Bengaluru: ಬೆಳ್ಳಂದೂರು ಕೆರೆ ಸುತ್ತ-ಮುತ್ತಲಿನ ನಿವಾಸಿಗಳಿಗೆ ತಪ್ಪದ ಕಾಟ; ದುರ್ನಾತ ತಡೆಯಲು ಮನೆಯಲ್ಲೂ ಮಾಸ್ಕ್​ ಧರಿಸೋ ಜನ

ಬೆಳ್ಳಂದೂರು ಕೆರೆಯಿಂದ ಬರುವ ನೀರು ಚರಂಡಿ ನೀರಿನ ಜೊತೆ ಮಿಕ್ಸ್ ಆಗಿ ಗಬ್ಬುನಾರೋದಕ್ಕೆ ಶುರುವಾಗಿದೆ. ಪ್ರತಿ ದಿನ ದುರ್ನಾತದಿಂದ ಸ್ಥಳೀಯರು ಮನೆಯೊಳಗೆ ಕೂರುವಾಗಲೂ ಮಾಸ್ಕ್ ಹಾಕಿಕೊಂಡೇ ಇರಬೇಕಾದ ಪರಿಸ್ಥಿತಿ ಬಂದಿದೆ.

ಬೆಳಂದೂರು ಕೆರೆಯ ಸ್ಥಳೀಯ ನಿವಾಸಿಗಳಿಗೆ ತಪ್ಪದ ಕಾಟ!

ಬೆಳಂದೂರು ಕೆರೆಯ ಸ್ಥಳೀಯ ನಿವಾಸಿಗಳಿಗೆ ತಪ್ಪದ ಕಾಟ!

  • Share this:
ಮಳೆ ಬಂದು ಹೋದ ಮೇಲೆ ಬೆಳ್ಳಂದೂರು (Bellanduru) ನಿವಾಸಿಗಳಿಗೆ ಮತ್ತೊಂದು‌ ಗೋಳು ಶುರುವಾಗಿದೆ. ಮಳೆ ಬಂದಾಗ ನೆರೆ ಜೊತೆ ಗುದ್ದಾಡಿದ್ದಾಯ್ತು. ಈಗ ಮಳೆಯ ಸೈಡ್ ಎಫೆಕ್ಟ್ (Side Effect) ನಿಂದಾಗಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ನಿವಾಸಿಗಳು ಮೂಗಿ ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆರೆಯ ನಾಲೆ, ರಾಜಕಾಲುವೆ ಎಲ್ಲಾ ಗಬ್ಬುನಾರುತ್ತಿದೆ. ಆದರೆ ಪಾಲಿಕೆ ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತಿದೆ.  ದೂರು ಬೆಳ್ಳಂದೂರು ಕೆರೆಯಿಂದ ಬರುವ ನೀರು ಚರಂಡಿ ನೀರಿನ (Drainage Water) ಜೊತೆ ಮಿಕ್ಸ್ ಆಗಿ ಗಬ್ಬುನಾರೋದಕ್ಕೆ ಶುರುವಾಗಿದೆ. ಸುತ್ತ-ಮುತ್ತಲಿನ ಜನರು ಮನೆಯಲ್ಲೇ ಮಾಸ್ಕ್ (Mask)​ ಹಾಕಿಕೊಳ್ಳಲು ಶುರು ಮಾಡಿದ್ದಾರೆ. 

ರಾಜಕಾಲುವೆಯಿಂದ ಬರುವ ವಾಸನೆಗೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ !!

ಮಳೆ ನಿಂತ ಮೇಲೆ ಬೆಳ್ಳಂದೂರು ನಿವಾಸಿಗಳು ಒಂದಲ್ಲಾ ಒಂದು ಯಾತನೆ ಅನುಭವಿಸುತ್ತಿದ್ದಾರೆ. ಮಳೆಯಿಂದಾಗಿ ಕಾರು, ಬೈಕ್​, ಮನೆಯೊಳಗಿನ ವಸ್ತುಗಳನ್ನೆಲ್ಲಾ ಕಳೆದುಕೊಂಡು ಮತ್ತೆ ಯಥಾಸ್ಥಿತಿಗೆ ಒಗ್ಗಿಕೊಳ್ಳೋಕೆ ಶುರುವಾಗಿದ್ರು. ಆಗಲೇ ಬೆಳ್ಳಂದೂರು ನಿವಾಸಿಗಳಿಗೆ ಮತ್ತೊಂದು ಕಾಟ ಶುರುವಾಗಿದೆ. ಈಗ ಬೆಳ್ಳಂದೂರು ಕೆರೆಯಿಂದ ಬರುವ ನೀರು ಚರಂಡಿ ನೀರಿನ ಜೊತೆ ಮಿಕ್ಸ್ ಆಗಿ ಗಬ್ಬುನಾರೋದಕ್ಕೆ ಶುರುವಾಗಿದೆ.

ವಿಪರೀತ ದುರ್ನಾತಕ್ಕೆ  ಜನರು ಹೈರಾಣಾದ್ರು

ಹೀಗಾಗಿ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡೋಕೆ ಶುರುವಾಗಿದೆ. ಕಳೆದ ಕೆಲವು ವರ್ಷಗಳಿಂದ ಡ್ರೈನ್ ಲೈನ್ ಗಳು ಕೆರೆಗೆ ಬಿಟ್ಟಿರುವ ಹಿನ್ನೆಲೆ ನೊರೆ ಹಾವಳಿ ಹೆಚ್ಚಾಗಿತ್ತು. ಆದರೆ ಕ್ರಮೇಣವಾಗಿ ನೊರೆ ತಗ್ಗಿ ಜನರು ‌ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮಳೆಯ ಕಾರಣಕ್ಕೆ ಮತ್ತೆ ವಿಪರೀತ ದುರ್ನಾತ ಬರುತ್ತಿದ್ದು ಜನರು ಹೈರಾಣಾಗಿದ್ದಾರೆ.



ಇದನ್ನೂ ಓದಿ:39.56 ಕೋಟಿ ರೂಪಾಯಿ Electricity Bill ಬಾಕಿ! ಈ ಜಿಲ್ಲೆಯ ಗ್ರಾಮಸ್ಥರ ಬದುಕು ಇನ್ನು ಕತ್ತಲು!

ಗಬ್ಬುನಾರುತ್ತಿದೆ ಬೆಳ್ಳಂದೂರು ಕೆರೆ.. ಮನೆಯೊಳಗೂ ಮಾಸ್ಕ್ ಹಾಕಿಕೊಳ್ಳುತ್ತಿರುವ ಜನ!

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿ ದಿನ ದುರ್ನಾತದಿಂದ ಉಸಿರಾಟ ಸಮಸ್ಯೆ ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಮನೆಯೊಳಗೆ ಕೂರುವಾಗಲೂ ಮಾಸ್ಕ್ ಹಾಕಿಕೊಂಡೇ ಇರಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಮಳೆ ಬಂದು ಹೋದ ಬಳಿಕ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿರುದೆ ಇಲ್ಲಿನ ರಾಜಕಾಲುವೆ ನೀರು. ಈ ಮೊದಲು ವಾಸನೆ ಬರುತ್ತಿದ್ದರೂ ಇಷ್ಟು ಪ್ರಮಾಣದಲ್ಲಿ ಇರ್ಲಿಲ್ಲ. ಇದೀಗ ಮಾಸ್ಕ್ ಇಲ್ಲದೆ ಇಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: Electricity Rate Rise: ಕರ್ನಾಟಕದ ಜನರಿಗೆ 'ಕರೆಂಟ್'​ ಶಾಕ್; ವಿದ್ಯುತ್‌ ದರ ಮತ್ತೆ ಏರಿಕೆ!

ಜನರನ್ನು ಕಾಡ್ತಿದೆ ಕಾಯಿಲೆ ಉಲ್ಬಣಗೊಳ್ಳುವ ಭೀತಿ

ಒಟ್ಟಾರೆ ಕಾಲಕಾಲಕ್ಕೆ ಕೆರೆ ಹೂಳೆತ್ತಿ ಕ್ಲೀನ್ ಮಾಡಬೇಕಿದ್ದ ಬಿಬಿಎಂಪಿ ತನ್ನ ಜವಾಬ್ದಾರಿ ಮರೆತಂತಿದೆ. ಹೀಗೆ ಆದರೆ ಬೆಳ್ಳಂದೂರು ಜನರಿಗೆ ಇದರಿಂದ ತೀವ್ರವಾದ ಕಾಯಿಲೆಗಳು ಉಲ್ಬಣಗೊಳ್ಳಲಿದೆ. ಈಗಾಗಲೇ ಮಕ್ಕಳಿಗೆ ಹಾಗೂ ವೃದ್ಧರಿಗೆ ಇದರಿಂದ ಸಮಸ್ಯೆ ಶುರುವಾಗಿದೆ. ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಶಾಲೆ, ಕಾಲೇಜು, ಐಟಿ ಕಂಪೆನಿಗಳು, ಅಪಾರ್ಟ್ಮೆಂಟ್ ಗಳಿವೆ. ಇದರಿಂದ ಇವರೆಲ್ಲರೂ ಪರದಾಡುತ್ತಿದ್ದಾರೆ‌. ಅದಕ್ಕೂ ಮೊದಲೇ ಪಾಲಿಕೆ ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ಕಾಣಬೇಕಿದೆ.
Published by:ಪಾವನ ಎಚ್ ಎಸ್
First published: