ಯುಪಿಎಸ್‌ಸಿ ಫಲಿತಾಂಶ ಪ್ರಕಟ: ರಾಹುಲ್ ಶರಣಪ್ಪ ರಾಜ್ಯಕ್ಕೆ ಟಾಪ್

ರಾಜ್ಯದಿಂದ ಆಯ್ಕೆಯಾದ 24 ಮಂದಿಯಲ್ಲಿ 17 ಮಂದಿ ರ‍್ಯಾಂಕ್​​​ ವಿಜೇತರು ಡಾ. ರಾಜ್​​​ಕುಮಾರ್​​ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಎನ್ನಲಾಗಿದೆ. ಒಟ್ಟು 25 ಅಭ್ಯರ್ಥಿಗಳ ಟಾಪರ್ಸ್​ ಪಟ್ಟಿಯಲ್ಲಿ 15 ಪುರುಷ ಹಾಗೂ 10 ಮಹಿಳಾ ಅಭ್ಯರ್ಥಿಗಳಿದ್ದಾರೆ.

G Hareeshkumar | news18
Updated:April 6, 2019, 10:46 AM IST
ಯುಪಿಎಸ್‌ಸಿ ಫಲಿತಾಂಶ ಪ್ರಕಟ: ರಾಹುಲ್ ಶರಣಪ್ಪ ರಾಜ್ಯಕ್ಕೆ ಟಾಪ್
17ನೇ ರ‍್ಯಾಂಕ್​​​ ಪಡೆದ ರಾಹುಲ್ ಶರಣಬಸಪ್ಪ ಸಂಕನೂರು
G Hareeshkumar | news18
Updated: April 6, 2019, 10:46 AM IST
ಬೆಂಗಳೂರು ( ಏ.06) : ಯುಪಿಎಸ್​ಸಿ 2018ರಲ್ಲಿ  ನಡೆಸಿದ ನಾಗರೀಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಅಗಿದ್ದು, ಧಾರವಾಡದ ರಾಹುಲ್ ಶರಣಬಸಪ್ಪ ಸಂಕನೂರು 17ನೇ ರ‍್ಯಾಂಕ್​​​ ಪಡೆದಿದ್ದಾರೆ ಕರ್ನಾಟಕದ ಒಟ್ಟು 24  ಅಭ್ಯರ್ಥಿಗಳು ನಾಗರೀಕ ಸೇವೆಗೆ ಅರ್ಹತೆ ಪಡೆದಿದ್ದಾರೆ.

ನಾಗರಿಕ ಸೇವೆಗೆ ಅರ್ಹತೆ ಪಡೆದ ಕನ್ನಡಿಗರು 

ಎನ್ ಲಕ್ಷ್ಮೀ (45), ಎಸ್​​ ಆಕಾಶ್ (78), ಕೃತಿಕಾ (100), ಎಚ್​ ಆರ್​​ ಕೌಶಿಕ್​​​​​​(240), ಎಚ್​ ಬಿ. ವಿವೇಕ್(257), ನಿವೇದಿತಾ(303), ಗಿರೀಶ್ ಧರ್ಮರಾಜ್​​​ ಕಲಗೊಂಡ(307), ಮಿರ್ಜಾ ಕದರ್​​ ಬೇಗ್​ (336), ಯು.ಪಿ.ತೇಜಸ್​​(338), ಬಿ ಜಿ ಹರ್ಷವರ್ಧನ್(352), ಪಕೀರೇರ್ಶ್​ ಕಲ್ಲಪ್ಪ ಬಾದಾಮಿ (357), ಡಾ.ನಾಗಾರ್ಜುನ ಗೌಡ(418), ಬಿ.ವಿ. ಅಶ್ವಿನಿ (423), ಬೃಂದಾ(4960, ಹೇಮಂತ್​​(612), ಎಂ.ಕೆ.ಶೃತಿ(637), ವೆಕಟರಾಮನ್​​(694), ಸಂತೋಷ್​​ ಎಚ್​​ (753), ಎಸ್​ ಅಶೋಕ್ ಕುಮಾರ್ (711), ಎನ್​ ರಾಘವೇಂದ್ರ (739) ಹಾಗೂ (754) ರ‍್ಯಾಂಕ್​​​ ಪಡೆದಿದ್ದಾರೆ.

ರಾಜ್ಯದಿಂದ ಆಯ್ಕೆಯಾದ 24 ಮಂದಿಯಲ್ಲಿ 17 ಮಂದಿ ರ‍್ಯಾಂಕ್​​​ ವಿಜೇತರು ಡಾ. ರಾಜ್​​​ಕುಮಾರ್​​ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಎನ್ನಲಾಗಿದೆ. ಒಟ್ಟು 25 ಅಭ್ಯರ್ಥಿಗಳ ಟಾಪರ್ಸ್​ ಪಟ್ಟಿಯಲ್ಲಿ 15 ಪುರುಷ ಹಾಗೂ 10 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಈ ಬಾರಿ ಒಟ್ಟು 759 ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ 577 ಪುರುಷರು ಹಾಗೂ 182 ಮಹಿಳಾ ಅಭ್ಯರ್ಥಿಗಳಿದ್ದಾರೆ. ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್​ ಸೇವೆ ಮತ್ತು ಕೇಂದ್ರ ಸೇವೆಯ ಗ್ರೂಪ್​ ಎ ಹಾಗೂ ಬಿ ಹುದ್ದೆಗಳಿಗೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ :  ಹಿಸ್ಟರಿ ಓದಿ ಇತಿಹಾಸ ನಿರ್ಮಿಸಿದ ಕಲಬುರ್ಗಿಯ ಸ್ಪರ್ಶಾ ನೀಲಂಗಿ
Loading...

ನಾಗರಿಕ ಸೇವೆ ಪೂರ್ವಭಾವಿ ಪರೀಕ್ಷೆಯನ್ನು ಜೂನ್​ ತಿಂಗಳಿನಲ್ಲಿ ನಡೆಸಲಾಗಿತ್ತು. ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 5 ಲಕ್ಷ ಜನರು ಮಾತ್ರ ಪರೀಕ್ಷೆಯನ್ನು ಎದುರಿಸಿದ್ದರು. ಇವರಲ್ಲಿ 10,468 ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆಯನ್ನು ಪಡೆದಿದ್ದರು. ಮುಖ್ಯ ಪರೀಕ್ಷೆ ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ 2018 ರಲ್ಲಿ ನಡೆದಿತ್ತು.
 
First published:April 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...