ಸೋಮಶೇಖರ್​ ಫೈರ್​ ಬ್ರಾಂಡ್​ ವ್ಯಕ್ತಿ; ಅವರು ಬಿಜೆಪಿಗೆ ಫಿಟ್​; ಕೇಂದ್ರ ಸಚಿವ ಸದಾನಂದಗೌಡ

Latha CG | news18-kannada
Updated:November 22, 2019, 10:20 PM IST
ಸೋಮಶೇಖರ್​ ಫೈರ್​ ಬ್ರಾಂಡ್​ ವ್ಯಕ್ತಿ; ಅವರು ಬಿಜೆಪಿಗೆ ಫಿಟ್​; ಕೇಂದ್ರ ಸಚಿವ ಸದಾನಂದಗೌಡ
ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ
  • Share this:
ಬೆಂಗಳೂರು(ನ.22): ಮೈತ್ರಿ ಸರ್ಕಾರ ಸ್ವಾರ್ಥ ರಾಜಕಾರಣಕ್ಕೆ ಮುಂದಾಗಿತ್ತು.  ಅಭಿವೃದ್ಧಿ ಪರ ಯಾರೂ ಕೆಲಸ ಮಾಡಲಿಲ್ಲ.ಸೋಮಶೇಖರ್ ಫೈರ್‌ ಬ್ರಾಂಡ್  ವ್ಯಕ್ತಿ.  ಅಭಿವೃದ್ಧಿಯಲ್ಲಿ ಯಾವತ್ತೂ ಹಿಂದೆ ಉಳಿದಿರಲಿಲ್ಲ. ಎಸ್​​.ಟಿ.  ಸೋಮಶೇಖರ್ ಕಾಂಗ್ರೆಸ್‌ಗಲ್ಲ ಬಿಜೆಪಿಗೆ ಫಿಟ್ ಅನ್ನಿಸುತ್ತಿತ್ತು, ಅದು ಈಗ ಆಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅನರ್ಹ  ಶಾಸಕ, ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಟಿ.ಸೋಮಶೇಖರ್​ ಫೈರ್​​ ಬ್ರಾಂಡ್​ ವ್ಯಕ್ತಿ ಎಂದು ಶ್ಲಾಘಿಸಿದರು. ಸೇರಿದರೆ ಉತ್ತಮ‌ ಅಭಿವೃದ್ಧಿ ಆಗುತ್ತೆ ಅಂತ ನನಗೆ ಭಾವನೆ ಇತ್ತು.ಅಭಿವೃದ್ಧಿ ವಿಚಾರದಲ್ಲಿ ಸೋಮಶೇಖರ್ ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ಫೈರ್‌ ಬ್ರಾಂಡ್ ಶೋಭಾ ಹಾಗೂ ಫೈರ್‌ಬ್ರಾಂಡ್ ಸೋಮಶೇಖರ್ ಒಬ್ಬರಿಗೊಬ್ಬರು ಫೈರ್ ಮಾಡಿಕೊಳ್ಳುತ್ತಿದ್ದರು.ಇವಾಗ ಇಬ್ಬರು ಸೇರಿ ಯಶವಂತಪುರ ಅಭಿವೃದ್ಧಿಗೆ ಫೈರ್ ಮಾಡಲಿದ್ದಾರೆ. ನನ್ನ ಕ್ಷೇತ್ರದಲ್ಲಿ ಇನ್ನು ಮುಂದೆ ಅಭಿವೃದ್ಧಿಗಾಗಿ ಐದು ಗೂಟದ ಕಾರುಗಳು ಓಡಾಡುತ್ತವೆ," ಎಂದರು.

ಉಪಚುನಾವಣೆ ವಾಸ್ತವ ವರದಿ | ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ, ಹೆಸರಿಗಷ್ಟೇ ಜೆಡಿಎಸ್

ಮುಂದುವರೆದ ಅವರು, "ಕೆಲವರು ಮನೆಯಲ್ಲಿ ಕುಳಿತು ಅಳುವುದನ್ನು ಕೇಳಿದೆ. ಕೆಲವರು ಹೆಂಗಸರ ಜೊತೆ ಮಾತನಾಡುವುದನ್ನು ಕೇಳಿದೆ. ಸಿದ್ದರಾಮಯ್ಯನವರದು ದಯನೀಯ ಪರಿಸ್ಥಿತಿಯಾಗಿದೆ. ಪರಮೇಶ್ವರ್​​, ಮಲ್ಲಿಕಾರ್ಜುನ ಖರ್ಗೆ, ಹೆಚ್ ಕೆ ಪಾಟಿಲ್, ಮುನಿಯಪ್ಪ, ವೀರಪ್ಪ ಮೊಯ್ಲಿ ಇವರ್ಯಾರು ಸಿದ್ದರಾಮಯ್ಯ ಜೊತೆ ಇಲ್ಲ. ಸಿದ್ದರಾಮಯ್ಯ ಈಗ ಏಕಾಂಗಿ," ಎಂದು ಲೇವಡಿ ಮಾಡಿದರು.

"ಜೆಡಿಎಸ್ -ಕಾಂಗ್ರೆಸ್ ಈಗಾಗಲೇ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅದ್ಯಾವಾಗ ಕಿತ್ತಾಡುತ್ತಾರೋ, ಅದ್ಯಾವಾಗ ಒಂದಾಗುತ್ತಾರೋ ಗೊತ್ತಾಗ್ತಿಲ್ಲ. 15 ಜನರನ್ನು ಸೋಲಿಸುವುದೇ ನಮ್ಮ ಗುರಿ ಅಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರೆ, ನಮ್ಮದು ಅದೇ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ," ಎಂದು ವ್ಯಂಗ್ಯ ಮಾಡಿದರು.

ಜೆಡಿಎಸ್​ಗೆ ದ್ರೋಹ ಬಗೆದ ಗೋಪಾಲಯ್ಯಗೆ ಛೀಮಾರಿ ಹಾಕಿ: ಜನರಿಗೆ ಸಿದ್ದರಾಮಯ್ಯ ಕರೆ

ಯಶವಂತಪುರ ಕ್ಷೇತ್ರದಲ್ಲಿ ಸೋಮಶೇಖರ್ ಜೊತೆ ಶೇ. 95ರಷ್ಟು ಕಾಂಗ್ರೆಸಿಗರು ಬಿಜೆಪಿಗೆ ಬಂದಿದ್ದಾರೆ. ನಮ್ಮ ಕ್ಷೇತ್ರದ ಕಾರ್ಯಕರ್ತರು ನೂರಕ್ಕೆ ನೂರು ಬಿಜೆಪಿಯವರು ಎಂದು ನಾನು ಮೋದಿಯವರ ಬಳಿ ಹೇಳುವಂತೆ ಮಾಡಿ ಎಂದು ಕರೆ ನೀಡಿದರು.
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ