• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Dead Body: ಮಾಜಿ ಶಾಸಕರು ಬಾಡೂಟ ಹಾಕಿಸಿದ್ದ ಸ್ಥಳದಲ್ಲಿ ಡೆಡ್ ಬಾಡಿ! ಪೆಂಡಾಲ್‌ ಒಳಗೆ ಸತ್ತು ಮಲಗಿದ್ದವ ಯಾರು?

Dead Body: ಮಾಜಿ ಶಾಸಕರು ಬಾಡೂಟ ಹಾಕಿಸಿದ್ದ ಸ್ಥಳದಲ್ಲಿ ಡೆಡ್ ಬಾಡಿ! ಪೆಂಡಾಲ್‌ ಒಳಗೆ ಸತ್ತು ಮಲಗಿದ್ದವ ಯಾರು?

ನಿನ್ನೆ ಆಯೋಜಿಸಲಾಗಿದ್ದ ಬಾಡೂಟ

ನಿನ್ನೆ ಆಯೋಜಿಸಲಾಗಿದ್ದ ಬಾಡೂಟ

ಮಾಜಿ ಶಾಸಕರು ಹುಟ್ಟುಹಬ್ಬದ ಪ್ರಯುಕ್ತ ಬಾಡೂಟ ಹಾಕಿಸಿದ್ದ ಸ್ಥಳದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಹಾಗಿದ್ರೆ ಈ ಶವ ಯಾರದ್ದು? ಬಾಡೂಟ ನಡೆದ ಸ್ಥಳದಲ್ಲಿ ಅದು ಹೇಗೆ ಬಂತು? ಅಷ್ಟಕ್ಕೂ ಇದು ಆಕಸ್ಮಿಕ ಸಾವೋ? ಕಾಲ್ತುಳಿತವೋ ಅಥವಾ ಬೇರೆ ಕಾರಣ ಇದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ಕೋಲಾರ: ಮೊನ್ನೆಯಷ್ಟೇ ಕೋಲಾರ (Kolar) ಜಿಲ್ಲೆಯ ಕೆಜಿಎಫ್ (KGF) ವಿಧಾನಸಭಾ ಕ್ಷೇತ್ರದ (Assembly constituency) ಮಾಜಿ ಶಾಸಕ (Ex MLA) ವೈ. ಸಂಪಂಗಿ (Y. Sampangi) ಅವರು ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ (Birthday) ಆಚರಿಸಿಕೊಂಡಿದ್ದರು. ಇದರ ಖುಷಿಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು (Fans), ಬೆಂಬಲಿಗರು (Followers) ಹಾಗೂ ಸ್ಥಳೀಯರಿಗೆ ಭರ್ಜರಿ ಬಾಡೂಟವನ್ನೂ (Non Veg Meals) ಹಾಕಿಸಿದ್ದರು. ಕೋಲಾರದ ನಾಗಶೆಟ್ಟಹಳ್ಳಿ ಫಾರ್ಮ್ ಹೌಸ್ ನಲ್ಲಿ (Nagashettyhalli Farmhouse) ಮೊನ್ನೆ ಭರ್ಜರಿ ಬಾಡೂಟ ಆಯೋಜನೆಗೊಂಡಿದ್ದು, ಸಾವಿರಾರು ಮಂದಿ ಆಗಮಿಸಿ, ನನಗೊಂದು, ತನಗೊಂದು ಅಂತ ಮುಗಿ ಬಿದ್ದು, ಬಾಡೂಟ ಸವಿದಿದ್ದರು. ಹೊಟ್ಟೆ ತುಂಬಾ ಬಾಡೂಟ ತಿಂದು, ಮಾಜಿ ಶಾಸಕರಿಗೆ ಜೈಕಾರ ಹಾಕಿದ್ದರು. ಇದೀಗ ಬಾಡೂಟ ಮುಗಿದ ಮೇಲೆ ಬಾಡೂಟ ನಡೆದಿದ್ದ ಸ್ಥಳ (Place) ಮತ್ತೆ ಸುದ್ದಿಯಾಗಿದೆ. ಯಾಕೆಂದ್ರೆ ಅದೇ ಸ್ಥಳದಲ್ಲಿ  ಶವವೊಂದು (Unknown Dead Body) ಪತ್ತೆಯಾಗಿದೆ. ಹಾಗಿದ್ರೆ ಈ ಶವ ಯಾರದ್ದು? ಬಾಡೂಟ ನಡೆದ ಸ್ಥಳದಲ್ಲಿ ಅದು ಹೇಗೆ ಬಂತು? ಅಷ್ಟಕ್ಕೂ ಇದು ಆಕಸ್ಮಿಕ ಸಾವೋ? ಕಾಲ್ತುಳಿತವೋ ಅಥವಾ ಬೇರೆ ಕಾರಣ ಇದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…


ಬಾಡೂಟ ನಡೆದ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ


ಮೊನ್ನೆ ಕೆಜಿಎಫ್‌ ಮಾಜಿ ಶಾಸಕ ವೈ. ಸಂಪಂಗಿ ಬಾಡೂಟ ಆಯೋಜಿಸಿದ್ದ ಸ್ಥಳದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೊನ್ನೆ ಹುಟ್ಟು ಹಬ್ಬ ಪ್ರಯುಕ್ತ ಕೋಲಾರದ ನಾಗಶೆಟ್ಟಹಳ್ಳಿ ಫಾರ್ಮ್ ಹೌಸ್ ನಲ್ಲಿ ಭರ್ಜರಿ ಬಾಡೂಟ ಆಯೋಜಿಸಿದ್ದರು. ಇದಾದ ಮೇಲೆ ಪೆಂಡಾಲ್‌ಗಳನ್ನು ತೆಗೆಯುವಾಗ ಗ್ರೀನ್ ಕಾರ್ಪೆಟ್‌ ಒಳಗೆ ಶವವೊಂದು ಮುಚ್ಚಿಟ್ಟಿದ್ದು ಪತ್ತೆಯಾಗಿದೆ.


ಕಾಲ್ತುಳಿತಕ್ಕೆ ಒಳಗಾಗಿ ಸತ್ತಾನಾ ಅಪರಿಚಿತ ವ್ಯಕ್ತಿ?


ಪಾರ್ಟಿ ಮುಗಿದ ಮೇಲೆ ಕಾರ್ಮಿಕರು ಸ್ಥಳ ಸ್ವಚ್ಛ ಮಾಡಲು ಮುಂದಾಗಿದ್ದಾರೆ. ಈ ವೇಳೆ ಗ್ರೀನ್ ಕಾರ್ಪೆಟ್ ಕೆಳಗೆ ಅಪರಿಚಿತ ಶವ ಕಾಣಿಸಿದೆ. ಕೂಡಲೇ ಸಂಬಂಧಿಸಿದವರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಕೆಜಿಎಫ್ ಎಸ್ಪಿ ಧರಣಿದೇವಿ ಪರಿಶೀಲನೆ ಮಾಡಿದ್ರು. ಇನ್ನು  ಬಾಡೂಟಕ್ಕಾಗಿ ನೂರಾರು ಜನರು ಆಗಮಿಸಿದ್ದರು. ಈ ವೇಳೆ ಬಾಡೂಟಕ್ಕಾಗಿ ನೂಕು ನುಗ್ಗಲು ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಕುಡಿದ ಅಮಲಲ್ಲಿ ನೂಕುನುಗ್ಗಲು ವೇಳೆ ಕಾಲ್ತುಳಿತಕ್ಕೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


ಇದನ್ನೂ ಓದಿ: Belagavi: ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ್ದೇ ತಪ್ಪಾಯ್ತು, ಮಗನನ್ನೇ ಹೊಡೆಸಿದರಾ ಪಿಎಸ್ಐ?


ಅಲ್ಲಿ ಸಿಕ್ಕಿದ ಶವ ಯಾರದ್ದು?


ಕೆಜಿಎಫ್ ತಾಲೂಕಿನ ಮದ್ದಿನಾಯಕನಹಳ್ಳಿ ಗ್ರಾಮದ ನಿವಾಸಿ, 55 ವರ್ಷದ ತಾಯಲೂರಪ್ಪ ಎಂಬಾತನೇ ಅಲ್ಲಿ ಮೃತಪಟ್ಟಿರೋ ವ್ಯಕ್ತಿ. ಈತ ಬಾಡೂಟದ ಸುದ್ದಿ ತಿಳಿದು, ಅಲ್ಲಿಗೆ ಓಡೋಡಿ ಬಂದಿದ್ದ. ಕುಡಿದು ಟೈಟ್ ಆಗಿದ್ದ ಆತ, ನಡೆಯಲಾರದ ಸ್ಥಿತಿಯಲ್ಲಿ ಇದ್ದ ಅಂತ ಕೆಲವರು ಹೇಳಿದ್ದಾರೆ. ಹೀಗಾಗಿ ಕಾಲ್ತುಳಿತಕ್ಕೆ ಸಿಕ್ಕಿ ಮೃತಪಟ್ಟಿರಬಹುದು ಅಂತ ಶಂಕಿಸಲಾಗಿದೆ.


ಬಾಡೂಟಕ್ಕಾಗಿ ಮುಗಿಬಿದ್ದಿದ್ದ ಜನರು


52 ನೇ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಪ್ ಮಾಜಿ ಶಾಸಕ ವೈ ಸಂಪಂಗಿ ಆಯೋಜಿಸಿದ್ದ, ಭರ್ಜರಿ ಬಾಡೂಟದಲ್ಲಿ, ನೂರಾರು ಜನರು ಮುಗಿಬಿದ್ದಿದ್ದರು, ಅಡುಗೆ ಭಟ್ಟರನ್ನೆ ಪಕ್ಕಕ್ಕೆ ತಳ್ಳಿ ತಾ ಮುಂದು ನಾ ಮುಂದು ಎಂದು ಬಾಡೂಟ ಬಾಚಿಕೊಂಡ ಜನರು,  ಕುಳಿತು ಊಟ ಮಾಡುವ ಅವಕಾಶ ಇದ್ದರು ಬಾಡೂಟಕ್ಕಾಗಿ ಭಾರೀ ನೂಕುನುಗ್ಗಲು ಉಂಟಾಗಿತ್ತು.




ಮೊನ್ನೆ ಭರ್ಜರಿ ಬಾಡೂಟಕ್ಕಾಗಿ ಮುಗಿಬಿದ್ದಿದ್ದ ಜನರು


ಇದನ್ನೂ ಓದಿ: BBMP: ಬೀದಿ ನಾಯಿ ಕಚ್ಚಿದ್ರೆ ಬಿಬಿಎಂಪಿ ಕೊಡುತ್ತೆ ಪರಿಹಾರ; ಹಣ ಪಡೆಯೋದು ಹೇಗೆ ಗೊತ್ತಾ?


2 ಸಾವಿರಕ್ಕೂ ಅಧಿಕ ಮಂದಿಗೆ ಬಾಡೂಟ


ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ  ವಿವಿಧ ಗ್ರಾಮಗಳ ಜನರು ಭಾಗಿಯಾಗಿದ್ದು,  2 ಸಾವಿರಕ್ಕೂ ಅಧಿಕ ಜನರಿಗೆ  ಚಿಕನ್ ಬಿರಿಯಾನಿ, ಮಟನ್, ಚಿಕನ್ ಚಾಪ್ಸ್, ಮುದ್ದೆ ಊಟ ವ್ಯವಸ್ತೆ ಮಾಡಲಾಗಿತ್ತು, ಆದರೆ ಮಧ್ಯಾಹ್ನ 3 ಗಂಟೆಯಾದರು ಸರತಿ ಸಾಲಲ್ಲಿ ಊಟ ಸಿಗದ ಹಿನ್ನಲೆ ಒಮ್ಮೆಲೆ ನೂರಾರು ಜನರು ಊಟಕ್ಕಾಗಿ ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು, ಜನಜಂಗುಳಿ ಹೆಚ್ಚಾಗುತ್ತಿದ್ದಂತೆ ಅಡಿಗೆ ಪಾತ್ರೆಗಳ ಸುತ್ತುವರೆದ ಜನರು, ಮಟನ್ , ಚಿಕನ್ , ಮುದ್ದೆ ಬಾಚಿಕೊಂಡು ಪಾತ್ರೆಗಳನ್ನು ತೆಗೆದುಕೊಂಡುವ ಹೋಗುವ ದೃಶ್ಯಗಳು ಸಹಜವಾಗಿತ್ತು.

Published by:Annappa Achari
First published: