ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಕೇರ್ ಏಷ್ಯಾ ಖಾಸಗಿ ಆಸ್ಪತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರು ಹಾಗೂ ರೋಗಿಯ ಸಂಬಂಧಿಗಳು ಗಲಾಟೆ ಮಾಡಿರುವ ಘಟನೆ ನಡೆದಿದೆ. ಈ ಘಟನೆಯಿಂದ ಆಸ್ಪತ್ರೆ ಆವರಣ ಕೆಲ ಕಾಲ ರಣರಂಗದಂತೆ ಭಾಸ ವಾಗಿದ್ದಲ್ಲದೆ ಕಿಟಕಿ ಬಾಗಿಲ ಗ್ಲಾಸ್ಗಳು ಫೀಸ್ ಫೀಸ್ ಆಗಿವೆ. ನೆನ್ನೆ ರಾತ್ರಿ ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿಯೊಬ್ಬರನ್ನ ಭೇಟಿಗೆ ಬಂದಿದ್ದ ಮೂರು ಜನ ಯುವಕರಿಗೆ ವೈದ್ಯರಾದ ಡಾ.ಶ್ರೀನಿವಾಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಮಂಜುನಾಥ್, ಲೋಕೇಶ್ ಹಾಗೂ ಮನೋಜ್ ಆರೋಪಿಸಿದ್ದಾರೆ.
ಅಲ್ಲದೆ ನಮ್ಮನ್ನ ಬಾಯಿಗೆ ಬಂದಹಾಗೆ ಬೈದಿದ್ದಾರೆ, ನಮ್ಮ ಮೊಬೈಲ್ ಕಸಿದು ನಾವು ಮಾಡಿದ ಎಲ್ಲಾ ವಿಡಿಯೋಗಳನ್ನ ಡಿಲೀಟ್ ಮಾಡಿಸಿದ್ದಲ್ಲದೆ ನಮ್ಮನ್ನ ಕೆಲ ಕಾಲ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಯುವಕರು ಆರೋಪಿಸಿದ್ದಾರೆ.
ಆದರೆ, ಆಸ್ಪತ್ರೆಯವರು ಹೇಳೋ ವಿಷ್ಯನೇ ಬೇರೆ, ಕೋವಿಡ್ ಹಾಗೂ ನಾನ್ ಕೋವಿಡ್ ಆಸ್ಪತ್ರೆಗೆ ಏಕಾ ಏಕಿ ಮೂರು ಜನ ಯುವಕರು ನುಗ್ಗಿದರು, ಇದರಿಂದ ನಿಮಗೂ ಹಾಗೂ ನಿಮ್ಮ ಕಡೆಯ ರೋಗಿಗು ಸೋಂಕು ಹರಡುವ ಸಾಧ್ಯತೆ ಇರುತ್ತೆ ಎಂದು ಬೈದರಂತೆ, ಅಲ್ಲದೆ ಇವರನ್ನ ಒಟ್ಟಿಗೆ ಯಾಕೆ ಒಳಗೆ ಬಿಟ್ಟಿರಿ ಎಂದು ಸೆಕ್ಯುರಿಟಿಗಳಿಗೆ ಬೈದರಂತೆ, ಇಷ್ಟಕ್ಕೆ ಕುಪಿತಗೊಂದ ಯುವಕರು ವೈದ್ಯರ ವಿರುದ್ದ ಹರಿಹಾಯ್ದರಂತೆ, ಈ ವೇಳೆ ಸೆಕ್ಯುರಿಟಿಗಳು ಹಾಗೂ ಇವರ ನಡುವೆ ಮಾತಿಗೆ ಮಾತು ಸಹ ಬೇಳೆದು, ಪರಸ್ಪರ ಕೈ ಮಿಲಾಯಿಸಿಕೊಂ ಡರಂತೆ. ಈ ತಿಕ್ಕಾಟವನ್ನ ಅವರು ಹಲ್ಲೆ ಎಂದಿ ಬಿಂಬಿಸುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಪರೋಕ್ಷವಾಗಿ ಹಲ್ಲೆಯಾಗಿರುವುದನ್ನ ಒಪ್ಪಿಕೊಂಡಿದ್ದಾರೆ.
ಒಟ್ಟಾರೆ ಎರಡು ಕೈ ಸೇರಿ ಚಪ್ಪಾಳೆ ಅನ್ನುವಂತೆ ಇಬ್ಬರ ತಿಕ್ಕಾಟದಿಂದ ಈ ಘಟನೆ ನಡೆದಿರಬಹುದು ಎಂದು ಊಹಿಸಬಹುದು. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಹಲ್ಲೆಗೊಳಗಾದವರು ಈಗಾಗಲೆ ನೆಲಮಂಗಲ ನಗರ ಠಾಣೆಗೆ ಪ್ರತ್ಯೇಕ ದೂರು ಸಲ್ಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ