಂಜಿನಿಯರ್ ಆಗಿದ್ದು, ಐದನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು. ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಮತ್ತಷ್ಟು ಮಾತನಾಡುತ್ತಾ, ತಮ್ಮ ಇಂಜಿನಿಯರಿಂಗ್ ಅನ್ನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಮಾಡಿದ್ದಾರೆ. ಜೊತೆಗೆ ಇತಿಹಾಸವನ್ನು ತಮ್ಮ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರಂತೆ. UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೊದಲು, ಅನುರಾಗ್ ದಾರು ಟಾಟಾ ಪವರ್‌ನಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದರು.


ಇದನ್ನೂ ಓದಿ: Basavaraj Bommai: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ ಸರ್ಕಾರಕ್ಕಿಲ್ಲ; ಸಿಎಂ ಬಸವರಾಜ ಬೊಮ್ಮಾಯಿ


2017 ರಿಂದ ಸತತ ಪ್ರಯತ್ನ


ನನ್ನ ಪ್ರಯಾಣವು ಏರಿಳಿತಗಳನ್ನು ಹೊಂದಿತ್ತು. ನಾನು 2017 ರಿಂದ ಪ್ರಯತ್ನಿಸುತ್ತಿದ್ದೇನೆ ಮತ್ತು ನನ್ನ ಐದನೇ ಪ್ರಯತ್ನದಲ್ಲಿ UPSC-2021 ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ನನ್ನ ಪೋಷಕರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು.


ನನ್ನ ತಂದೆ ಅತ್ಯುತ್ತಮ ಶಿಕ್ಷಣವನ್ನು ನೀಡುವತ್ತ ಗಮನಹರಿಸಿದರು


ತನಗೆ ಐವರು ಒಡಹುಟ್ಟಿದವರಿದ್ದಾರೆ ಎಂದು ಅನುರಾಗ್ ದಾರು ಹೇಳಿದರು. ಇವರ ಮೂವರು ಹಿರಿಯ ಸಹೋದರಿಯರು ಕಂಪ್ಯೂಟರ್ ಎಂಜಿನಿಯರ್‌ ಆಗಿದ್ದು, ಮದುವೆಯಾಗಿದ್ದಾರೆ. ಇವರ ಕಿರಿಯ ಸಹೋದರ ಮೂಳೆಚಿಕಿತ್ಸೆಯಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು. ತಮ್ಮ ತಂದೆಯ ಬಗ್ಗೆ ಮಾತನಾಡಿದ ಅವರು, ತಮ್ಮ ತಂದೆ ಕಠಿಣ ಪರಿಶ್ರಮಿ ವ್ಯಕ್ತಿಯಾಗಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಯಾವಾಗಲೂ ಒತ್ತು ನೀಡುತ್ತಿದ್ದರು ಎಂದು ಹೇಳಿದರು.


ಕಣ್ಣು ಕಾಣದಿದ್ರೂ ಎರಡು ಬಾರಿ UPSC ಪರೀಕ್ಷೆಯಲ್ಲಿ ತೇರ್ಗಡೆ


ಮೈಸೂರು ಮೂಲದ ಕೆ.ಟಿ.ಮೇಘನಾ ಇತರರಿಗೆ ಮಾದರಿಯಾಗಿದ್ದಾರೆ. ಹೌದು ಮೇಘನಾ ಅವರಿಗೆ ದೃಷ್ಟಿ ಸಮಸ್ಯೆಯಿದೆ. ಶೇ.70 ರಷ್ಟು ದೃಷ್ಟಿ ಸಮಸ್ಯೆ ಹೊಂದಿರುವ ಮೇಘನಾ ಅವರು ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. 2022ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಮೇಘನಾ ಕೆ.ಟಿ. ಅವರು 425ನೇ Rank ಪಡೆದುಕೊಂಡಿದ್ದಾರೆ. 2020ರಲ್ಲಿ ನಡೆದ ಪರೀಕ್ಷೆಯಲ್ಲೂ ಮೇಘನಾ ಆಯ್ಕೆಯಾಗಿದ್ದರು. ಆದರೆ ಕಡಿಮೆ Rank ಬಂದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಂಡಿದ್ದರು. ಮೇಘನಾ ಅವರು ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡಕೂರು ಗ್ರಾಮದ ನಿವಾಸಿ. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ಮೇಘನಾ ಕುಟುಂಬಸ್ಥರ ಜೊತೆ ವಾಸವಾಗಿದ್ದಾರೆ. ತಾಂಡವಮೂರ್ತಿ ಮತ್ತು ನವನೀತ ದಂಪತಿಯ ಪುತ್ರಿಯಾಗಿರುವ ಮೇಘನಾ 10ನೇ ತರಗತಿಯಲ್ಲಿ ಓದುತ್ತಿರುವಾ ರೆಟಿನಾ ಸಮಸ್ಯೆಯಿಂದ ಶೇ.70ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ. ದೃಷ್ಟಿ ಸಮಸ್ಯೆ ಕಳೆದುಕೊಂಡರೂ ಛಲ ಬಿಡದ ಮೇಘನಾ ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ.

Published by:Kavya V
First published: