ಉನ್ನಾವ್​ ಅತ್ಯಾಚಾರದ ಸಂತ್ರಸ್ತೆ ಕಾರು ಅಪಘಾತ; ವ್ಯವಸ್ಥಿತ ಪಿತೂರಿ ಆರೋಪದ ಮೇಲೆ ಬಿಜೆಪಿ ಶಾಸಕ ಸೇರಿ 10 ಮಂದಿ ಮೇಲೆ ಪ್ರಕರಣ ದಾಖಲು

ಭಾನುವಾರ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ತನ್ನ ಕುಟುಂಬ ಸದಸ್ಯರು ಹಾಗೂ ವಕೀಲರೊಂದಿಗೆ ಕಾರಿನಲ್ಲಿ ತೆರಳುವಾಗ ವೇಗವಾಗಿ ಬಂದ ಟ್ರಕ್​ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ, ಕಾರಿನಲ್ಲಿದ್ದ ಅತ್ಯಾಚಾರ ಸಂತ್ರಸ್ತೆ ಹಾಗೂ ವಕೀಲರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರೆ, ಕುಟುಂಬದ ಇಬ್ಬರು ಸದಸ್ಯರು ಅಸುನೀಗಿದ್ದರು.

HR Ramesh | news18
Updated:July 29, 2019, 5:52 PM IST
ಉನ್ನಾವ್​ ಅತ್ಯಾಚಾರದ ಸಂತ್ರಸ್ತೆ ಕಾರು ಅಪಘಾತ; ವ್ಯವಸ್ಥಿತ ಪಿತೂರಿ ಆರೋಪದ ಮೇಲೆ ಬಿಜೆಪಿ ಶಾಸಕ ಸೇರಿ 10 ಮಂದಿ ಮೇಲೆ ಪ್ರಕರಣ ದಾಖಲು
ಉನ್ನಾವ್​ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್​ ಸಿಂಗ್​ ಸೆಂಗಾರ್
  • News18
  • Last Updated: July 29, 2019, 5:52 PM IST
  • Share this:
ನವದೆಹಲಿ: ಉನ್ನಾವ್​ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲದೀಫ್​ ಸಿಂಗ್​ ಸೆಂಗರ್​ ಮೇಲೆ ಕೊಲೆ ಆರೋಪ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಸಂತ್ರಸ್ತೆಯನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆ ಚಲಿಸುತ್ತಿದ್ದ ಕಾರನ್ನು ಅಪಘಾತ ಮಾಡಿಸಲಾಗಿದೆ ಎಂದು ಬಿಜೆಪಿ ಶಾಸಕ ಕುಲದೀಪ್​ ಸಿಂಗ್​ ಸೆಂಗರ್​ ಸೇರಿ 10 ಮಂದಿ ಮೇಲೆ ಪ್ರಕರಣ ದಾಖಲಾಗಿದೆ.

ಉತ್ತರಪ್ರದೇಶದ ರಾಯ್​ಬರೇಲಿಯ ಗುರು ಬಕ್ಷಾ ಪೊಲೀಸ್​ ಠಾಣೆಯಲ್ಲಿ ಅಪಘಾತ ಪ್ರಕರಣ ಸಂಬಂಧ ಶಾಸಕ ಸೆಂಗರ್​ ಸೇರಿ ಹತ್ತು ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಭಾನುವಾರ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ತನ್ನ ಕುಟುಂಬ ಸದಸ್ಯರು ಹಾಗೂ ವಕೀಲರೊಂದಿಗೆ ಕಾರಿನಲ್ಲಿ ತೆರಳುವಾಗ ವೇಗವಾಗಿ ಬಂದ ಟ್ರಕ್​ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ, ಕಾರಿನಲ್ಲಿದ್ದ ಅತ್ಯಾಚಾರ ಸಂತ್ರಸ್ತೆ ಹಾಗೂ ವಕೀಲರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರೆ, ಕುಟುಂಬದ ಇಬ್ಬರು ಸದಸ್ಯರು ಅಸುನೀಗಿದ್ದರು.

ಇದನ್ನು ಓದಿ: ಮತ್ತಷ್ಟು ಕ್ಷೀಣಿಸಿದ ಉನ್ನಾವ್​ ಅತ್ಯಾಚಾರ ಸಂತ್ರಸ್ತೆಯ ಆರೋಗ್ಯ; ಬಿಜೆಪಿ ಶಾಸನ ವಿರುದ್ಧ ಸಾಕ್ಷಿಯಾಗಿದ್ದ ಸಂಬಂಧಿ ಸಾವು

ಸಂತ್ರಸ್ತೆಗೆ ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿತ್ತು. ಈ ಪ್ರಕರಣದಲ್ಲಿ ರಕ್ಷಣೆ ಲೋಪವಾಗಿಲ್ಲ ಎಂದು ಹೇಳಿರುವ ಡಿಜಿಪಿ, ಪೊಲೀಸ್​ ಇಲಾಖೆಯಿಂದ ಸಂತ್ರಸ್ತೆಯ ರಕ್ಷಣೆಗೆ ಏಳು ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತ್ತು ಭಾನುವಾರ ಕೂಡ ಸಂತ್ರಸ್ತೆಯೊಂದಿಗೆ ಮೂವರು ಸಿಬ್ಬಂದಿ ಜೊತೆಗಿದ್ದರು ಎಂದು ತಿಳಿಸಿದ್ದಾರೆ.

ಉನ್ನಾವ್​ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ರಕ್ಷಣಾ ಸಿಬ್ಬಂದಿ ಮಾತನಾಡಿ, ಅವರು ಕಾರಿನಲ್ಲಿ ಆಗಲೇ ಐದು ಮಂದಿ ಇದ್ದರು. ಹೀಗಾಗಿ ನಾನು ಕುಳಿತುಕೊಳ್ಳಲು ಜಾಗವಿರಲಿಲ್ಲ. ಹೀಗಾಗಿ ನಾನು ಅವರೊಂದಿಗೆ ತೆರಳಲು ಆಗಲಿಲ್ಲ ಎಂದು ಹೇಳಿದ್ದಾರೆ.

ಅಪಘಾತದಿಂದ ತೀವ್ರ ಗಾಯಗೊಂಡಿರುವ ಸಂತ್ರಸ್ತೆಯನ್ನು ಲಕ್ನೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ ಮಹಿಳಾ ಆಯೋಗದ ಆಯುಕ್ತೆ ಸೋಮವಾರ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
First published:July 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading