• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PUBG: ಪಬ್​ಜಿ ಹುಚ್ಚು; ಗೇಮ್ ಚಾಲೆಂಜ್​ಗಾಗಿ ತಲೆಗೂದಲನ್ನು ವಿಕಾರವಾಗಿ ಕತ್ತರಿಸಿಕೊಂಡ ಉಪ್ಪಿನಂಗಡಿ ಬಾಲಕ

PUBG: ಪಬ್​ಜಿ ಹುಚ್ಚು; ಗೇಮ್ ಚಾಲೆಂಜ್​ಗಾಗಿ ತಲೆಗೂದಲನ್ನು ವಿಕಾರವಾಗಿ ಕತ್ತರಿಸಿಕೊಂಡ ಉಪ್ಪಿನಂಗಡಿ ಬಾಲಕ

ಪಬ್​ಜಿ

ಪಬ್​ಜಿ

ಉಪ್ಪಿನಂಗಡಿಯ ಖಾಸಗಿ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಯೋರ್ವನ ತಲೆಕೂದಲು  ವಿಕಾರವಾಗಿ ತೆಗೆಯಲಾಗಿರುವುದನ್ನು ಹೆತ್ತವರು ಗಮನಿಸಿ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾರೆ.

  • Share this:

ಪುತ್ತೂರು (ಏ. 7): ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಪಬ್ ಜೀ ಗೇಮ್ ಹಳ್ಳಿಗಳಲ್ಲಿ ಮತ್ತೆ ಪ್ರಚಾರದಲ್ಲಿದೆ. ಪಬ್ ಜಿ ಗೇಮ್ ಅನ್ನು ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರಗಳು ಹೇಳಿದ್ದರೂ, ವಾಸ್ತವದಲ್ಲಿ ನಡೆಯುತ್ತಿರುವ ವಿಚಾರವೇ ಬೇರೆಯಾಗಿದೆ.  ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ  ಪಬ್ ಜೀ ಗೇಮ್ ನಿಂದಾಗಿ ಬಾಲಕನೋರ್ವನ ಕೊಲೆ ನಡೆದ ಘಟನೆ ಮಾಸುವ ಮೊದಲೇ ಪಬ್ ಜೀ ಗೇಮ್ ಆಧಾರಿತ ಇಂಥಹುದೇ ಒಂದು ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯ ಪ್ರೌಢ ಶಾಲಾ ವಿದ್ಯಾರ್ಥಿಯೋರ್ವ ಪಬ್ ಜೀ ಪ್ರೀ ಪೈಯರ್ ಗೇಮ್ ಆಡಿಕೊಂಡು ಕಲೆಕೂದಲನ್ನು ಕತ್ತರಿಸಿಕೊಂಡ ಘಟನೆ ವರದಿಯಾಗಿದ್ದು, ಈ ಸಂಬಂಧ ಉಪ್ಪಿನಂಗಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು  ತನಿಖೆ ನಡೆಸಲಾಗುತ್ತಿದ್ದಾರೆ.


ಉಪ್ಪಿನಂಗಡಿಯ ಖಾಸಗಿ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಯೋರ್ವನ ತಲೆಕೂದಲು  ವಿಕಾರವಾಗಿ ತೆಗೆಯಲಾಗಿರುವುದನ್ನು ಹೆತ್ತವರು ಗಮನಿಸಿ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾರೆ. ಮೊದ ಮೊದಲು ಅನ್ಯ ಕೋಮಿನ ಹುಡುಗರ ಹೆಸರನ್ನು ಹೇಳತೊಡಗಿದ್ದ. ಹುಡುಗರು ತನ್ನನ್ನು ಗುಡ್ಡದ ಪ್ರದೇಶಕ್ಕೆ ಕರೆದೊಯ್ದು , ಒತ್ತಾಯಪೂರ್ವಕವಾಗಿ ತನ್ನ ತಲೆಗೂದಲನ್ನು ತೆಗೆದಿರುವುದಾಗಿ ಬಾಲಕ ಪೋಷಕರಲ್ಲಿ ತಿಳಿಸಿದ್ದ. ಕೂದಲು ತೆಗೆದ ಜಾಗವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಇದಕ್ಕೆ ಸಂಬಂಧಪಟ್ಟ ಯಾವುದೇ ಸುಳಿವು ಪೋಷಕರಿಗೆ ಸಿಕ್ಕಿರಲಿಲ್ಲ. ಬಳಿಕ ಮತ್ತೆ ಬಾಲಕನನ್ನು  ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ತಾನೇ ಪಬ್ ಜೀ ಆಟವಾಡುತ್ತಾ ಫ್ರೀ ಪೈಯರ್ ಆಟದಡಿ ಮೊಬೈಲ್ ಮುಂಭಾಗದಲ್ಲಿ ತಲೆ ಕೂದಲು ತೆಗೆದಿರುವುದಾಗಿ ತಿಳಿಸಿದ್ದಾನೆ. ಮನೆಯನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೂದಲು ತೆಗೆದಿರುವುದಕ್ಕ ಪುರಾವೆಯೂ ಪೋಷಕರಿಗೆ ಸಿಕ್ಕಿದೆ.


ವಿದ್ಯಾರ್ಥಿಯ ಈ ಕೃತ್ಯದಿಂದ ಕಂಗೆಟ್ಟ ಪೋಷಕರು ಈ  ಪ್ರಕರಣವನ್ನು ಪೋಲೀಸರ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ಆರಂಭಿಸಿದ ಉಪ್ಪಿನಂಗಡಿ ಪೋಲೀಸರಿಗೆ  ಈ ಕ್ರೀಡೆಯ ಹಿಂದೆ ಇನ್ನಷ್ಟು ಮಕ್ಕಳು  ಭಾಗಿಯಾಗಿರುವುದು ಕಂಡು ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೆÇಲೀಸರು ಈ ಕೃತ್ಯದಲ್ಲಿನ ಎಲ್ಲಾ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನು ಓದಿ: ಚೆಕ್​ಬೌನ್ಸ್​ ಪ್ರಕರಣ; ತಾರಾ ದಂಪತಿ ಶರತ್​ ಕುಮಾರ್​-ರಾಧಿಕಾಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ


ಈ ಮಧ್ಯೆ ವಿದ್ಯಾರ್ಥಿಗಳ ಈ ಹುಚ್ಚಾಟಕ್ಕೆ ಆನ್ ಲೈನ್ ಶಿಕ್ಷಣದ ಕಾರಣಕ್ಕೆ ದೊರೆತ ಮೊಬೈಲ್ ಗಳೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಮಕ್ಕಳಿಗೆ ಕೊರೋನಾ ವೈರಸ್ ತಗುಲಿದರೂ ಚಿಂತಿಲ್ಲ. ದಯವಿಟ್ಟು ಶಾಲೆಯಲ್ಲೇ ಶಿಕ್ಷಣ ಕೊಡಿಸಿ ಎನ್ನುವ ಒತ್ತಾಯಗಳೂ ಈ ಘಟನೆಯ ಬಳಿಕ ಕೇಳಿ ಬರಲಾರಂಭಿಸಿದೆ . ಮೊಬೈಲ್ ನಿಂದ ಮಕ್ಕಳನ್ನು ಸಾಯುವಂತೆ ಮಾಡಬಾರದೆಂದು ಉಪ್ಪಿನಂಗಡಿ ಪೋಲಿಸ್ ಠಾಣೆಯ ಮುಂದೆಯೇ ಪೋಷಕರೊಬ್ಬರು ಗೋಳಾಡಿಕೊಂಡಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುವಂತಿತ್ತು.


ನಿಷೇಧಕ್ಕೊಳಗಾಗಿರುವ ಪಬ್ ಜೀ ಇದೀಗ ಹೊಸ ಮಾದರಿಯಲ್ಲಿ ಹದಿಹರೆಯದ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ, ಹೆಚ್ಚಾಗಿ ಮಕ್ಕಳೇ ಇದಕ್ಕೆ ಬಲಪಶುವಾಗುತ್ತಿದ್ದಾರೆ. ನಗರ ಪ್ರದೇಶದಲ್ಲೇ ಹೆಚ್ಚು ಸುದ್ಧಿ‌ ಮಾಡುತ್ತಿದ್ದ ಪಬ್ ಜೀ ಇದೀಗ ಉಪ್ಪಿನಂಗಡಿಯಂತಹ ಗ್ರಾಮೀಣ ಭಾಗದಲ್ಲೂ ತನ್ನ ಕರಿಛಾಯೆಯನ್ನು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದೇ ವಯೋಮಾನದ, ಒಂದೇ ಯೋಚನೆಯ ಮಕ್ಕಳೇ ಈ ಗೇಮ್ ನ ದಾಸರಾಗುತ್ತಿದ್ದು, ಪೋಲೀಸರಿಗೂ ಇಂಥ ಸಮಯದಲ್ಲಿ ಪ್ರಕರಣವನ್ನು ಭೇಧಿಸುವುದು ಕಷ್ಟ ಸಾಧ್ಯವಾಗುತ್ತಿದೆ.

Published by:Seema R
First published: