Cinema hall reopening: ಕೊನೆಗೂ ಸಿನಿಮಾ ಮಂದಿರ ತೆರೆಯಲು ಅನುಮತಿ ನೀಡಿದ ಕೇಂದ್ರ

ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್​ಗಳು ಕಾರ್ಯರಂಭಕ್ಕೆ ಕೇಂದ್ರ ಅನುಮತಿ ನೀಡಿದೆ. ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಬೇಕು

news18-kannada
Updated:September 30, 2020, 9:20 PM IST
Cinema hall reopening: ಕೊನೆಗೂ ಸಿನಿಮಾ ಮಂದಿರ ತೆರೆಯಲು ಅನುಮತಿ ನೀಡಿದ ಕೇಂದ್ರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ.30): ಕೊರೋನಾದಿಂದಾಗಿ ಕಳೆದ ಆರು ತಿಂಗಳಿನಿಂದ ಬಂದ್​ ಆಗಿದ್ದ ಸಿನಿಮಾ ಮಂದಿರ ತೆರೆಯಲು ಕೇಂದ್ರ ಗೃಹಸಚಿವಾಲಯ ಅನುಮತಿ ನೀಡಿದ್ದು, ಸಿನಿಪ್ರಿಯರಲ್ಲಿ ಸಂತಸ ಉಂಟು ಮಾಡಿದೆ. ಕೊರೋನಾ ಲಾಕ್​ಡೌನ್​ ಸಡಿಲಿಕೆ ಅನ್​ಲಾಕ್ ​5 ಮೂಲಕ ಇದನ್ನು ತೆರೆಯಲಾಗುತ್ತಿಲ್ಲ. ಬದಲಾಗಿ ಹಲವು ಮಾರ್ಗಸೂಚಿಗಳ ಮೇಲೆ ಈ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.  ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್​ಗಳು ಕಾರ್ಯರಂಭಕ್ಕೆ ಅವಕಾಶ ನೀಡಲಾಗಿದೆ. ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಪ್ರಕಟಣೆ ತಿಳಿಸಿದೆ.  ಅಕ್ಟೋಬರ್​ 15ರಿಂದ ಕಂಟೈನ್ಮೆಟ್ ಪ್ರದೇಶ ಹೊರತು ಪಡಿಸಿ ಬೇರೆ ಎಲ್ಲಾಕಡೆ ಇವುಗಳ ಕಾರ್ಯಚಾರಣೆಗೆ ಅವಕಾಶ ಕಲ್ಪಿಸಲಾಗಿದೆ

ಇದೇ ವೇಳೆ ಶಾಲೆಗಳ ಪುನರಾರಂಭದ ಕುರಿತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ತೆಗೆದುಕೊಳ್ಳಲು ನಿಯಮಗಳನ್ನು ಸರಳಗೊಳಿಸಲಾಗಿದೆ. ಪೋಷಕರ ಲಿಖಿತ ಒಪ್ಪಂದದೊಂದಿಗೆ ವಿದ್ಯಾರ್ಥಿಗಳು ಹಾಜರಾಬಹುದು ಎಂದು ತಿಳಿಸಿದೆ. ಈ ವೇಳೆ ಹಾಜರಾತಿ ಕಡ್ಡಾಯವಲ್ಲ. ಬೇಕಾದಲ್ಲಿ ಆನ್​ಲೈನ್​ ಕ್ಲಾಸ್​ಗಳನ್ನು ಮುಂದುವರೆಸಬಹುದು ಎಂದು ತಿಳಿಸಿದೆ. ಈ ಕುರಿತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಈ ಕುರಿತು ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿದೆ.

ಜೊತೆಗೆ ವ್ಯವಹಾರದಿಂದ ವ್ಯವಹಾರದ ಉದ್ದೇಶಕ್ಕಾಗಿ ನಡೆಯುವ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿದ್ದು, ಇವೆಲ್ಲಾ ಮಾರ್ಗಸೂಚಿಗಳ  ಪಾಲನೆ ಮಾಡುವುದು ಅಗತ್ಯ ಎಂದು ತಿಳಿಸಿದೆ. ಈ ಕುರಿತು ವಾಣಿಜ್ಯ ಇಲಾಖೆ ನಿರ್ದೇಶನ ನೀಡಲಿದೆ.

ಕ್ರೀಡಾಪಟುಗಳ ತರಬೇತಿಗಾಗಿ ಬಳಸುವ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಕ್ರೀಡಾ ಸಚಿವಾಲಯದ ಮಾರ್ಗದರ್ಶನದಂತೆ ಕಾರ್ಯಚರಣೆ  ನಡೆಸಬೇಕು ಎಂದು ತಿಳಿಸಿದೆ.

ಇದೇ ವೇಳೆ ಸಭೆ ಸಮಾರಂಭಗಳಲ್ಲಿ 100 ಜನರಿಗಿಂತ ಹೆಚ್ಚಿನ ಜನ ಭಾಗಿಯಾಗಲು ಅನುಮತಿ ನೀಡಲಾಗಿದೆ. ಇನ್ನು ಕಂಟೈನ್ಮೆಟ್​ ಪ್ರದೇಶದಲ್ಲಿ  ಅಕ್ಟೋಬರ್​ 15ರ ಬಳಿಕ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು.
Published by: Seema R
First published: September 30, 2020, 8:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading