HOME » NEWS » State » UNLOCK BENGALURU PANEL TO KARNATAKA GOVT CAN REOPEN MALLS RESTAURANTS FROM JUNE 21 LG

Unlock Bengaluru: ಜೂನ್ 21 ರಿಂದ ಮಾಲ್, ರೆಸ್ಟೋರೆಂಟ್ ಓಪನ್​​ಗೆ ಚಿಂತನೆ; ಏನಿರುತ್ತೆ ಏನಿರಲ್ಲ? ಫುಲ್ ಡೀಟೆಲ್ಸ್

ಶಾಲೆಗಳನ್ನು ತೆರೆಯುವ ಬಗ್ಗೆ ಇನ್ನೂ ಸಹ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ನಿರ್ಧರಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

news18-kannada
Updated:June 17, 2021, 4:22 PM IST
Unlock Bengaluru: ಜೂನ್ 21 ರಿಂದ ಮಾಲ್, ರೆಸ್ಟೋರೆಂಟ್ ಓಪನ್​​ಗೆ ಚಿಂತನೆ; ಏನಿರುತ್ತೆ ಏನಿರಲ್ಲ? ಫುಲ್ ಡೀಟೆಲ್ಸ್
ಮಾಲ್
  • Share this:
ಬೆಂಗಳೂರು(ಜೂ.17): ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಹೀಗಾಗಿ ಜೂನ್​ 14ರಿಂದ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಮೊದಲನೇ ಹಂತದ ಅನ್​ಲಾಕ್​ ಜಾರಿಗೊಳಿಸಲಾಗಿದ್ದು, ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ಜೂನ್ 21ರಿಂದ 2ನೇ ಹಂತದ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಲಿದೆ. ​ ಆಗ ಇನ್ನೂ ಹೆಚ್ಚಿನ ವಿನಾಯಿತಿ ಸಿಗುತ್ತೆ ಎನ್ನಲಾಗುತ್ತಿದೆ. 

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ತಗ್ಗುತ್ತಿರುವ ಹಿನ್ನೆಲೆ, ಮಾಲ್​ಗಳು, ಶಾಪಿಂಗ್​ ಮಾಲ್​ಗಳು, ಮಾರುಕಟ್ಟೆಗಳನ್ನು ತೆರೆಯಬಹುದು ಎಂದು ತಾಂತ್ರಿಕ ಸಲಹಾ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಲಹೆ ನೀಡಿದೆ.  ಜೂನ್​ 21ರಿಂದ ಅನ್​ಲಾಲ್​ 2.0 ಜಾರಿಯಾಗಲಿದೆ.  ಅಂದಿನಿಂದ ಯಾವುದಕ್ಕೆಲ್ಲಾ ಅನುಮತಿ ಸಿಗಲಿದೆ ಎಂಬುದನ್ನು ನೋಡುವುದಾದರೆ,


  • ಮಾಲ್, ಹೋಟೆಲ್, ಚಿಕ್ಕ‌-ಚಿಕ್ಕ ಮಾರುಕಟ್ಟೆ, ಸಲೂನ್, ಬ್ಯೂಟಿ ಪಾರ್ಲರ್​ಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಇದೆ.

  • ಇನ್ನು, ಸದ್ಯ ಮದುವೆ ಸಮಾರಂಭಗಳಿಗೆ 40 ಜನ ಮಾತ್ರ ಸೇರಲು ಅವಕಾಶ ಇತ್ತು. ಜೂನ್​ 21ರಿಂದ ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

  • ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳನ್ನು ತೆರೆಯುವ ಸಾಧ್ಯತೆ ಇದೆ.

  • ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಲಾಗುತ್ತದೆ.
  • ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಪ್ರವೇಶ ನೀಡಲಾಗುತ್ತದೆ.

  • ಶಾಪಿಂಗ್ ಕಾಂಪ್ಲೆಕ್ಸ್​​ಗಳನ್ನು ಓಪನ್ ಮಾಡಲು ತಾಂತ್ರಿಕ ಸಲಹಾ ಸಮಿತಿಯಿಂದ‌ಲೂ ಪರಿಶೀಲನೆಗೆ ಸೂಚನೆ ನೀಡಲಾಗಿದೆ.


ಇನ್ನು, ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳು ಯಥಾಸ್ಥಿತಿ ಮುಚ್ಚಿರುತ್ತವೆ.  ಮೂರು ಮತ್ತು ನಾಲ್ಕನೇ ಹಂತದಲ್ಲಿ ಎಲ್ಲವನ್ನೂ ಓಪನ್‌ ಮಾಡಲು ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ:BMTC ಪ್ರಯಾಣಿಕರಿಗೆ ಸಿಹಿ ಸುದ್ದಿ; ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ

ಶಾಲೆಗಳನ್ನು ತೆರೆಯುವ ಬಗ್ಗೆ ಇನ್ನೂ ಸಹ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ನಿರ್ಧರಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಮೂರನೇ ಹಂತದ ಲಾಕ್​ಡೌನ್​ ಸಡಿಲಿಕೆ ಜುಲೈ 5ರಿಂದ  ಪ್ರಾರಂಭವಾಗಲಿದೆ. 3ನೇ ಹಂತದ ಅನ್​ಲಾಕ್​ನಲ್ಲಿ ಥಿಯೇಟರ್​​, ಪಬ್​, ಬಾರ್, ಜಿಮ್, ಸ್ವಿಮ್ಮಿಂಗ್​ ಪೂಲ್, ಸ್ಟೇಡಿಯಂಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಇದೆ.

ಇನ್ನು, ಶಾಲೆ-ಕಾಲೇಜುಗಳು 3ನೇ ಹಂತದ ಅನ್​ಲಾಕ್​ನಲ್ಲಿ ಪ್ರಾರಂಭಿಸಲಾಗುತ್ತದೆ ಎನ್ನಲಾಗುತ್ತದೆ. ಆದರೆ ಮೂರನೇ ಕೊರೋನಾ ಅಲೆ ಎದುರಾಗುವ ಭೀತಿ ಇದ್ದು, ಪರಿಸ್ಥಿತಿ ನೋಡಿ ಸಚಿವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ನೈಟ್​ ಕರ್ಫ್ಯೂ ತೆರವು ಬಗ್ಗೆಯೂ ಬೇರೆ ಸಭೆ ನಡೆಸಿ ನಿರ್ಧಾರ ಮಾಡಲಾಗುತ್ತೆ.

ನಾವು ಕಡ್ಡಾಯವಾಗಿ ಕೋವಿಡ್​ ನಿಯಮಗಳನ್ನು ಪಾಲಿಸದಿದ್ದರೆ, ಕೊರೋನಾ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಅನ್​​ಲಾಕ್​ ಬಳಿಕ ಕೊರೋನಾ ಕೇಸ್​ಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಮಾಲ್​ಗಳು, ರೆಸ್ಟೋರೆಂಟ್​​ಗಳು, ಶಾಪಿಂಗ್ ಮಾಲ್​ಗಳು, ಮಾರುಕಟ್ಟೆಗಳನ್ನು ತೆರೆಯಲು ಇನ್ನೂ ಯೋಚಿಸಬೇಕು. ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾದರೆ ಮಾತ್ರ ಓಪನ್ ಮಾಡಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್​ ಸಲಹೆ ನೀಡಿದ್ದಾರೆ.
Youtube Video

​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by: Latha CG
First published: June 17, 2021, 4:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories