• Home
  • »
  • News
  • »
  • state
  • »
  • Putturu: ನೂತನ ತಾಲೂಕಿಗೆ ಅವೈಜ್ಞಾನಿಕ ಸೇರ್ಪಡೆ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಹ ಸ್ಥಿತಿ ತಲುಪಿದ ಪುತ್ತೂರಿನ ಗ್ರಾಮ

Putturu: ನೂತನ ತಾಲೂಕಿಗೆ ಅವೈಜ್ಞಾನಿಕ ಸೇರ್ಪಡೆ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಹ ಸ್ಥಿತಿ ತಲುಪಿದ ಪುತ್ತೂರಿನ ಗ್ರಾಮ

ಗ್ರಾಮಸ್ಥರಿಂದ ಪ್ರತಿಭಟನೆ

ಗ್ರಾಮಸ್ಥರಿಂದ ಪ್ರತಿಭಟನೆ

ಸಂಸದ ನಳಿನ್ ಕುಮಾರ್ ಕಟೀಲ್ ಅವರ ತವರು ಗ್ರಾಮವೂ ಇದೇ ಆಗಿದ್ದು, ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳಿಗೆ ಮನವಿ ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆಕ್ರೋಶವೂ ಗ್ರಾಮಸ್ಥರಲ್ಲಿದೆ. 

  • News18 Kannada
  • Last Updated :
  • Puttur, India
  • Share this:

ತನ್ನ ಕೂಲಿ, ಕೃಷಿ ಕೆಲಸದಲ್ಲಿ ನಿಶ್ಚಿಂತೆಯಿಂದ ಇದ್ದ ಗ್ರಾಮದ ಜನರಿಗೀಗ (Villagers) ಸಂಕಷ್ಟವೊಂದು ಎದುರಾಗಿದೆ. ತಮ್ಮ ಸರಕಾರಿ ಕೆಲಸಗಳಿಗಾಗಿ ಪಕ್ಕದಲ್ಲೇ ಇದ್ದ ತಾಲೂಕು ಕೇಂದ್ರವನ್ನು (Taluka Centre) ಬಿಟ್ಟು ಇದೀಗ ಸುತ್ತಿ ಬಳಸಿ ತಾಲೂಕು ಕೇಂದ್ರವನ್ನು ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ. ಹೌದು ಇದು ದಕ್ಷಿಣ ಕನ್ನಡ ಜಿಲ್ಲೆಯ ‌ಕಡಬ (Kadaba, Dakshina Kannada) ತಾಲೂಕಿನ ಪಾಲ್ತಾಡು (Paltadu) ಮತ್ತು ಪುಣ್ಚಪ್ಪಾಡಿ (panchapadi) ಗ್ರಾಮದ ಜನರ ಬವಣೆಯಾಗಿದ್ದು, ನೂತನವಾಗಿ ರಚನೆಗೊಂಡ ತಾಲೂಕಿನಿಂದಾಗಿ (New Taluka) ಇಲ್ಲಿನ ಜನ ಸಂತಸಪಡುವ ಬದಲು, ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. 


ತನ್ನ ಸರಕಾರ ಸಂಬಂಧಿ ಕೆಲಸ ಕಾರ್ಯಗಳಿಗಾಗಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿಗೆ ಸೇರಿದ್ದ ಪಾಲ್ತಾಡು ಮತ್ತು ಪುಣ್ಚಪ್ಪಾಡಿ ಗ್ರಾಮದ ಜನ ಸುಮಾರು 25 ಕಿಲೋಮೀಟರ್ ಬಳಸಿ ಪುತ್ತೂರು ತಾಲೂಕು ಕೇಂದ್ರವನ್ನು ಸಂಪರ್ಕಿಸುತ್ತಿದ್ದರು.


ನೂತನ ತಾಲೂಕಿಗೆ ಗ್ರಾಮಗಳ ಸೇರ್ಪಡೆ


ಇತ್ತೀಚೆಗೆ ರಾಜ್ಯ ಸರಕಾರ ಕಡಬವನ್ನು ನೂತನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸುಳ್ಯ ಹಾಗೂ ಪುತ್ತೂರು ತಾಲೂಕಿನ ಕೆಲವು ಗ್ರಾಮಗಳನ್ನು ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಳಿಸಲಾಗಿತ್ತು.


ಈ ಸೇರ್ಪಡೆಗೊಂಡ ಗ್ರಾಮಗಳಲ್ಲಿ ಪಾಲ್ತಾಡು  ಮತ್ತು ಪುಣ್ಚತ್ತಾಡಿ ಗ್ರಾಮಗಳೂ ಸೇರ್ಪಡೆಗೊಂಡಿದ್ದು, ಈ ಸೇರ್ಪಡೆ ಇದೀಗ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿದೆ. ಕೇವಲ 20 ಕಿಲೋಮೀಟರ್ ಕ್ರಮಿಸಿ ತಮ್ಮ ಸರಕಾರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದ ಈ ಗ್ರಾಮದ ಜನ ಇದೀಗ ಈ ಕೆಲಸಕ್ಕಾಗಿ ಸುಮಾರು 60 ಕಿಲೋಮೀಟರ್ ದೂರದ ಕಡಬ ತಾಲೂಕು ಕೇಂದ್ರವನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಎದುರಾಗಿದೆ.


ಪಾಲ್ತಾಡು ಹಾಗು ಪುಣ್ಚಪ್ಪಾಡಿ ಗ್ರಾಮದಿಂದ ಕಡಬಕ್ಕೆ ಬಸ್ ಸಂಪರ್ಕವೂ ಇಲ್ಲದ ಕಾರಣ ಯಾವುದೇ ಸ್ವಂತ ವಾಹನವಿಲ್ಲದ ಬಡ ಗ್ರಾಮಸ್ಥರು ಸುತ್ತು ಬಳಸಿ ತಾಲೂಕು ಕೇಂದ್ರವನ್ನು ತಲುಪಬೇಕಾದ ಸ್ಥಿತಿಯಿದೆ.


ಬಸ್​ ಪ್ರಯಾಣಕ್ಕೆ ಬೇಕು 200 ರೂಪಾಯಿ


ಕೇವಲ 50 ರೂಪಾಯಿಯಲ್ಲಿ ಪುತ್ತೂರು ತಾಲೂಕು ಕೇಂದ್ರ ತಲುಪುತ್ತಿದ್ದ ಈ ಭಾಗದ ಜನ, ಇದೀಗ 200 ರೂಪಾಯಿಗಳನ್ನು ಕೇವಲ ಬಸ್ ಗಾಗಿಯೇ ಮೀಸಲಿಡಬೇಕಾಗಿದೆ. ಕೃಷಿ ಮತ್ತು ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದೂರದ ತಾಲೂಕು ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಸರಕಾರಿ ಕಚೇರಿಯಾಗಿರುವ ಕಾರಣ ಒಂದೇ ದಿನದಲ್ಲಿ ಕೆಲಸ ಮುಗಿಯೋದು ಸಂಶಯವೇ ಆದ ಕಾರಣ ಒಂದು ಸಣ್ಣ ಕೆಲಸಕ್ಕಾಗಿ ಹತ್ತಾರು ಬಾರಿ ತಾಲೂಕು ಕೇಂದ್ರವನ್ನು ಅಲೆದಾಡಿದ ಹಲವು ಗ್ರಾಮಸ್ಥರು ಇದೀಗ ತಮ್ಮ ಗ್ರಾಮವನ್ನು ಮತ್ತೆ ಪುತ್ತೂರು ತಾಲೂಕು ಕೇಂದ್ರಕ್ಕೆ ಸೇರ್ಪಡೆಗೊಳಿಸಬೇಕೆಂದು ಪಟ್ಟು ಹಿಡಿಯಲಾರಂಭಿಸಿದ್ದಾರೆ.


ಸಣ್ಣ ಕೆಲಸಕ್ಕೂ ಅಲೆದಾಡುವ ಪರಿಸ್ಥಿತಿ


ಸಣ್ಣ ಕೆಲಸಕ್ಕಾಗಿ ಮೂರು, ನಾಲ್ಕು ದಿನ ಕೆಲಸ ಬಿಟ್ಟು ದೂರದ ತಾಲೂಕು ಕೇಂದ್ರಕ್ಕೆ ಅಲೆಯಬೇಕಾಗಿದ್ದು, ನಾಲ್ಕು ದಿನ ಆ ಕುಟುಂಬಕ್ಕೆ ಅನ್ನವೂ ಸಿಗದಂತಹ ಸ್ಥಿತಿಯೂ ಇದೆ. ಅಲ್ಲದೆ ಒಂಟಿ ಮಹಿಳೆಯಿರುವ ಮನೆಯ ಮಹಿಳೆಯ ಪಾಡು ಕೇಳುವವರಿಲ್ಲ ಎನ್ನುವುದು ಗ್ರಾಮದ ಮಹಿಳೆಯರ ಅಳಲಾಗಿದೆ.


ಇದನ್ನೂ ಓದಿ:  Raju Gowda: ಸಿದ್ದರಾಮಯ್ಯಗೆ ಶ್ರೀರಾಮುಲು ಮೇಲೆ ಲವ್ ಆಗಿದೆ; ಶಾಸಕ ರಾಜುಗೌಡ


ಆದಷ್ಟು ಶೀಘ್ರ ಸರಕಾರ ಈ ಆದೇಶವನ್ನು ಹಿಂಪಡೆದು ಎರಡೂ ಗ್ರಾಮಗಳನ್ನು ಮತ್ತೆ ಪುತ್ತೂರು ತಾಲೂಕಿಗೆ ಸೇರ್ಪಡೆಗೊಳಿಸದೇ ಇದ್ದಲ್ಲಿ, ವಿಧಾನಸಭೆಗೂ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ಗ್ರಾಮದ ಜನ ನೀಡಿದ್ದಾರೆ.


ಕಟೀಲ್ ಅವರ ತವರು ಗ್ರಾಮ


ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ತವರು ಗ್ರಾಮವೂ ಇದೇ ಆಗಿದ್ದು, ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳಿಗೆ ಮನವಿ ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆಕ್ರೋಶವೂ ಗ್ರಾಮಸ್ಥರಲ್ಲಿದೆ.


ಇದನ್ನೂ ಓದಿ:  Murugha Swamy Case: ಮುರುಘಾ ಸ್ವಾಮಿ ಕೇಸ್; ಪೊಲೀಸರಿಂದ ಒಡನಾಡಿ ಸಂಸ್ಥೆ ಮುಖ್ಯಸ್ಥರ ವಿಚಾರಣೆ


ನೂತನ ತಾಲೂಕು ಕೇಂದ್ರದ ಸಂಭ್ರಮದಲ್ಲಿ ಕೆಲವು ಗ್ರಾಮಗಳಿದ್ದರೆ, ಪಾಲ್ತಾಡು ಮತ್ತು ಪುಣ್ಚತ್ತಾರು ಗ್ರಾಮಸ್ಥರು ಮಾತ್ರ ಈ ನಿರ್ಧಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

Published by:Mahmadrafik K
First published: