ಜನವಸತಿ ಪ್ರದೇಶದಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ; ಮಾರಣಾಂತಿಕ ಕಾಯಿಲೆಗಳು ಎದುರಾಗುವ ಆತಂಕದಲ್ಲಿ ಭುವನಗಿರಿಯ ಜನರು

ಊಟಕ್ಕೆಂದು ಕುಳಿತರೆ ತಟ್ಟೆಗೆ ಕೈ ಹಿಡುವ ಮೊದಲೇ ನೊಣಗಳು ಮುತ್ತಿಕೊಳ್ಳುತ್ತಿವೆ. ಕಸದ ರಾಶಿಯ ಸುತ್ತಲೂ ಚಿಕ್ಕದಾದ ತಡೆಗೋಡೆ ಇರುವುದರಿಂದ ಕಸದ ರಾಶಿಯಿಂದ ಪ್ಲಾಸ್ಟಿಕ್ ಗಾಳಿಯಲ್ಲಿ ತೂರಾಡಿ ಊರಿಗೆಲ್ಲಾ ಬರುತ್ತಿವೆ. ಇದರಿಂದ ಎಂತಹ ಅಪಾಯಕಾರಿ ಕಾಯಿಲೆಗಳು ಬರುವವೋ ಎಂದು ಇಲ್ಲಿನ ನಿವಾಸಿ ಸುರೇಶ್ ಅವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಸ

ಕಸ

  • Share this:
ಕೊಡಗು(ನ.07): ಕೊರೋನಾ ಬಂದಾಗಿನಿಂದ ಆರೋಗ್ಯ ಇಲಾಖೆ, ಸರ್ಕಾರಗಳು ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಜನರಿಗೆ ಹೇಳುತ್ತಲೇ ಇವೆ. ಆದರೆ ಸ್ವಚ್ಚತೆಗೆ ಆದ್ಯತೆ ಕೊಡಬೇಕಾದ ಸಂಸ್ಥೆಗಳೇ ಬೇಕಾಬಿಟ್ಟಿ ಕಸವಿಲೇವಾರಿ ಮಾಡಿದರೆ ಜನರು ಏನು ಮಾಡೋದು. ಹೌದು, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಭುವನಗಿರಿಯ ನೂರಾರು ಕುಟುಂಬಗಳು ಕುಶಾಲನಗರದ ನೂರಾರು ಟನ್ ಕಸದ ರಾಶಿಯಿಂದ ಹಲವು ರೋಗಗಳಿಗೆ ತುತ್ತಾಗುವ ಆತಂಕಕ್ಕೆ ಎದುರಿಸುತ್ತಿವೆ. ಕುಶಾಲನಗರ ಪಟ್ಟಣದಲ್ಲಿ ನಿತ್ಯ ಹತ್ತಾರು ಲೋಡ್ ಕಸ ಸಂಗ್ರಹಣೆಯಾಗುತ್ತದೆ. ಕಸವನ್ನು ಸಂಗ್ರಹಿಸುವ ಕುಶಾಲನಗರ ಪಟ್ಟಣ ಪಂಚಾಯಿತಿ ಭುವನಗಿರಿಯಲ್ಲಿರುವ ತನ್ನ ಆರು ಎಕರೆ ಪ್ರದೇಶದಲ್ಲಿ ಸುರಿಯುತ್ತಿದೆ. ಪಟ್ಟಣದ ಎಲ್ಲಾ ರೀತಿಯ ಕಸವನ್ನು ಅಲ್ಲಿಗೆ ತಂದು ಸುರಿಯುವುದು ಅಷ್ಟೇ ಅಲ್ಲ, ಅದರ ಜೊತೆಗೆ ಸಾಕಷ್ಟು ಸತ್ತ ಪ್ರಾಣಿಗಳನ್ನು ಅಲ್ಲಿಯೇ ತಂದು ಎಸೆಯುತ್ತಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಆರು ಎಕರೆ ಜಾಗದಲ್ಲಿ ಎಲ್ಲಿ ಸ್ಥಳ ಖಾಲಿ ಇದೆಯೋ ಅಲ್ಲಿಗೆ ಸುರಿದು ಸುಮ್ಮನಾಗುತ್ತಿದೆ. ಇದರಿಂದ ರೋಸಿ ಹೋಗಿರುವ ಇಲ್ಲಿನ ಜನರು ಕಸ ವಿಲೇವಾರಿ ಜಾಗದಲ್ಲಿ ನಿಂತು ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Trending News: ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ತನ್ನನ್ನು ತಾನೇ ಮದುವೆಯಾದ ಯುವಕ

ಕಸ ಸುರಿಯುವ ಜಾಗದ ಸುತ್ತಲೂ ಕೇವಲ ಐದಾರು ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಿದೆ. ತಲತಲಾಂತರದಿಂದಲೂ ಭುವನಗರಿಯಲ್ಲಿ ನೂರಾರು ಕುಟುಂಬಗಳು ಬದುಕುತ್ತಿದ್ದರೂ, ಕುಶಾಲನಗರ ಪಟ್ಟಣ ಪಂಚಾಯಿತಿ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿದೆ. ಹೀಗಾಗಿ ನೂರಾರು ಲೋಡ್ ನಷ್ಟು ಕಸ ಅಲ್ಲಿಯೇ ಕೊಳೆತು ಸಹಿಸಲು ಅಸಾಧ್ಯವಾದ ದುರ್ನಾತ ಬೀರುತ್ತಿದೆ ಎನ್ನೋದು ಸ್ಥಳೀಯರಾದ ನಂಜುಂಡಸ್ವಾಮಿ ಅವರ ಆರೋಪ.

ಕೊಳೆತ ಕಸದ ರಾಶಿಯಿಂದ ನೊಣಗಳು ಬರುತ್ತಿದ್ದು, ಜನರು ಕನಿಷ್ಠ ನೆಮ್ಮದಿಯಿಂದ ಊಟ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಊಟಕ್ಕೆಂದು ಕುಳಿತರೆ ತಟ್ಟೆಗೆ ಕೈ ಹಿಡುವ ಮೊದಲೇ ನೊಣಗಳು ಮುತ್ತಿಕೊಳ್ಳುತ್ತಿವೆ. ಕಸದ ರಾಶಿಯ ಸುತ್ತಲೂ ಚಿಕ್ಕದಾದ ತಡೆಗೋಡೆ ಇರುವುದರಿಂದ ಕಸದ ರಾಶಿಯಿಂದ ಪ್ಲಾಸ್ಟಿಕ್ ಗಾಳಿಯಲ್ಲಿ ತೂರಾಡಿ ಊರಿಗೆಲ್ಲಾ ಬರುತ್ತಿವೆ. ಇದರಿಂದ ಎಂತಹ ಅಪಾಯಕಾರಿ ಕಾಯಿಲೆಗಳು ಬರುವವೋ ಎಂದು ಇಲ್ಲಿನ ನಿವಾಸಿ ಸುರೇಶ್ ಅವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಸವನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಹಲವು ಬಾರಿ ಪ್ರತಿಭಟಿಸಿದ್ದರೂ ಪ್ರಯೋಜವಾಗಿಲ್ಲ. ಕಸವನ್ನು ಕಾಂಪೋಸ್ಟ್ ಗೊಬ್ಬರ ಮಾಡುವುದಾಗಿ ಪಟ್ಟಣ ಪಂಚಾಯಿತಿ ಶೆಡ್ ನಿರ್ಮಿಸಿ ಎರಡು ವರ್ಷಗಳೇ ಕಳೆದಿವೆ. ಅದು ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ ಎನ್ನುವುದು ಗ್ರಾಮಸ್ಥರ ಆಕ್ರೋಶ.
Published by:Latha CG
First published: