ಕುಸಿದ ಮನೆಯಲ್ಲಿಯೇ ಬದುಕು ಸಾಗಿಸುತ್ತಿರುವ ನೆರೆ ಸಂತ್ರಸ್ತರು; ಕಣ್ಣು ಮುಚ್ಚಿ ಕುಳಿತ ಸರ್ಕಾರ!

ಹಿರೇ ಹಂಪಿಗೊಳಿ ಗ್ರಾಮದಲ್ಲಿ ನೂರಾರು ಮನೆಗಳು ಬಿದಿದ್ದು, ತಾತ್ಕಾಲಿಕ ಶೆಟ್ ನಿರ್ಮಾಣ ಇನ್ನೂ ಆಗಿಲ್ಲ. ಇಲ್ಲಿನ ಸಂತ್ರಸ್ತರು ಗ್ರಾಮದ ವಾಲ್ಮೀಕಿ ಸಮೂದಾಯ ಭವನದಲ್ಲಿಯೇ ಕಳೆದ 5 ತಿಂಗಳಿಂದ ಇದ್ದಾರೆ.

news18-kannada
Updated:January 8, 2020, 7:58 AM IST
ಕುಸಿದ ಮನೆಯಲ್ಲಿಯೇ ಬದುಕು ಸಾಗಿಸುತ್ತಿರುವ ನೆರೆ ಸಂತ್ರಸ್ತರು; ಕಣ್ಣು ಮುಚ್ಚಿ ಕುಳಿತ ಸರ್ಕಾರ!
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ(ಜ.08) : ಬೆಳಗಾವಿ ಜಿಲ್ಲೆ ಪ್ರವಾಹ  ಹಾಗೂ ಮಹಾಮಳೆಗೆ ಸಿಕ್ಕು 5 ತಿಂಗಳು ಕಳೆದಿದೆ. ಇನ್ನೂ ಅದೆಷ್ಟೊ ಕುಟುಂಬಗಳು ಬೀದಿಯಲ್ಲಿ ಜೀವನ ನಡೆಸುತ್ತಿವೆ. ಬಿದ್ದ ಮನೆಯಲ್ಲಿ ಬಾಣಂತಿಯೊಬ್ಬರು ಕಳೆದ 5 ತಿಂಗಳಿಂದ ವಾಸಿಸುತ್ತಿದ್ದಾರೆ. ಜಿಲ್ಲಾಡಳಿತ ಅನೇಕ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಿದೆ. ಆದರೇ ಇನ್ನೂ ಅನೇಕ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ  ಸಿಕ್ಕಿಲ್ಲ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೊಲಾರಕೊಪ್ಪ ಗ್ರಾಮದಲ್ಲಿ ಬಾಂಣತಿಗೆ ಇರೋಕೆ ಮನೆ ಇಲ್ಲ ಹೀಗಾಗಿ ಬಿದ್ದ ಮನೆಯಲ್ಲಿಯೇ ಜೀವ ನಡೆಸುತ್ತಿದ್ದಾರೆ. ಕಳೆದ ಆಗಷ್ಟ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಚಂದ್ರ್ಪ ನಾಗಪ್ಪ ಕಂಬಾರ ಎಂಬುವರ ಬಿದ್ದಿತ್ತು. ಮನೆಯ ಗೋಡೆ ಮಾತ್ರ ಬಿದ್ದಿದೆ ಎಂದು ಸರ್ಕಾರ ಕೇವಲ 25 ಸಾವಿರ ರೂಪಾಯಿ ಪರಿಹಾರ ವಿತರಣೆ ಮಾಡಿದೆ.

25 ಸಾವಿರ ಹಣದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಬಿದ್ದ ಮನೆಯಲ್ಲಿಯೇ ಬಾಣಂತಿ ಹಾಗೂ ಹಸುಗೂಸ ಜೀವನ ನಡೆಸುತ್ತಿದ್ದಾರೆ. ಈ ಪುಟ್ಟ ಗ್ರಾಮದಲ್ಲಿ ಬಾಡಿಗೆಗೆ ಮನೆ ಸಿಗೋದು ಕಷ್ಟ. ಹೀಗಾಗಿ ಬಿದ್ದ ಮನೆಯಲ್ಲಿಯೆ ವಾಸವಿದ್ದೇನೆ. ಸರ್ಕಾರ ಬಿದ್ದ ಮನೆಯಲ್ಲಿ ಸಿ ಕೆಟಗರಿಯಲ್ಲಿ ಹಾಕಿ ಪರಿಹಾರ ವಿತರಣೆ ಮಾಡಿದೆ. ನಮಗೆ ಮನೆ ನಿರ್ಮಾಣಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರ ಆಗ್ರಹವಾಗಿದೆ.

ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಮನೆಯೊಂದು ಬಿದ್ದು ಹೋಗಿದ್ದು, ಮನೆಯ ವಾಸಿಗಳು ಮನೆಯ ಬಾಗಿಲು ತೆಗೆಯಲು ಸಾಧ್ಯವಾಗುತ್ತಿಲ್ಲ. ಕಳೆದ 5 ತಿಂಗಳಿಂದ ಜಮೀನಿನಲ್ಲಿ ಜನುವಾರಿಗೆ ಹಾಕಿದ್ದ ಶೆಟ್ ನಲ್ಲಿಯೇ ಜೀವ ನಡೆಸುತ್ತಿದ್ದಾರೆ. ಪ್ರವಾಹ ಬರೋ ಸಂದರ್ಭದಲ್ಲಿ ಅಲ್ಪಸ್ವಲ ಸಮಾನು ತೆಗೆದುಕೊಂಡು ಮನೆ ಬಿಟ್ಟು ಹೊಗಿದ್ದಾರೆ. ಮನೆ ಸಂಪೂರ್ಣವಾಗಿ ಕುಸಿದಿದ್ದು, ಮನೆಯ ಬಾಗಿಲು ತೆಗೆಯಲು ಸಾಧ್ಯವೆ ಆಗಿಲ್ಲ. ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಮನೆಯ ವಾಸಿ ರುಕಮವ್ವ ಅಳಲು ತೊಡಿಕೊಂಡಿದ್ದಾರೆ.

ಹಿರೇ ಹಂಪಿಗೊಳಿ ಗ್ರಾಮದಲ್ಲಿ ನೂರಾರು ಮನೆಗಳು ಬಿದಿದ್ದು, ತಾತ್ಕಾಲಿಕ ಶೆಟ್ ನಿರ್ಮಾಣ ಇನ್ನೂ ಆಗಿಲ್ಲ. ಇಲ್ಲಿನ ಸಂತ್ರಸ್ತರು ಗ್ರಾಮದ ವಾಲ್ಮೀಕಿ ಸಮೂದಾಯ ಭವನದಲ್ಲಿಯೇ ಕಳೆದ 5 ತಿಂಗಳಿಂದ ಇದ್ದಾರೆ. ನಮಗೆ ಮನೆ ಇಲ್ಲ ಕೂಲಿ ಕೆಲಸಕ್ಕೆಹೋಗಣ ಅಂದ್ರೆ ಯಾರೊಬ್ಬರು ಕರಿಯುತ್ತಿಲ್ಲ. ಕೂಲಿ ಕೆಲಸಕ್ಕೆ ಪಕ್ಕದ ನವಲಗುಂದಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬಿಳಿ ಬಟ್ಟೆ ಹಾಕಿಕೊಂಡು ಬರೋ ಜನ ಸಮಾಧಾನದ ಔಷಧಿ ಕೊಟ್ಟು ಹೋಗುತ್ತಾರೆ. ಆದರೇ ಈ ವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಸಾಂವಕ್ಕ ಎನ್ನುವ ಮಹಿಳೆ.

ಇದನ್ನೂ ಓದಿ : ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲು ಮೌಲ್ಯಮಾಪನ ಪರೀಕ್ಷೆ ; ಸಚಿವ ಸುರೇಶ್ ಕುಮಾರ್

ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಪುನರ್ ವಸತಿ ಸರಿಯಾಗಿ ಸಿಕ್ಕಿಲ್ಲ. ವರುಣನ ಆರ್ಭಟಕ್ಕೆ ಮನೆ ಕಳೆದುಕೊಂಡು ಅದೆಷ್ಟೋ ಜನ ಇನ್ನೂ ಬೀದಿಯಲ್ಲಿಯೇ ಬದುಕುತ್ತಿದ್ದಾರೆ. ಕೇಂದ್ರಿಂದ ಎರಡನೇ ಕಂತಿನ ಹಣ ಬಿಡುಗಡೆಯಾಗಿದ್ದು ಸಂತ್ರಸ್ತರಿಗೆ ಇನ್ನಾದರೂ ಪರಿಹಾರ ಸಿಗಲಿದೆ ಎಂದು ಸಂತ್ರಸ್ತರು ಎದುರು ನೋಡುತ್ತಿದ್ದಾರೆ.

 
First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ