• Home
  • »
  • News
  • »
  • state
  • »
  • Kannada: ಕನ್ನಡದಲ್ಲಿ ಮಾತಾಡಿ ಪಾಸ್ ಆದ ರೈಲ್ವೆ ಸಚಿವರು; ಧಾರವಾಡ ಪೇಡೆ ಸಿಗುತ್ತೆ ಅಂತ ಅಶ್ವಿನಿ ವೈಷ್ಣವ್ ಖುಷಿ

Kannada: ಕನ್ನಡದಲ್ಲಿ ಮಾತಾಡಿ ಪಾಸ್ ಆದ ರೈಲ್ವೆ ಸಚಿವರು; ಧಾರವಾಡ ಪೇಡೆ ಸಿಗುತ್ತೆ ಅಂತ ಅಶ್ವಿನಿ ವೈಷ್ಣವ್ ಖುಷಿ

ಅಶ್ವಿನಿ ವೈಷ್ಣವ್

ಅಶ್ವಿನಿ ವೈಷ್ಣವ್

ಈ ವೇಳೆ ಮಾತನಾಡಿದ ಅಶ್ವಿನಿ ವೈಷ್ಣವ್, ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ಜನರಿಗೆ ಶರಣು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗೋಕೆ ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw, Union Minister)), ಕನ್ನಡದಲ್ಲಿ (Kannada) ಮಾತನಾಡಿ, ನನಗೆ ಧಾರವಾಡ ಪೇಡೆ (Dharwad Peda) ಸಿಗೋದು ಗ್ಯಾರಂಟಿ ಎಂದು ಸಂತಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪಂಡಿತ ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಕೇಂದ್ರ ರೈಲ್ವೆ, ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi, Union Minister) ಅವರನ್ನು ಅಶ್ವಿನ್ ಹಾಡಿ ಹೊಗಳಿದರು. ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಮಾತನಾಡಿದ ಅಶ್ವಿನ್, ಕನ್ನಡ ಮಾತನಾಡುವಲ್ಲಿ ಪಾಸ್ ಆದೆನೆಲ್ಲಾ ಅಂತ ಸಭಿಕರನ್ನು ಪ್ರಶ್ನೆ ಮಾಡಿದರು. ಪಾಸ್ ಆಗಿದ್ದೀರಿ ಅಂತ ಜನ ಹೇಳ್ತಿದ್ದಂತೆಯೇ ಸಂತಸ ವ್ಯಕ್ತಪಡಿಸಿದ ಸಚಿವರು, ಈಗಲಾದ್ರೂ ಧಾರವಾಡ ಪೇಡೆ ಸಿಗುತ್ತೆ ಎಂದು ನಕ್ಕರು.


ಪ್ರಹ್ಲಾದ್ ಜೋಶಿ ಅವರು ನನ್ನ ಗುರು. ಸಂಸತ್​ನಲ್ಲಿ ಹೇಗೆ ಭಾಷಣ ಮಾಡಬೇಕು? ಹೇಗೆ ಮುಂದಡಿ ಇಡಬೇಕು ಅನ್ನೋದನ್ನ ಜೋಶಿ ಕಲಿಸಿದ್ದಾರೆ. ಹಿರಿಯ ಸಂಪುಟ ಸಚಿವರಿದ್ದರೂ ಜೋಶಿ ಅವರಿಗೆ ಅಹಂ ಅನ್ನೋದಿಲ್ಲ. ಪರ್ವ ಪರಿಕಲ್ಪನೆ 10 ವರ್ಷಗಳ ಹಿಂದೆ ಬೇರೆಯೇ ಇತ್ತು. ಮೋದಿ ಅವರು ಪ್ರಧಾನಿಯಾದ ನಂತರ ಅದರ ಅರ್ಥವೇ ಬದಲಾಗಿದೆ ಎಂದರು.


ಅಧಿಕಾರದ ಅರ್ಥ ಸೇವೆ ಮಾಡು ಎಂದು ಮಾರ್ಪಟ್ಟಿದೆ. ಸವಾಯಿ ಗಂಧರ್ವರು ನಾಡಿನ ಹೆಸರಾಂತ ಸಂಗೀತ ವಿದ್ವಾಂಸರು. ಅವರ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ವಿಷಯ ನಮಗೆಲ್ಲರಿಗೂ ಹೆಮ್ಮೆ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.


ಪ್ರಹ್ಲಾದ್ ಜೋಶಿ ಮಾತು


ಇದೇ ವೇಳೆ ಮಾತನಾಡಿದ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸವಾಯಿ ಗಂಧರ್ವರು ಹಿಂದುಸ್ತಾನಿ ಸಂಗೀತದ ಕಂಪನ್ನ ಹರಡಿಸಿವಲ್ಲಿ ಬಹಳಷ್ಟು ಪರಿಶ್ರಮ ಪಟ್ಟವರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಅವರನ್ನ ಸಂಗೀತಕ್ಕಾಗಿ ಸಿದ್ಧಪಡಿಸಿದವರು. ಸಂಗೀತಕ್ಕೆ ಭದ್ರ ಬುನಾದಿಯನ್ನ ಹಾಕಿದವರು ಸವಾಯಿ ಗಂಧರ್ವರು ಎಂದರು.


ನಮ್ಮ ಹೆಮ್ಮೆಯ ವಿಷಯ


ಬಹಳಷ್ಟು ಜನ ಈಗ ಜಾತಿ ಜಾತಿಯಲ್ಲಿ ಬಡದಾಡುತ್ತಿದ್ದಾರೆ. ಮೈಸೂರು ಆಸ್ಥಾನದ ಪಂಡಿತರಾದ ಅಬ್ದುಲ್ ಕರೀಮ್ ಖಾನ್, ಸವಾಯಿ ಗಂಧರ್ವರಿಗೆ ಕರೆದುಕೊಂಡು ಹೋಗಿ ಸಂಗೀತ ಕಲಿಸಿದ್ದರು. ಅಬ್ದುಲ್ ಕರೀಮ್ ಖಾನ್ ಅವರ ಗರಡಿ ಮನೆಯಲ್ಲಿ ಬೆಳೆದವರು ಸವಾಯಿ ಗಂಧರ್ವರು‌. ಈ ಮಣ್ಣು ಸಂಗೀತಕ್ಕಾಗಿ ಬಹಳಷ್ಟು ಮಹಾ ಪುರುಷರನ್ನ ನೀಡಿದೆ. ಇವತ್ತು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ನಮ್ಮ ಹೆಮ್ಮೆಯ ವಿಷಯ ಎಂದರು.


ರೈಲ್ವೆ ಯೋಜನೆಗಳ ಉದ್ಘಾಟನೆ


ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮೂರನೇ ದ್ವಾರ, ಹುಬ್ಬಳ್ಳಿ - ನಿಜಾಮುದ್ದೀನ್ ರೈಲಿಗೆ ಹಸಿರು ನಿಶಾನೆ, ಮರು ರೂಪಿತಗೊಂಡ ಹುಬ್ಬಳ್ಳಿ ಯಾರ್ಡ್ ಉದ್ಘಾಟನಾ ಸಮಾರಂಭ ನಡೆಯಿತು.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಹಾಲಪ್ಪ ಆಚಾರ್, ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅರವಿಂದ್ ಬೆಲ್ಲದ್, ಪ್ರದೀಪ್ ಶೆಟ್ಟರ್, ಸಂಕನೂರ ಮತ್ತಿತರರ ಉಪಸ್ಥಿತರಿದ್ದರು.


ಇದನ್ನೂ ಓದಿ:  Naked Man: ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ! ಈ ಯುವಕನ ಬಗ್ಗೆ ಹುಷಾರ್ ಹುಷಾರ್


ಕನ್ನಡದಲ್ಲಿ ಮಾತು ಆರಂಭಿಸಿದ ಸಚಿವರು


ಈ ವೇಳೆ ಮಾತನಾಡಿದ ಅಶ್ವಿನಿ ವೈಷ್ಣವ್, ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ಜನರಿಗೆ ಶರಣು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.


ಹುಬ್ಬಳ್ಳಿ ಮಣ್ಣಿನಲ್ಲಿ ಅದೇನೋ ವಿಶೇಷ ಅನುಭೂತಿಯಿದೆ. ಹೀಗಾಗಿ ಈ ಮಣ್ಣಿನ ಪ್ರಹ್ಲಾದ್ ಜೋಶಿಯವರನ್ನು ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲರೂ ಗುರು ಎಂದು ಭಾವಿಸುತ್ತೇವೆ. ಜೋಶಿಯವರು ದೇಶದ ಗಣಿಗಾರಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ.


ಶಬರಿಮಲೆ ದರ್ಶನಕ್ಕೆ ಹುಬ್ಬಳ್ಳಿಯಿಂದ ಆದಷ್ಟು ಶೀಘ್ರ ವಿಶೇಷ ರೈಲು ಸೇವೆ ಪ್ರಾರಂಭಿಸುತ್ತೇವೆ. ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ ರೈಲ್ವೇ ಇಲಾಖೆಗೆ 6000 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದಾರೆ.ಮೋದಿಯವರು ಅಭಿವೃದ್ಧಿ ವಿಷಯ ಬಂದಾಗ ತಾವೂ ಮಲಗಲ್ಲ, ನಮ್ಮನ್ನೂ ಮಲಗಲು ಬಿಡಲ್ಲ. ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡುವ ಗುರಿ ಮೋದಿಯವರದ್ದಾಗಿದೆ.


ಇದನ್ನೂ ಓದಿ:  Dalit Family: ದಲಿತ ಕಾರ್ಮಿಕರನ್ನು ಹಲ್ಲೆಗೈದು ಕೊಠಡಿಯಲ್ಲಿ ಕೂಡಿ ಹಾಕಿದ ಮಾಲೀಕ; ತೀವ್ರ ರಕ್ತಸ್ರಾವವಾಗಿ ಮಹಿಳೆಗೆ ಗರ್ಭಪಾತ


ವಂದೇ ಮಾತರಂ ರೈಲಿನ ಬಗ್ಗೆ ಮೆಚ್ಚುಗೆ


ವಂದೇ ಮಾತರಂ ಟ್ರೈನ್ ಗಂಟೆಗೆ 180 ಕಿಲೋ ಮೀಟರ್ ಓಡುತ್ತೆ. ಭಾರತದಲ್ಲಿ ನಿರ್ಮಾಣವಾದ ಈ ಟ್ರೈನ್ ಜಗತ್ತನ್ನು ನಿಬ್ಬೆರಗಾಗಿಸಿದೆ. ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಓಡುವ ರೈಲಿನಲ್ಲಿ ನೀರಿನ ಗ್ಲಾಸ್ ಇಟ್ಟು ಚೆಕ್ ಮಾಡಿದ್ದೇವೆ. ವಂದೇ ಭಾರತ್ ಟ್ರೈನ್ ಆದಷ್ಟು ಬೇಗ ಹುಬ್ಬಳ್ಳಿ- ಧಾರವಾಡಕ್ಕೆ ಬರಲಿದೆ. ಹುಬ್ಬಳ್ಳಿ- ಧಾರವಾಡ ಭಾಗದ ರೈಲ್ವೇ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವ ಭರವಸೆ ನೀಡುತ್ತೇನೆ ಎಂದರು.

Published by:Mahmadrafik K
First published: