• Home
  • »
  • News
  • »
  • state
  • »
  • Untouchability: ದಲಿತ ಮಹಿಳೆ ಮೇಲಿನ ದೌರ್ಜನ್ಯಕ್ಕೆ ಸಿಡಿದೆದ್ದ ಯುವಕರು, ಗ್ರಾಮದ ಎಲ್ಲಾ ಟ್ಯಾಂಕ್‌ಗಳ ನೀರು ಕುಡಿದು ತಿರುಗೇಟು!

Untouchability: ದಲಿತ ಮಹಿಳೆ ಮೇಲಿನ ದೌರ್ಜನ್ಯಕ್ಕೆ ಸಿಡಿದೆದ್ದ ಯುವಕರು, ಗ್ರಾಮದ ಎಲ್ಲಾ ಟ್ಯಾಂಕ್‌ಗಳ ನೀರು ಕುಡಿದು ತಿರುಗೇಟು!

ಗ್ರಾಮದ ಎಲ್ಲಾ ಟ್ಯಾಂಕ್​ಗಳಲ್ಲಿ ನೀರು ಕುಡಿದ ಯುವಕರು

ಗ್ರಾಮದ ಎಲ್ಲಾ ಟ್ಯಾಂಕ್​ಗಳಲ್ಲಿ ನೀರು ಕುಡಿದ ಯುವಕರು

ಸಭೆ ಬಳಿಕ ತಹಶೀಲ್ದಾರ್​ ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ.‌ ಜೊತೆಗೆ, ತೊಂಬೆಗಳ ಮೇಲೆ ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು ಎಂದು ಬರೆಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಚಾಮರಾಜನಗರ (ನ. 20): ದಲಿತ ಮಹಿಳೆ (Dalith Women) ನೀರು ಕುಡಿದರೆಂದು ಇಡೀ ಟ್ಯಾಂಕ್  ಸ್ವಚ್ಛ (Tank Clean) ಮಾಡಿಗೊಳಿಸಿದ್ದ ಘಟನೆ ನಿನ್ನೆ ಚಾಮರಾಜನಗರ (Chamarajanagar) ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸಿ ಗೀತಾ ಹುಡೇದ, ಚಾಮರಾಜನಗರ ತಹಶೀಲ್ದಾರ್​​ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು (Officers) ಗ್ರಾಮಕ್ಕೆ ತೆರಳಿ ಸಭೆ ನಡೆಸಿದ್ದರು.


untouchability dalith youths drank water in all tanks in chamarajanagara pvn


ಇದೊಂದು ಅಮಾನವೀಯ ಘಟನೆ


ಸರಗೂರಿನಿಂದ ಬಂದಿದ್ದ ಯುವಕರು ಮಹಿಳೆ ನೀರು ಕುಡಿದಿದ್ದಕ್ಕೆ ನಿಮ್ಮ ಊರಿನ ಜನರು ಸ್ವಚ್ಛ ಮಾಡಿಸಿದರು ಎಂದು ಹೆಗ್ಗೋಠಾರ ಗ್ರಾಮದ ದಲಿತ  ಯುವಕರಿಗೆ ಮಾಹಿತಿ ನೀಡಿದ್ದಾರೆ. ತಹಶೀಲ್ದಾರ್​ ಮುಂದೆ ಆ ಯುವಕ ಅಮಾನವೀಯ ಘಟನೆ ನಡೆಯಿತು ಎಂದು ಸರಗೂರು ಗ್ರಾಮದವರು ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.


ಗ್ರಾಮದ ಟ್ಯಾಂಕ್​ಗಳಲ್ಲಿ ನೀರು ಕುಡಿದ ದಲಿತ ಯುವಕರು


ಸಭೆ ಬಳಿಕ ತಹಶೀಲ್ದಾರ್​ ಬಸವರಾಜು ಅವರು ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ.‌ ಜೊತೆಗೆ, ತೊಂಬೆಗಳ ಮೇಲೆ ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು ಎಂದು ಬರೆಸಿದ್ದಾರೆ.


ಮಹಿಳೆ ಪತ್ತೆ ಹಚ್ಚಿ ಕಾನೂನು ಕ್ರಮ


ಗ್ರಾಮದ ಯುವಕನಿಂದ ದೂರೊಂದನ್ನು ಪಡೆದಿದ್ದು, ನೊಂದ ಮಹಿಳೆಯನ್ನು ಪತ್ತೆಹಚ್ಚಲು ತಾಲೂಕು ಆಡಳಿತ ಮುಂದಾಗಿದೆ. ಬಳಿಕ, ಆ ಮಹಿಳೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.


ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎನ್ನಲಾಗ್ತಿದೆ.


ಲಿಂಗಾಯತರ ಬೀದಿಯ ನಲ್ಲಿಯಲ್ಲಿ ನೀರು ಕುಡಿದ ಮಹಿಳೆ


ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನ ಮದುವೆ ಶುಕ್ರವಾರ (ನ.18) ಗ್ರಾಮದಲ್ಲಿ ನಡೆದಿತ್ತು. ವಧುವಿನ ಕಡೆಯವರು ಎಚ್‌.ಡಿ ಕೋಟೆ ತಾಲೂಕಿನ ಸರಗೂರಿನಿಂದ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಲಿಂಗಾಯತರ ಬೀದಿಯಲ್ಲಿರುವ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ.


ಗೋಮೂತ್ರ ಹಾಕಿ ಟ್ಯಾಕ್​ ಸ್ವಚ್ಛ


ಮಹಿಳೆ ನೀರು ಕುಡಿಯುತ್ತಿರುವುದನ್ನು ಅದೇ ರಸ್ತೆಯಲ್ಲಿರುವ ಯಾರೋ ಇದನ್ನು ನೋಡಿದ್ದಾರೆ. ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ಆಕೆಗೆ ಬೈದಿದ್ದಾರೆ. ನಂತರ ಎಲ್ಲಾ ನಲ್ಲಿಯನ್ನು ತೆರೆದು ನೀರು ಖಾಲಿ ಮಾಡಿ ಗೋಮೂತ್ರ ಹಾಕಿ ಸ್ವಚ್ಛಗೊಳಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.


20ಕ್ಕೂ ಹೆಚ್ಚು ಯುವಕರು ಕೊಟ್ರು ಲಿಖಿತ ಮಾಹಿತಿ


ಶನಿವಾರ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ 20ಕ್ಕೂ ಹೆಚ್ಚು ಯುವಕರು ಘಟನೆ ನಡೆದಿರುವ ಬಗ್ಗೆ ಲಿಖಿತವಾಗಿ ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ:  Autorickshaw Explodes: ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ


ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ


ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ತಾಲೂಕು ತಹಶೀಲ್ದಾರ್‌ ಐ.ಇ.ಬಸವರಾಜು ಈ ಬಗ್ಗೆ ಮಾಹಿತಿ ಬಂದಿದೆ. ಶನಿವಾರ ಕಂದಾಯ ನಿರೀಕ್ಷಕರನ್ನು ಕಳುಹಿಸಿ ವರದಿ ಪಡೆದಿದ್ದೇನೆ.


ಅದರ ಆಧಾರದಲ್ಲಿ, ಗ್ರಾಮಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಿ ಸಮಗ್ರ ವರದಿ ನೀಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸುತ್ತೇನೆ ಎಂದಿದ್ರು.

Published by:ಪಾವನ ಎಚ್ ಎಸ್
First published: