HOME » NEWS » State » UNION MINISTER SRIPAD NAIK CAR ACCIDENT CASE HERE IS THE REASON BEHIND ACCIDENT DKK LG

ಶ್ರೀಪಾದ ನಾಯ್ಕ್ ಕಾರು ಅಪಘಾತ ಪ್ರಕರಣ; ಗೋಕರ್ಣಕ್ಕೆ ಹೋಗಲು ರಸ್ತೆ ಬದಲಾಯಿಸಿದ್ದೇ ದುರಂತಕ್ಕೆ ಕಾರಣವಾಯ್ತಾ?

ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಆಗಮಿಸಬೇಕಾಗಿದ್ದವರು, ಕಡಿಮೆ ದೂರದ ಹಿನ್ನೆಲೆಯಲ್ಲಿ ಯಲ್ಲಾಪುರ ಹೊಸಕಂಬಿ ಗೋಕರ್ಣದ ಕಿರಿದಾದ ರಸ್ತೆಯಲ್ಲಿ ಆಗಮಿಸಿದ್ದರು. ಆ ವೇಳೆ ಬೆಂಗಾವಲು ವಾಹನ ಹಿಂದೆಯೇ ಇತ್ತು ಎನ್ನಲಾಗಿದೆ. ಆದರೆ ಮಾರ್ಗಮಧ್ಯೆ ಹೊಸಕಂಬಿ ಬಳಿ ರಸ್ತೆ ಕಾಮಗಾರಿ ಅರೆಬರೆಯಾಗಿತ್ತು. ವೇಗವಾಗಿ ಬಂದ ಕಾರಿನ ಗಾಲಿಗಳು ರಸ್ತೆ ಒಂದು ಬದಿ ಹೊಂಡಕ್ಕೆ ಬಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದು ಮರಕ್ಕೆ ಬಡಿದಿದೆ.

news18-kannada
Updated:January 12, 2021, 8:15 AM IST
ಶ್ರೀಪಾದ ನಾಯ್ಕ್ ಕಾರು ಅಪಘಾತ ಪ್ರಕರಣ; ಗೋಕರ್ಣಕ್ಕೆ ಹೋಗಲು ರಸ್ತೆ ಬದಲಾಯಿಸಿದ್ದೇ ದುರಂತಕ್ಕೆ ಕಾರಣವಾಯ್ತಾ?
ಸಚಿವರ ಕಾರು ಅಪಘಾತದ ದೃಶ್ಯ
  • Share this:
ಕಾರವಾರ (ಜ.12):ವಿಧಿಯ ಆಟದ ಮುಂದೆ ಕೋಟಿ ದೇವರು ಸುತ್ತಿದರೇನು? ಬ್ರಹ್ಮ ಲಿಖಿತ ಏನು‌ ಇದೆಯೋ ಹಾಗೆ ಆಗಬೇಕು ಎನ್ನೋದಕ್ಕೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ ವಾಗಿ ಶ್ರೀಪಾದ ನಾಯ್ಕ್ ಪತ್ನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆಯೇ ಸಾಕ್ಷಿ. ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಹೆದ್ದಾರಿ ಬದಲು ಕಡಿಮೆ ದೂರ ಇರುವ ಕಾರಣ ಒಳ ರಸ್ತೆಯಲ್ಲಿ ಆಗಮಿಸಿದ್ದು, ಅರೆಬರೆ ರಸ್ತೆ ಕಾಮಗಾರಿಯಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಸಚಿವರ ಪತ್ನಿ ವಿಜಯಾ ಹಾಗೂ ಆರ್.ಎಸ್.ಎಸ್ ಪ್ರಚಾರಕ ದೀಪಕ್ ದುಬೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೋಕರ್ಣಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ರಸ್ತೆ ಬದಲಿಸಿದ್ದೆ ಅಪಘಾತಕ್ಕೆ ಕಾತಣವಾಯ್ತಾ?

ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಆಗಮಿಸಬೇಕಾಗಿದ್ದವರು, ಕಡಿಮೆ ದೂರದ ಹಿನ್ನೆಲೆಯಲ್ಲಿ ಯಲ್ಲಾಪುರ ಹೊಸಕಂಬಿ ಗೋಕರ್ಣದ ಕಿರಿದಾದ ರಸ್ತೆಯಲ್ಲಿ ಆಗಮಿಸಿದ್ದರು. ಆ ವೇಳೆ ಬೆಂಗಾವಲು ವಾಹನ ಹಿಂದೆಯೇ ಇತ್ತು ಎನ್ನಲಾಗಿದೆ. ಆದರೆ ಮಾರ್ಗಮಧ್ಯೆ ಹೊಸಕಂಬಿ ಬಳಿ ರಸ್ತೆ ಕಾಮಗಾರಿ ಅರೆಬರೆಯಾಗಿತ್ತು. ವೇಗವಾಗಿ ಬಂದ ಕಾರಿನ ಗಾಲಿಗಳು ರಸ್ತೆ ಒಂದು ಬದಿ ಹೊಂಡಕ್ಕೆ ಬಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದು ಮರಕ್ಕೆ ಬಡಿದಿದೆ. ತಕ್ಷಣ ಸಚಿವರನ್ನು ಹಾಗೂ ಅವರ ಪತ್ನಿಯನ್ನು ಬೆಂಗಾವಲು ವಾಹನ ‌ಹಾಗೂ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಯುವಕರು ಮಾಹಿತಿ ನೀಡಿದ್ದಾರೆ.

ಒಳ ರಸ್ತೆಯಲ್ಲಿ ಬಂದಿದ್ದೇ ಸಚಿವರಿಗೆ ಕಂಟಕವಾಯ್ತಾ?

ಗಂಭೀರವಾಗಿ ಗಾಯಗೊಂಡಿದ್ದ ಸಚಿವರ ಪತ್ನಿ ವಿಜಯಾ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ. ಬಳಿಕ ಆರ್‌.ಎಸ್.ಎಸ್ ಪ್ರಚಾರಕ ದೀಪಕ್ ದುಬೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಸಚಿವ ಶ್ರೀಪಾದ್ ಎಡಗೈಗೆ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿಗೆ ಸಾಗಿಸಲಾಗಿದೆ.

ಗಂಭೀರ ಗಾಯಗೊಂಡಿದ್ದ ಗನ್‌ಮ್ಯಾನ್ ತುಕಾರಾಮ ಪಾಟೀಲ್, ಚಾಲಕ ಚಂದನ್ ಹಾಗೂ ಸಾಯಿಕಿರಣ ಶೆಟಿಯಾ ಎಂಬುವವರಿಗೆ ಅಂಕೋಲಾ ಖಾಸಗಿ ಆಸ್ಪತ್ರೆಯಿಂದ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಿದ್ದರಾಮಯ್ಯಗೆ ಗೋ ಶಾಪ ತಟ್ಟಲಿದೆ; ಸಚಿವ ಕೆ ಎಸ್​ ಈಶ್ವರಪ್ಪ

ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿರುವ ಮೆಡಿಕಲ್ ಕಾಲೇಜಿನ ನಿರ್ದೇಶಕ ಗಜಾನನ ನಾಯಕ, ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಕೂಡ ಸ್ಕ್ಯಾನಿಂಗ್ ಮಾಡಬೇಕಿದೆ. ಆದರೆ, ಸದ್ಯ ಯಾವುದೇ ತೊಂದರೆ ಇಲ್ಲದಂತೆ ಕಂಡುಬಂದಿದ್ದು ಆಸ್ಪತ್ರೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್, ಎಸ್ಪಿ ಶಿವಪ್ರಕಾಶ್ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಬಿಜೆಪಿ ಪ್ರಮುಖರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ದೇವಾಲಯ ಸುತ್ತಿ ಬಂದರೂ ದೇವರು ಕಾಪಾಡಲಿಲ್ಲ

ಘಟನೆ ದಿನ‌ ಶ್ರೀಪಾದ್ ನಾಯ್ಕ್‌ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಂಟೆ ಗಣಪತಿ‌ ದೇವಾಲಯಕ್ಕೆ ತೆರಳಿ‌ ವಿಶೇಷ ಪೂಜೆ ಸಲ್ಲಿಸಿದ್ರು. ಅಲ್ಲಿಯೆ ಕೆಲಹೊತ್ತು ತಂಗಿ ಧಾರ್ಮಿಕ ಕಾರ್ಯ ನೆರವೇರಿಸಿದರು, ಬಳಿಕ ಇನ್ನೊಂದು ಖಾಸಗಿ ಕಾರ್ಯಕ್ರಮದಲ್ಲಿ‌ ಭಾಗಿಯಾಗಿ‌ ಹೋಮ‌-ಹವನ ನೆರವೇರಿಸಿದ್ರು . ಈಶ್ವರ‌ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದರು. ಹೀಗೆ ಯಲ್ಲಾಪುರದಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸ್ ಬರುತ್ತಾ ಗೋಕರ್ಣ ಮಹಾಬಲೇಶ್ವರ ದರ್ಶನ ಪಡೆದು ಗೋವಾಗೆ ಹೋದ್ರಾಯಿತು ಅಂತಾ ಗೋಕರ್ಣ ಹೋಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಇಷ್ಟೆಲ್ಲ ದೇವಾಲಯ ಸುತ್ತಿ ಪೂಜೆ‌-ಪುನಸ್ಕಾರ ಮಾಡಿದ್ರು ಅಪಘಾತ ತಪ್ಪಿಲ್ಲ. ವಿಧಿಯ ಆಟದ ಮುಂದೆ ಎಲ್ಲವೂ ನಶ್ವರ ಎಂಬಂತಾಗಿದೆ. ಈಗ ಪತ್ನಿಯನ್ನ ಕಳೆದುಕೊಂಡ ಶ್ರೀಪಾದ್ ನಾಯ್ಕ್‌ ಗೋವಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published by: Latha CG
First published: January 12, 2021, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories