• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Assembly Elections Voting: ಖಾರದ ಪುಡಿ ಎರಚಿ, ಕಾರ್ ಗ್ಲಾಸ್ ಒಡೆದು ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ

Karnataka Assembly Elections Voting: ಖಾರದ ಪುಡಿ ಎರಚಿ, ಕಾರ್ ಗ್ಲಾಸ್ ಒಡೆದು ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ

ಕಾಂಗ್ರೆಸ್ ನಾಯಕನ ಮೇಲೆ ದಾಳಿ

ಕಾಂಗ್ರೆಸ್ ನಾಯಕನ ಮೇಲೆ ದಾಳಿ

Congress Leader: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು (Police) ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಹಲ್ಲೆ  ನಡೆಸಿದ ದುಷ್ಕರ್ಮಿಗಳು ಯಾರು ಎಂದು ತಿಳಿದು ಬಂದಿಲ್ಲ.

  • News18 Kannada
  • 4-MIN READ
  • Last Updated :
  • Koppal, India
  • Share this:

ಕೊಪ್ಪಳ: ಇಂದು ವಿಧಾನಸಭಾ ಚುನಾವಣೆಗೆ (Karnataka Assembly Election 2023) ಮತದಾನ ನಡೆಯಲಿದೆ. ಈ ನಡುವೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ (Kushtagi Constituency) ಕಾಟಾಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡನ (Congress Leader) ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಡಾ.ಶರಣು ಹವಾಲ್ದಾರ್ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ. ಮಂಗಳವಾರ ರಾತ್ರಿ ಸುಮಾರು 11.30ರ ವೇಳೆಗೆ ಈ ದಾಳಿ ನಡೆದಿದೆ. ಖಾರದ ಪುಡಿ ಎರಚಿ, ಕಾರ್ ಗ್ಲಾಸ್ ಒಡೆದು ಹಾಕಲಾಗಿದೆ.


ಶರಣು ಹವಾಲ್ದಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು (Police) ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಹಲ್ಲೆ  ನಡೆಸಿದ ದುಷ್ಕರ್ಮಿಗಳು ಯಾರು ಎಂದು ತಿಳಿದು ಬಂದಿಲ್ಲ.


ಜೆಡಿಎಸ್ ಅಭ್ಯರ್ಥಿಗೆ ಶಾಕ್


ಹಿರಿಯೂರು ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪಗೆ (Hiriyur JDS candidate M. Ravindrappa) ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಎಂ.ರವೀಂದ್ರಪ್ಪ ಅವರ ಪತ್ನಿ ಜಿ.ಪಿ.ಲತಾ ಹಾಗೂ ಅವರ ಸೊಸೆ ಶ್ವೇತಾ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.


ಅತ್ತ ಚಿತ್ರದುರ್ಗದಲ್ಲಿ ರಘು ಆಚಾರ್ ಮನೆಯಲ್ಲಿ ಚುನಾವಣಾ ಅಧಿಕಾರಿಗಳು ಶೋಧ ನಡೆಸಿದ್ದಾರೆ.


ಇದನ್ನೂ ಓದಿ:  Karnataka Election 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ


ಏಪ್ರಿಲ್ 28ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಾಕಷ್ಟು ದಾಖಲೆಗಳು ಲಭ್ಯವಾಗಿದ್ದು, ಅಧಿಕಾರಿಗಳು ಸೀಜ್​ ಮಾಡಿದ್ದರು. ವಿಚಾರಣೆಗೆ ಬರುವಂತೆ ರವೀಂದ್ರಪ್ಪಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು ಎನ್ನಲಾಗಿದೆ.




ಇದನ್ನೂ ಓದಿ: Karnataka Assembly Elections: ಫ್ರೀ ಊಟಕ್ಕೆ ನಿರ್ಬಂಧ ಹೇರಿದ್ದ BBMPಗೆ ಮುಖಭಂಗ! ಹೋಟೆಲ್ ಮಾಲೀಕರ ಮತಜಾಗೃತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್


2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇಕಡಾ 70.23ರಷ್ಟು ಮತದಾನವಾಗಿತ್ತು, 2018ರಲ್ಲಿ ಶೇಕಡಾ 72.13ರಷ್ಟು ಮತದಾನವಾಗಿತ್ತು. ಇದು 1952ರ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಮಾಣದ್ದಾಗಿತ್ತು.

top videos
    First published: