Unlock 4.0: ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್?; ನಾಳೆ ಅಧಿಕೃತ ಆದೇಶ

ಜೊತೆಗೆ ಪ್ರತಿ ಗ್ರಾಹಕರ ಮಧ್ಯೆ ಕಡ್ಡಾಯವಾಗಿ ಸಾಮಾಜಿಕ ಅಂತರ ಇರಬೇಕು. ಶೇಕಡಾ 50ರಷ್ಟು ಗ್ರಾಹಕರಿಗೆ ಮಾತ್ರ ಬಾರ್ ಒಳಗೆ ಅವಕಾಶ ನೀಡಲಾಗುತ್ತದೆ. ಮದ್ಯ ಖರೀದಿ ಮಾಡಿ ಅಲ್ಲೇ ಕುಳಿತುಕೊಂಡು ಕುಡಿಯಬಹುದು. ಹೀಗೆ ಕೆಲ ಬಿಗಿ ಮಾರ್ಗಸೂಚಿಗಳ ಮೂಲಕ ನಾಳೆ ಈ ಬಗ್ಗೆ ಅಬಕಾರಿ ಇಲಾಖೆ ಆದೇಶ ಹೊರಡಿಸಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು(ಆ.30): ಅನ್ ಲಾಕ್ 4.0 ಜಾರಿಯಾದ ಬೆನ್ನಲ್ಲೇ  ಕಳೆದ 5 ತಿಂಗಳಿಂದ ಮುಚ್ಚಲಾಗಿದ್ದಬಾರ್​, ಪಬ್​​​, ಕ್ಲಬ್​ಗಳನ್ನು ತೆರೆಯುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ​​ ಪಬ್, ಬಾರ್, ರೆಸ್ಟೋರೆಂಟ್​​​ಗಳಲ್ಲಿ ಮದ್ಯ ಪೂರೈಸುವ ಅಬಕಾರಿ ಇಲಾಖೆ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿ ನೀಡಿದ್ದು, ನಾಳೆ ಸರ್ಕಾರಿ ಆದೇಶ ಹೊರಬೀಳಲಿದೆ. 

ಲಾಕ್ ಡೌನ್ ನಂತರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರೂ ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಪರವಾನಗಿ ಹೊಂದಿದ ಸ್ಥಳದಲ್ಲಿ ಮದ್ಯ ಸರಬರಾಜಿಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ರಾಜ್ಯದ ಎಲ್ಲಾ ಹೋಟೆಲ್, ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್ ಗಳಲ್ಲಿ ಮದ್ಯ ಸರಬರಾಜು ನಿಲ್ಲಿಸಲಾಗಿತ್ತು. ಇದೀಗ ಈ ನಿರ್ಬಂಧ ತೆರವಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಮತ್ತೆ ಟೇಬಲ್ ಸಿಟ್ಟಿಂಗ್ ಮದ್ಯ ಪೂರೈಕೆಗೆ ಅಬಕಾರಿ ಇಲಾಖೆ ಮುಂದಾಗಿದ್ದು ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಸಲ್ಲಿಸಿದ್ದು ಈ ಪ್ರಸ್ತಾವನೆಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಬಹುತೇಕ ನಾಳೆ ಈ ಕುರಿತು ಸರ್ಕಾರಿ ಆದೇಶ ಹೊರಬೀಳಲಿದೆ.

Coronavirus India Updates: ಭಾರತದಲ್ಲಿ 35 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಈ ಹಿಂದೆ ಇದ್ದ ರೀತಿಯಲ್ಲಿ ಪರವಾನಗಿ ಪಡೆದ ಎಲ್ಲಾ ಕಡೆಯಲ್ಲಿಯೂ ಮದ್ಯ ಸರಬರಾಜು ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿಯನ್ನು ಅಬಕಾರಿ ಸಚಿವ ನಾಗೇಶ್ ನೀಡಿದ್ದಾರೆ. ದೂರವಾಣಿ ಮೂಲಕ ವಿಷಯವನ್ನು ಖಚಿತಪಡಿಸಿದ್ದಾರೆ.

ಟೇಬಲ್ ಮೇಲೆ ನಿಗದಿತ ಸದಸ್ಯರು ಮಾತ್ರ ಕುಳಿತುಕೊಳ್ಳಬೇಕು. ಆಹಾರ ಮತ್ತು ಮದ್ಯ ವಿತರಣೆ ಮಾಡುವವರು ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಬಾರ್, ಪಬ್​, ಕ್ಲಬ್, ರೆಸ್ಟೋರೆಂಟ್​ ಪ್ರವೇಶಿಸುವ ಮುನ್ನ ಕೈಗಳನ್ನು ಸ್ಯಾನಿಟೈಜ್ ಮಾಡಿಕೊಳ್ಳಬೇಕು.

ಜೊತೆಗೆ ಪ್ರತಿ ಗ್ರಾಹಕರ ಮಧ್ಯೆ ಕಡ್ಡಾಯವಾಗಿ ಸಾಮಾಜಿಕ ಅಂತರ ಇರಬೇಕು. ಶೇಕಡಾ 50ರಷ್ಟು ಗ್ರಾಹಕರಿಗೆ ಮಾತ್ರ ಬಾರ್ ಒಳಗೆ ಅವಕಾಶ ನೀಡಲಾಗುತ್ತದೆ. ಮದ್ಯ ಖರೀದಿ ಮಾಡಿ ಅಲ್ಲೇ ಕುಳಿತುಕೊಂಡು ಕುಡಿಯಬಹುದು. ಹೀಗೆ ಕೆಲ ಬಿಗಿ ಮಾರ್ಗಸೂಚಿಗಳ ಮೂಲಕ ನಾಳೆ ಈ ಬಗ್ಗೆ ಅಬಕಾರಿ ಇಲಾಖೆ ಆದೇಶ ಹೊರಡಿಸಲಿದೆ.

ಒಟ್ಟಾರೆ ಕೊರೋನಾ ಹಾಗೂ ಲಾಕ್​​ಡೌನ್​ನಿಂದ ಕಳೆದ 5 ತಿಂಗಳನಿಂದ ಬಂದ್ ಆಗಿದ್ದ ಪಬ್, ಬಾರ್, ರೆಸ್ಟೋರೆಂಟ್​​​ಗಳು ಇದೀಗ ಮತ್ತೆ ತೆರೆಯುತ್ತಿದ್ದು, ಮದ್ಯ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ .
Published by:Latha CG
First published: