ಸಮರ್ಥನೆಗೆ ಸಜ್ಜಾದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು; ಹೈಕಮಾಂಡ್​ಗೆ ಖಡಕ್​ ಪ್ರಶ್ನೆಗಳನ್ನು ಕೇಳಲು ಸಿದ್ಧತೆ


Updated:June 8, 2018, 6:24 PM IST
ಸಮರ್ಥನೆಗೆ ಸಜ್ಜಾದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು; ಹೈಕಮಾಂಡ್​ಗೆ ಖಡಕ್​ ಪ್ರಶ್ನೆಗಳನ್ನು ಕೇಳಲು ಸಿದ್ಧತೆ
ಎಂಬಿ ಪಾಟೀಲ್

Updated: June 8, 2018, 6:24 PM IST
- ನ್ಯೂಸ್​ 18 ಕನ್ನಡ

ಬೆಂಗಳೂರು (ಜೂನ್​ 8): ಚುನಾವಣೆಯಲ್ಲಿ ಬಹುಮತ ಸಿಗದಿದ್ದರೂ ಜೆಡಿಎಸ್​ ಜತೆಗೂಡಿ ಕಷ್ಟದಿಂದ ಸಮ್ಮಿಶ್ರ ಸರ್ಕಾರವನ್ನು ಕಾಂಗ್ರೆಸ್​ ರಚಿಸಿದೆ. ಸರ್ಕಾರ ರಚನೆಯಾಗಿ ಎರಡು ವಾರ ಕಳೆದ ನಂತರ ಮಂತ್ರಿ ಮಂಡಲ ವಿಸ್ತರಣೆಯನ್ನು ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರ ಮಾಡಿತು. ಅದರ ಬೆನ್ನಲ್ಲೇ ಅತೃಪ್ತ ಶಾಸಕರ ಬಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬ್ಲಾಕ್​ಮೇಲ್​ ಆರಂಭಿಸಿದ್ದಾರೆ. ಹಿರಿಯ ಕಾಂಗ್ರೆಸ್​ ಮುಖಂಡ ಎಂಬಿ ಪಾಟೀಲ್​ ಈಗಾಗಲೇ ಬಹಿರಂಗ ಹೇಳಿಕೆ ಕೊಟ್ಟಿದ್ದು, ಒಟ್ಟೂ 20 ಶಾಸಕರು ತಮ್ಮ ಜತೆ ಇರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಸುಸ್ಥಿರ ಆಡಳಿತವನ್ನು ನೀಡಲಿದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಬಂಡಾಯ ಶಾಸಕರ ಬಣದಲ್ಲಿ ಕಾಂಗ್ರೆಸ್​ ಘಟಾನುಘಟಿಗಳೇ ಇದ್ದು, ಹೈಕಮಾಂಡ್​ ಭೇಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜತೆಗೆ ಬಂಡಾಯದ ಕಹಳೆ ಊದಲು ಬೇಕಾದ ಕಾರಣಗಳನ್ನು ಸಹ ಬಂಡಾಯ ಶಾಸಕರು ಸಿದ್ಧಪಡಿಸಿದ್ದಾರೆ. ಅದರ ಎಕ್ಸ್ಲೂಸಿವ್​ ಮಾಹಿತಿ ನ್ಯೂಸ್​ 18ಗೆ ಲಭ್ಯವಾಗಿದೆ.

ಸಮರ್ಥನೆ ಏನು?:

ಹೈ ಕಮಾಂಡ್​ ಬಳಿ ಬಂಡಾಯಕ್ಕೆ ಸಮರ್ಥ ಕಾರಣ ಕೊಡಲು ಸಿದ್ದವಾಗಿರೋ ಶಾಸಕರು ಕಾಂಗ್ರೆಸ್ ಬಂಡಾಯ ಶಾಸಕರು ಪಟ್ಟಿ ಮಾಡಿರೋ ದೂರುಗಳೇನು?

 • ಪರಮೇಶ್ವರ್ ಹಾಗೂ ವೇಣುಗೋಪಾಲ್​ ಸೇರಿ ಆಡಿರೋ ಆಟಗಳ ಬಗ್ಗೆ ಮಾಹಿತಿ.

 • Loading...

 • ಮಗನನ್ನ ಮಂತ್ರಿ ಮಾಡಲು ಖರ್ಗೆ ಇವರಿಬ್ಬರಿಗೆ ಸಾಥ್ ಕೊಟ್ಟ ವಿಷಯ.

 • ಮಂತ್ರಿ ಸ್ಥಾನ ಕೈ ಬಿಡಲು ಅನುಸರಿಸಿದ ಮಾನದಂಡದಲ್ಲಿ ಲೋಪ.

 • 5 ವರ್ಷ ಮಂತ್ರಿಯಾದವರು, ಯುವ ಶಾಸಕ ಹಾಗೂ ಮೊದಲ ಬಾರಿ ಶಾಸಕರಿಗೆ ಮಂತ್ರಿ ಸ್ಥಾನವಿಲ್ಲ ಅನ್ನುವ ಮಾನದಂಡ. ಈ ಮಾನದಂಡ ಜಾರ್ಜ್, ಕೃಷ್ಣ ಭೈರೇಗೌಡ, ದೇಶಪಾಂಡೆಗೆ ಯಾಕೆ ಅಪ್ಲೈ ಆಗಿಲ್ಲ.

 • ಎಂಬಿ ಪಾಟೀಲ್, ಹೆಚ್ ಕೆ ಪಾಟೀಲ್, ರಾಮಲಿಂಗಾರೆಡ್ಡಿ, ಜಾರಕಿ ಹೊಳಿಗೆ ಮಾತ್ರ ಯಾಕೆ ಅನ್ವಯ..?

 • ಪ್ರತಿ ಸಂಪುಟದಲ್ಲೂ ಕನಿಷ್ಠ 6 ಜನ ಲಿಂಗಾಯತರು ಇರುತ್ತಿದ್ದರು.

 • ಈಗ ಆ ಪ್ರಾತಿನಿಧ್ಯ ಕೇವಲ 4, ಈ ಅನ್ಯಾಯಕ್ಕೆ ಕಾರಣವೇನು..?

 • ಸಾಮಾಜಿಕ ನ್ಯಾಯ ಅನುಸರಿಸಿ ಸಂಪುಟ ರಚನೆ ಮಾಡಲು ಒಪ್ಪಂದವಾಗಿತ್ತು. ಅದನ್ನ ಗಾಳಿಗೆ ತೂರಿ ಜೆಡಿಎಸ್​ಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದು ಸರಿಯೇ?

 • 9 ಗಂಗಟಕಾರ ಒಕ್ಕಲಿಗರಿಗೆ ಮಣೆ ಹಾಕಿ ಮರಸು ಒಕ್ಕಲಿಗರಿಗೆ ಕೇವಲ 1 ಸ್ಥಾನ ಕೊಟ್ಟಿದ್ದು ಸರಿಯೇ..?

 • ಕಾಂಗ್ರೆಸ್ ನಲ್ಲಿರೋ ಒಕ್ಕಲಿಗರಿಗೆ ಅನ್ಯಾಯವಾಗ್ತಿದ್ರೂ ಸರಿ ಮಾಡಿಲ್ಲ ಯಾಕೆ..?


ಸಮರ್ಥನೆ ಮತ್ತು ಪ್ರಶ್ನೆ ಎರಡನ್ನೂ ಈ ಅಂಶಗಳು ಒಳಗೊಂಡಿದ್ದು, ರಾಹುಲ್​ ಗಾಂಧಿಯವರನ್ನು ಭೇಟಿ ಮಾಡಿ ಚರ್ಚಿಸಲು ಎಂಬಿ ಪಾಟೀಲ್​ ನೇತೃತ್ವದಲ್ಲಿ ಇಪ್ಪತ್ತು ಶಾಸಕರು ಸಜ್ಜಾಗಿದ್ದಾರೆ. ಒಂದು ವೇಳೆ ಬಂಡಾಯ ಶಾಸಕರು ಪಟ್ಟು ಸಡಿಲಿಸದಿದ್ದರೆ ಸರ್ಕಾರದ ಭವಿಷ್ಯ ಡೋಲಾಯಮಾನವಾಗಲಿದೆ. 20 ಶಾಸಕರು ರಾಜೀನಾಮೆ ನೀಡಿದರೆ, ಒಂದೋ ಬಿಜೆಪಿ ಜತೆ ಸೇರಿ ಜೆಡಿಎಸ್​ ಸರ್ಕಾರ ರಚಿಸಬೇಕು. ಅದು ಈಗ ದೂರದ ಮಾತು. ಇಲ್ಲವಾದರೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ, ಲೋಕಸಭೆ ಚುನಾವಣೆಗೂ ಮುನ್ನ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಈಗಷ್ಟೇ ಸಿದ್ದರಾಮಯ್ಯ ಸಂಧಾನದ ಅಖಾಡಕ್ಕೆ ಇಳಿದಿದ್ದು, ಸಿದ್ದರಾಮಯ್ಯ ಮಾತನ್ನು ಬಂಡಾಯ ಶಾಸಕರು ಮನ್ನಿಸುತ್ತಾರ ಎಂಬುದನ್ನು ಕಾದು ನೋಡಬೇಕು.
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...