ಮಾನಸಿಕ ಅಸ್ವಸ್ಥ ಯುವಕನ ಮೇಲೆ ಪ್ರಕೃತಿ ವಿರುದ್ದದ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಈತನ ಈ  ಕಾಮ ಪುರಾಣದ ದೃಶ್ಯಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ದೌರ್ಜನ್ಯಕ್ಕೊಳಗಾದ ಯುವಕನ ತಂದೆ ದೂರು ನೀಡಿದ್ದಾರೆ. 

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ರಾಯಚೂರು (ಮಾ. 13) : ಜೀವಿಗಳಲ್ಲಿ ಲೈಂಗಿಕ ಕ್ರಿಯೆ ಸಹಜ, ಆದರೆ, ಅದಕ್ಕೆ ಆದ ಒಂದು ಕಟ್ಟುಪಾಡು, ಪ್ರಕೃತಿ ಸಹಜತೆ, ಸಹಮತ ಇರುತ್ತದೆ.  ಸಲಿಂಗ ಸಂಬಂಧವನ್ನು ಕೂಡ ಇತ್ತೀಚೆಗೆ ಮಾನ್ಯ ಮಾಡಲಾಗಿದ್ದು, ಇಲ್ಲಿ ಒಪ್ಪಿಗೆ ಅವಶ್ಯ. ಆದರೆ, ಇಲ್ಲೊಬ್ಬ ಕಾಮುಕ  ತನ್ನ ಕಾಮತೃಷೆಗಾಗಿ ಮಾನಸಿಕ ಅಸ್ವಸ್ಥ ಮಾತು ಬಾರದ ಯುವಕನನ್ನು ಬಳಸಿಕೊಂಡಿದ್ದಾನೆ. ಈತನ ಈ  ಕಾಮ ಪುರಾಣದ ದೃಶ್ಯಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ದೌರ್ಜನ್ಯಕ್ಕೊಳಗಾದ ಯುವಕನ ತಂದೆ ದೂರು ನೀಡಿದ್ದಾನೆ.  ದೂರಿನನ್ವಯ ದೌರ್ಜನ್ಯವೆಸಗಿದವ ಈಗ ಜೈಲು ಸೇರಿದ್ದಾರೆ. ಪ್ರ ಕೃತಿ ವಿರುದ್ದವಾಗಿ ಲೈಂಗಿಕ ಕ್ರಿಯೆ ನಡೆಸಿದ ಈತನ ಹೆಸರು ಮಸ್ಕಿ ತಾಲೂಕಿನ ಬಸಣ್ಣ ಕ್ಯಾಂಪ್(ಹಾಲಾಪುರ) ಸೂಗರಡ್ಡಿ. ಈತ ಇದೇ ಗ್ರಾಮದ ಪ್ರತಿಷ್ಢಿತ ಮನೆತನದವನಾಗಿದ್ದಾನೆ.  ಫೆಬ್ರುವರಿ 9 ರಂದು ಮಧ್ಯಾಹ್ನ ಸಂಜೆ 4.30 ಕ್ಕೆ ಗ್ರಾಮದ ಹೊರವಲಯದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಗ್ರಾಮದ ಸುಮಾರು 23 ವರ್ಷದ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ದೌರ್ಜನ್ಯ ಕ್ಕೊಳಗಾದ ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಲೋಕದ ಪ್ರಜ್ಞೆ ಸ್ವಲ್ಪ ಕಡಿಮೆ. ಅಲ್ಲದೆ ಮಾತು ಬಾರದವನಾಗಿದ್ದಾನೆ. ಮಾನಸಿಕ ಅಸ್ವಸ್ಥನಿಗೆ ಪುಸಲಾಯಿಸಿ  ಕರೆದುಕೊಂಡು ಹೋಗಿ  ತನ್ನ ಲೈಂಗಿಕ ತೃಷೆಗಾಗಿ ಬಳಸಿಕೊಂಡಿದ್ದಾನೆ. ಆದರೆ ಸೂಗರಡ್ಡಿಯ ಕಾಮಪಿಪಾಸೆಯನ್ನು ಯಾರೋ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.  ಚಿತ್ರೀಕರಿಸಿದ ವಿಡಿಯೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬಹಳಷ್ಟು ಕಡೆ ಈ ವಿಡಿಯೋ  ವೈರಲ್ ಆಗಿದೆ, ವಿಡಿಯೋ ವೈರಲ್ ಆಗಿರುವುದು ದೌರ್ಜನ್ಯ ಕ್ಕೊಳಗಾದ ಯುವಕನ ತಂದೆಗೂ ತಲುಪಿದೆ. ಇದರಿಂದ ದೌರ್ಜನ್ಯ ಕ್ಕೊಳಗಾದ ಯುವಕನ ಕುಟುಂಬ ತೀರಾ ನೊಂದಿದೆ. ಈಗ ಗಂಡು ಹುಡುಗರು ಸಹ ನೆಮ್ಮದಿಯಿಂದ ಇರಲು ಅಸಾಧ್ಯವೇ? ಕಾಮಾಂಧರು ಈಗ ಹುಡುಗರಿಗೂ ಗಂಟು ಬಿದ್ದಿದ್ದಾರೆ ಎಂದು ನೊಂದು ನುಡಿದಿದ್ದಾರೆ.ದೌರ್ಜನ್ಯಕ್ಕೊಳಗಾದ ಯುವಕನ ತಂದೆ ಮಾರ್ಚ5 ರಂದು ಕವಿತಾಳ ಪೊಲೀಸ ಠಾಣೆಗೆ ದೂರು ನೀಡಿ ದೌರ್ಜನ್ಯವೆಸಗಿದವನಿಗೆ ಶಿಕ್ಷೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ, ದೌರ್ಜನ್ಯ ಕ್ಕೊಳಗಾದ ಯುವಕನ ತಂದೆಯ ದೂರಿನನ್ವಯ ಕವಿತಾಳ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ವೈರಲ್ ಆಗಿರುವ ವಿಡಿಯೋ ಪರಿಶೀಲಿಸಿದ್ದಾರೆ. ಈ ವಿಡಿಯೋ ಆಧಾರದ ಮೇಲೆ  ದೌರ್ಜನ್ಯಕ್ಕೊಳಗಾದ ಯುವಕನ ತಂದೆ ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಮಾರ್ಚ್​ 10 ರಂದು ಆರೋಪಿಯನ್ನು ಬಂಧಿಸಿದ್ದಾರೆ, ಐಪಿಸಿ ಸೆಕ್ಷನ್ 377೭ ರ ಪ್ರಕಾರ ಕವಿತಾಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ

ದೌರ್ಜನ್ಯವೆಸಗಿದ ಯುವಕ ಗ್ರಾಮದ ಪ್ರತಿಷ್ಠಿತ ಮನೆತನದವನಾಗಿದ್ದು, ಅವರ ಕುಟುಂಬದಲ್ಲಿ ಕೆಲವರು ಹಿರಿಯ ಅಧಿಕಾರಿಗಳಾಗಿದ್ದಾರೆ, ಇಂಥವರು ಇಷ್ಟು ಕೀಳುಮಟ್ಟಕ್ಕಿಳಿದ್ದು ಅಚ್ಚರಿ ಮೂಡಿಸಿದೆ. ಇಂದಿನ ದಿನಗಳಲ್ಲಿ ಸಮಾಜಿಕವಾಗಿ ಅಸಹ್ಯ ಮೂಡಿಸುವ ಇಂಥ ಘಟನೆಗಳು ನಡೆದಿದ್ದು ನಾಗರಿಕ ಸಮಾಜವು ತಲೆ ತಗ್ಗಿದುವಂತಾಗಿದೆ, ಅಸಹಜ ಲೈಂಗಿಕ ಕ್ರಿಯೆಗೆ ಅಮಾಯಕರನ್ನು ಬಳಸಿಕೊಳ್ಳುವವರಿಗೂ ಶಿಕ್ಷೆಯಾಗಬೇಕೆಂದು ದೌರ್ಜನ್ಯ ಕ್ಕೊಳಗಾದ ಯುವಕ ಕುಟುಂಬದವರು ಆಗ್ರಹಿಸಿದ್ದಾರೆ.
Published by:Seema R
First published: