UPSCಯಲ್ಲಿ ಚಿತ್ರದುರ್ಗ ಜಿಲ್ಲೆಯ ಕುಗ್ರಾಮದ ಯುವತಿ ಸಾಧನೆ; ಮಮತಾ ಸಾಧನೆಗೆ ಮೆಚ್ಚುಗೆ

ಎರಡು ಬಾರಿ ಬರೆದ ಪರೀಕ್ಷೆಯಲ್ಲಿ ವಿಫಲರಾದ ಅವರು ಛಲ ಬಿಡದೆ ಓದಲಿ ಪ್ರಾರಂಭ ಮಾಡಿ, ಇದೀಗ ಮೂರನೇ ಬಾರೀ ಪರೀಕ್ಷೆಯಲ್ಲಿ 707 Rank ಪಡೆದು ಪಾಸ್ ಆಗಿದ್ದು ಕನಸು ನನಸಾಗಿಸಿಕೊಂಡಿದ್ದಾರೆ

ಮಮತಾ

ಮಮತಾ

  • Share this:
ಚಿತ್ರದುರ್ಗ (ಸೆ. 25) : ಬಡತನ ಮೆಟ್ಟಿ ನಿಂತು ಶಿಕ್ಷಣ ಪಡೆಯುವುದಕ್ಕೆ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಪ್ರತಿ ನಿತ್ಯ ಒಂದಿಲ್ಲೊಂದು ಹರಸಾಹಸ ಮಾಡುತ್ತಾರೆ. ಇವರ ಪ್ರಯತ್ನಕ್ಕೆ ಕೊಂಚ ಸಹಕಾರ, ಆಸರೆ ಸಿಕ್ಕರೆ ಹಳ್ಳಿ ಮಕ್ಕಳು ದಿಲ್ಲಿಯಲ್ಲೂ ಹೆಸರು ಮಾಡುತ್ತಾರೆ ಅನ್ನೋದರಲ್ಲಿ ಯಾವ ಅನುಮಾನ ಬೇಡವೇ ಬೇಡ. ಇದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗ ಜಿಲ್ಲೆಯ ದಲಿತ ಸಮುದಾಯದ ಯುವತಿ ಜಿ. ಮಮತಾ  UPSC mains  ಪರೀಕ್ಷೆಯಲ್ಲಿ ಪಾಸ್  ಆಗಿ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈಕೆಯ ಯಶಸ್ಸಿನ ಹಾದಿ ಕಂಡು ಸಾರ್ವಜನಿಕರು, ಜನಪ್ರತಿನಿಧಿಗಳು, ಮಠಾಧೀಶರು ಅಭಿನಂದಿಸಿ ಶುಭಾಶಯಗಳು ತಿಳಿಸಿದ್ದಾರೆ.

ಭೋವಿಹಟ್ಟಿ ಯುವತಿ ಸಾಧನೆ

ನಿನ್ನೆಯಷ್ಟೆ ಪ್ರಕಟವಾದ UPSC ಪರೀಕ್ಷೆಯಲ್ಲಿ ಜಿಲ್ಲೆಯ ಜಿ. ಮಮತಾ 707 Rank ಪಡೆದು ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ದೇವಪುರ ಭೋವಿಹಟ್ಟಿಯ ಗೋವಿಂದಪ್ಪ ಚಂದ್ರಮ್ಮ ದಂಪತಿ ಪುತ್ರಿ ಜಿ. ಮಮತಾ ಹುಟ್ಟೂರಲ್ಲಿಯೇ ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರ ಶಿಕ್ಷಣದ ಮೇಲಿನ ಆಸಕ್ತಿ ಹೆಚ್ಚಿಂದಂತೆಲ್ಲೆ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ಮಮತಾ ತಂದೆ ಗೋವಿಂದಪ್ಪ ಮಗಳಿ ಪ್ರೋತ್ಸಹ ನೀಡುತ್ತಾ ಹೊಸದುರ್ಗ ಹಾಗೂ ಶಿವಮೊಗ್ಗದಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಕೊಡಿಸಿದ್ದಾರೆ. ಅಲ್ಲಿಂದ ಓದಿನ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಂಡ ಮಮತಾ ತನ್ನೂರಿಗೆ ಕೀರ್ತಿ ತರಬೇಕು ಸರ್ಕಾರಿ ನೌಕರಿ ಪಡೆಯಲೇ ಬೇಕು ಅನ್ನುವ ಹುಮ್ಮಸ್ಸಿನಲ್ಲಿ ಬೆಂಗಳೂರಿನ ಆರ್​ವಿ ಇಂಜಿನಿಯರಿಂಗ್ ಕಾಲೇಜಲ್ಲಿ ಪದವಿ ಶಿಕ್ಷಣ ಪಡೆದು ಉತ್ತಮ ಅಂಕ ಗಳಿಸಿದ್ದರು. ಬಳಿಕ ಐಎಎಸ್ ಆಗುವ ಕನಸು ಕಂಡು ಯುಪಿಎಸ್ಸಿ ಪರೀಕ್ಷೆ ತರಬೇತಿ ಪಡೆದಿದ್ದರು.

ಇದನ್ನು ಓದಿ: ಸಿವಿಲ್​ ಸರ್ವಿಸ್​ ಫಲಿತಾಂಶ ಪ್ರಕಟ; ಐಐಟಿ ಬಾಂಬೆ ವಿದ್ಯಾರ್ಥಿ ಶುಭಂ ಟಾಪರ್​​; ರಾಜ್ಯದ ಅಕ್ಷಯ್​ ಗೆ 77ನೇ ಸ್ಥಾನ

ಮೂರನೇ ಪ್ರಯತ್ನದಲ್ಲಿ ಯಶಸ್ಸು

ಎರಡು ಬಾರಿ ಬರೆದ ಪರೀಕ್ಷೆಯಲ್ಲಿ ವಿಫಲರಾದ ಅವರು ಛಲ ಬಿಡದೆ ಓದಲಿ ಪ್ರಾರಂಭ ಮಾಡಿ, ಇದೀಗ ಮೂರನೇ ಬಾರೀ ಪರೀಕ್ಷೆಯಲ್ಲಿ 707 Rank ಪಡೆದು ಪಾಸ್ ಆಗಿದ್ದು ಕನಸು ನನಸಾಗಿಸಿಕೊಂಡಿದ್ದಾರೆ. ಇದೀಗ Rank ಆಧಾರದ ಮೇಲೆ IRS, IFS , ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.

ಆದರೆ ಅವರ ಪ್ರಯತ್ನ ಇಲ್ಲಿಗೆ ಮುಗಿಯದೆ ತಾನಂದುಕೊಂಡಂತೆ ಮತ್ತೆ ಪರೀಕ್ಷೆ ಬರೆದು IAS ಆಗುತ್ತೇನೆ ಎಂಬ ಭರವಸೆ ಹೊರ ಹಾಕಿದ್ದಾರೆ.

ಇದನ್ನು ಓದಿ: ಓದಿದ್ದು ಎಂಜಿನಿಯರಿಂಗ್; ಕನ್ನಡದಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ್

ಯುವತಿ ಸಾಧನೆಗೆ ಮೆಚ್ಚುಗೆ

ಇನ್ನೂ ಈ ಯುವತಿಯ ಸಾಧನೆಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲೇ ಅತ್ಯಂತ ಹಿಂದುಳಿದಿರುವ ದೇವಪುರ ಭೋವಿ ಹಟ್ಟಿಯಲ್ಲಿ ಹುಟ್ಟಿ ಬೆಳೆದ, ಪರಿಶಿಷ್ಟ ಜಾತಿ ಭೋವಿ ಜನಾಂಗದಲ್ಲಿ ಹುಟ್ಟಿ ಸಂಕಷ್ಟದಲ್ಲಿಯೂ ಅತ್ಯುನ್ನತ ಸಾಧನೆಯನ್ನು ಸಾಕಾರಗೊಳಿಸಿರುವ ಸಹೋದರಿ ಮಮತಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಿಸಿದ್ದಾರೆ.  ದೇಶದ ಅತ್ಯುನ್ನತ ಅಧಿಕಾರಿ ಸ್ಥಾನವನ್ನು ಅಲಂಕರಿಸುತ್ತಿರುವ ಈ ಹೆಣ್ಣು ಮಗಳಿಗೆ ನಾನೂ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಾಧನೆ ಎಂಬುದು ಯಾರೋಬ್ಬರ ಸ್ವತ್ತಲ್ಲ. ನಿಖರ ಗುರಿ ಹಾಗೂ ಸದೃಢ ಮನಸ್ಸನ್ನು ಹೊಂದಿರುವ ಯಾರೋಬ್ಬರು ಕೂಡ ಸಾಧನೆ ಮಾಡಬಹುದು ಎಂಬುದಕ್ಕೆ ಮಮತ.ಜಿ ಅವರೇ ಸಾಕ್ಷಿ ಎಂದು ಹೊಗಳಿದ್ದಾರೆ.

ಇನ್ನೂ ಇವರ ಸಾಧನೆಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಶ್ರೀ ಮಠಕ್ಕೆ ಬರ ಮಾಡಿಕೊಂಡು ಸನ್ಮಾನಿಸಿ ಆಶೀರ್ವಾದಿಸಿದ್ದಾರೆ. ಅಲ್ಲದೇ ಶಿಕ್ಷಣಕ್ಕಿರು ಶಕ್ತಿ ಯಿಂದ ಮಮತಾ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ. ಅವರಂತೆ ಯುವ ಸಮೂಹ ಸಾಧನೆಯ ಹಾದಿಯಲ್ಲಿ ಶಿಕ್ಷಣ ಪಡೆದು IAS, IPS, ನಂತ ಉನ್ನತ ಹುದ್ದೆ ಪಡೆಯಲಿ ಎಂದಿದ್ದಾರೆ.
Published by:Seema R
First published: