• Home
  • »
  • News
  • »
  • state
  • »
  • ಶಿಕ್ಷಣ & ಉದ್ಯೋಗಕ್ಕೆ ಧರ್ಮವಿಲ್ಲ, ಮಕ್ಕಳೇ ಶಾಲೆಗೆ ಬನ್ನಿ: ಕೇಂದ್ರ ಸಚಿವ Shobha Karandlaje ಕರೆ

ಶಿಕ್ಷಣ & ಉದ್ಯೋಗಕ್ಕೆ ಧರ್ಮವಿಲ್ಲ, ಮಕ್ಕಳೇ ಶಾಲೆಗೆ ಬನ್ನಿ: ಕೇಂದ್ರ ಸಚಿವ Shobha Karandlaje ಕರೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಶಾಲೆಯ ಪ್ರಾಂಶುಪಾಲರು ಶಿಕ್ಷಕರು ನಿಮ್ಮ ರಕ್ಷಣೆ ಮಾಡುತ್ತಾರೆ. ಯಾರು ಕೂಡ ಆತಂಕಪಡುವ ಅಗತ್ಯವಿಲ್ಲ. ಪರೀಕ್ಷೆ ಬರೆಯಿರಿ ಚೆನ್ನಾಗಿ ಓದಿ ಉದ್ಯೋಗ ಪಡೆಯಿರಿ. ಹಿಂದೂ- ಮುಸಲ್ಮಾನ ಹೆಣ್ಣು ಮಕ್ಕಳು ಸ್ವಂತ ಕಾಲ ಮೇಲೆ ನಿಲ್ಲಬೇಕು.

  • Share this:

Hijab Row: ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ವಿವಾದದ ಕುರಿತಾಗಿ ಉಡುಪಿ(Udupi)ಯಲ್ಲಿ ಕೇಂದ್ರ ಕೃಷಿ ಸಚಿವ ಶೋಭಾ ಕರಂದ್ಲಾಜೆ (Shobha Karandlaje) ಪ್ರತಿಕ್ರಿಯೆ ನೀಡಿದರು.ದೇಶದ ಸಂವಿಧಾನ(constitution of india)ವನ್ನು ಪ್ರತಿಯೊಬ್ಬ ನಾಗರಿಕ ಗೌರವಿಸಬೇಕು. ನೆಲದ ಕಾನೂನನ್ನು- ಪ್ರತಿಯೊಬ್ಬ ನಾಗರಿಕ ಗೌರವಿಸಬೇಕು. ಆದರೆ ಸಂವಿಧಾನಕ್ಕಿಂತ ನಾವು ಮೇಲು ಎಂದು ಕೆಲವರಿಗೆ ಅನಿಸಿದೆ. ಹೈಕೋರ್ಟ್ ತೀರ್ಪಿ(Karnataka High court)ಗಿಂತಲೂ ನಾವು ಮೇಲು ಎಂಬ ದಾರ್ಷ್ಟ್ಯ ತೋರಿಸುತ್ತಿದ್ದಾರೆ. ಕಾನೂನಿನಂತೆ ಈ ವರ್ತನೆಗೆ ಶಿಕ್ಷೆ ಆಗುವ ಅನಿವಾರ್ಯತೆ ಇದೆ ಎಂದರು. ನಮ್ಮ ಮಕ್ಕಳಿಗೆ ಬೇಕಾಗಿರುವುದು ಉತ್ತಮ ಶಿಕ್ಷಣವಾಗಿದೆ. ಉದ್ಯೋಗ ಮತ್ತು ಶಿಕ್ಷಣಕ್ಕೆ (Job And Education) ಧರ್ಮ ಇಲ್ಲ. ಮಕ್ಕಳು ಓದಬೇಕು ಉದ್ಯೋಗ ಪಡೆಯಬೇಕು ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂದು ಹೇಳಿದರು.


ಮುಸಲ್ಮಾನ ಹೆಣ್ಣು ಮಕ್ಕಳು ಕೂಡ ಒಳ್ಳೆಯ ಶಿಕ್ಷಣ ಪಡೆಯಬೇಕು. ಆದರೆ ಬಡ ಹೆಣ್ಣು ಮಕ್ಕಳನ್ನು ಹಿಜಾಬ್ ಹೆಸರಲ್ಲಿ ಪ್ರಚೋದಿಸಲಾಗುತ್ತಿದೆ. ಶ್ರೀಮಂತರಿಗೆ ಹಿಜಾಬ್ ಜೊತೆ ಯಾವುದೇ ಸಂಬಂಧವಿಲ್ಲ. ಬಡ ಹೆಣ್ಣು ಮಕ್ಕಳನ್ನು ಪ್ರಚೋದನೆ ಮಾಡಿ ಈ ಕೃತ್ಯ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.


ಮಕ್ಕಳೇ ದಯಮಾಡಿ ಶಾಲೆಗೆ ಬನ್ನಿ


ಶಾಲೆಗೆ ಬೇಕಾದರೂ ಹೋಗಲ್ಲ ಆದರೆ ಹಿಜಾಬ್ ಅಗತ್ಯ ಎನ್ನುತ್ತಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ಯಾವುದೋ ಸಂಘಟನೆ ಈ ಕೆಲಸ ಮಾಡುತ್ತಿದೆ ಎಂದು ಹೈಕೋರ್ಟ್ ಕೂಡ ಹೇಳಿದೆ. ಇದರ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚಬೇಕಾಗಿದೆ. ಎಲ್ಲಾ ಮಕ್ಕಳು ದಯಮಾಡಿ ಶಾಲೆಗೆ ಬನ್ನಿ ಎಂದು ಮನವಿ ಮಾಡಿಕೊಂಡರು.


ಇದನ್ನೂ ಓದಿ:  Bhagavad Gita: ರಾಜ್ಯದ ಶಾಲೆಗಳಲ್ಲಿ ಸದ್ಯಕ್ಕಿಲ್ಲ ಭಗವದ್ಗೀತಾ ಕಲಿಕೆ! ಗುಜರಾತ್‌ ಶಾಲೆಗಳಲ್ಲಿ ಬೋಧನೆ


ಶಾಲೆಯ ಪ್ರಾಂಶುಪಾಲರು ಶಿಕ್ಷಕರು ನಿಮ್ಮ ರಕ್ಷಣೆ ಮಾಡುತ್ತಾರೆ. ಯಾರು ಕೂಡ ಆತಂಕಪಡುವ ಅಗತ್ಯವಿಲ್ಲ. ಪರೀಕ್ಷೆ ಬರೆಯಿರಿ ಚೆನ್ನಾಗಿ ಓದಿ ಉದ್ಯೋಗ ಪಡೆಯಿರಿ. ಹಿಂದೂ- ಮುಸಲ್ಮಾನ ಹೆಣ್ಣು ಮಕ್ಕಳು ಸ್ವಂತ ಕಾಲ ಮೇಲೆ ನಿಲ್ಲಬೇಕು. ಕೈಗೆ ದುಡ್ಡು ಬಂದರೆ ಆಗ ಮಹಿಳೆಯರಿಗೆ ಧ್ವನಿ ಬರುತ್ತೆ. ಎಲ್ಲ ಧರ್ಮದವರಿಗೂ ಇದು ಅನ್ವಯವಾಗುತ್ತದೆ. ನಿಮ್ಮ ಜೀವನದಲ್ಲಿ ಕಷ್ಟ ಬಂದಾಗ ಯಾವುದೇ ಸಂಘಟನೆಗಳು ಬರುವುದಿಲ್ಲ. ಯಾರದೋ ಪಿತೂರಿಗೆ ಬಲಿಯಾಗಬೇಡಿ ಎಂದು ಕಳವಳ ವ್ಯಕ್ತಪಡಿಸಿದರು.


ನವೀನ್ ಮೃತದೇಹ ಕರ್ನಾಟಕಕ್ಕೆ ಬರೋದು ಯಾವಾಗ?


ಇದೇ ವೇಳೆ ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಬಲಿಯಾಗಿರುವ ನವೀನ್ ಮೃತದೇಹ ತವರಿಗೆ ವಾಪಸು ತರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಯುದ್ಧದ ಕಾರಣಕ್ಕೆ ಸತ್ತಂತಹ ಏಕೈಕ ಭಾರತೀಯ ನವೀನ್. ಇನ್ನೋರ್ವ ವಿದ್ಯಾರ್ಥಿ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ನವೀನ್ ಮೃತದೇಹವನ್ನು ಕಾಯ್ದಿರಿಸಲಾಗಿದೆ. ಅನಾರೋಗ್ಯದಿಂದ ಮೃತನಾದ ವ್ಯಕ್ತಿಯ ಮೃತದೇಹ ಭಾರತಕ್ಕೆ ಬಂದಿದೆ. ಹತ್ತು ದಿನಗಳ ಹಿಂದೆಯೇ ಒಂದು ಮೃತದೇಹ ಬಂದಿದೆ. ಯುದ್ಧದ ವಾತಾವರಣ ಇನ್ನೂ ಜೀವಂತ ಇರುವುದಿಂದ ನವೀನ ಮೃತದೇಹ ಬರಲಿಲ್ಲ


ಉಕ್ರೇನ್ ಒಳಗೆ ಹೋಗಿ ಮೃತದೇಹ ತರುವುದು ಕಷ್ಟಕರವಾಗುತ್ತಿದೆ. ಆಯಾ ದೇಶಗಳ ಜೊತೆ ಸಂಬಂಧ ಉತ್ತಮ ಇದ್ದ ಕಾರಣ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಸಾಧ್ಯವಾಯಿತು. ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಕರೆತಂದಿದ್ದೇವೆ. ಸುಮಾರು 90 ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು ಕರೆತಂದಿದ್ದೇವೆ. ನವೀನ ಅವರ ಮೃತದೇಹ ತರುವುದಕ್ಕೂ ಭಾರತ ಸರ್ಕಾರ ಪ್ರಯತ್ನ ಮಾಡುತ್ತಿದೆ


ಉಕ್ರೇನ್ ಜೊತೆ ಭಾರತದ ಸಂಪರ್ಕ


ಸಂಸತ್ತಿನಲ್ಲೂ ಕೂಡ ಈ ಬಗ್ಗೆ ಹೇಳಿಕೆ ನೀಡಲಾಗಿದೆ. ಸ್ವತಃ ಪ್ರಧಾನಿಯವರು ಮತ್ತು ವಿದೇಶಾಂಗ ಸಚಿವರು ಇದರ ಬಗ್ಗೆ ಕಾಳಜಿ ವಹಿಸಿದ್ದಾರೆ. ಖಂಡಿತವಾಗಿಯೂ ಮೃತದೇಹ ತರಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ರಾಷ್ಟ್ರ ಜೊತೆ ಈ ದೃಷ್ಟಿಯಿಂದ ಭಾರತ ಸರ್ಕಾರ ಸಂಪರ್ಕದಲ್ಲಿದೆ ಎಂದರು.


ಕಾಂಗ್ರೆಸ್  ವೋಟ್ ಬ್ಯಾಂಕ್ ರಾಜಕೀಯ ಮಾಡಿದ ಪರಿಣಾಮ ಈಗ ನಾಪತ್ತೆಯಾಗಿದೆ. ಐದು ದಶಕಗಳ ಕಾಲ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ರಾಜ್ಯಬಾರ ಮಾಡಿತ್ತು. ಉತ್ತರಪ್ರದೇಶ ಗೆದ್ದರೆ ದೇಶ ಗೆದ್ದಂತೆ ಎಂಬ ಭಾವನೆಯಿತ್ತುಈಗ ಕಾಂಗ್ರೆಸ್ ನ ಪರಿಸ್ಥಿತಿ ಏನಾಗಿದೆ ನೋಡಿ ಎಂದು ವ್ಯಂಗ್ಯವಾಡಿದರು.


ಕಾಂಗ್ರೆಸ್ ನವರಿಗೆ ಬುದ್ಧಿ ಬಂದಿಲ್ಲ


ಓಲೈಕೆ ರಾಜಕಾರಣದಿಂದ ಕೆಳಹಂತಕ್ಕೆ ಬಿದ್ದಿದ್ದಾರೆ, ಇಷ್ಟಾದರೂ ಅವರಿಗೆ ಬುದ್ಧಿ ಬಂದಿಲ್ಲ. ಕರ್ನಾಟಕದಲ್ಲಿ ಸ್ವಲ್ಪ ಕಾಂಗ್ರೆಸ್ ಉಸಿರಾಡುತ್ತಿದೆ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸೇರಿ ಕಾಂಗ್ರೆಸ್ ಪಕ್ಷವನ್ನು ಉಸಿರುಗಟ್ಟಿಸುತ್ತಾರೆ. ಸಿದ್ದರಾಮಯ್ಯ ಸ್ವತಹ ವಕೀಲರಾಗಿದ್ದವರು. ಈ ಹೈಕೋರ್ಟ್ ತೀರ್ಪನ್ನು ವಿಧಾನಸಭೆಯಲ್ಲಿ ಅವರು ವಿರೋಧಿಸುತ್ತಾರೆ ಅಂದರೆ ಏನು ಅರ್ಥ. ಸಿದ್ದರಾಮಯ್ಯನವರ ಮಾನಸಿಕತೆ ಏನು ಅನ್ನೋದು ಜನರಿಗೆ ಅರ್ಥವಾಗುತ್ತಿದೆ. ಕಾಂಗ್ರೆಸ್ ನಾಯಕರೇ ಕಾಂಗ್ರೆಸನ್ನು ಮುಳುಗಿಸುತ್ತಾರೆ ಎಂದು ಭವಿಷ್ಯ ನುಡಿದರು.


ಇದನ್ನೂ ಓದಿ:  MM Kalburgi Case: ನಮ್ಮ‌ ತಂದೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಇವರೇ: ಕಣ್ಣೀರು ಹಾಕಿದ ಕಲಬುರ್ಗಿ ಅವರ ಪುತ್ರಿ


ಕರ್ನಾಟಕವನ್ನು ಮತ್ತೊಂದು ಕಾಶ್ಮೀರ ಮಾಡಲು ಬಿಡುವುದಿಲ್ಲ. ಕಾಶ್ಮೀರ ಫೈಲ್ಸ್ ಚಿತ್ರ ನೋಡಬೇಕು. ಜಗಮೋಹನ್ ಅವರು ಬರೆದ ಪುಸ್ತಕವನ್ನು ಓದಿದ್ದೇನೆ. ಕಾಶ್ಮೀರಿ ಪಂಡಿತರ ಸ್ಥಿತಿಯನ್ನು ಸ್ವತಃ ಅವರ ಕ್ಯಾಂಪುಗಳಲ್ಲಿ ಕಂಡಿದ್ದೇನೆ ಎಂದರು.

Published by:Mahmadrafik K
First published: