ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹೊಸ ಚುನಾವಣಾ ಕಚೇರಿ ತೆರೆದ ಕೇಂದ್ರ ಸಚಿವ ಸದಾನಂದಗೌಡ

ದೇವೇಗೌಡರೇ ಅಲ್ಲ, ಯಾರೇ ಸ್ಪರ್ಧಿಸಿದರೂ ಸ್ವಾಗತ. ರಾಹುಲ್ ಗಾಂಧಿ, ಮಾಯಾವತಿ, ಚಂದ್ರಬಾಬು ನಾಯ್ಡು,ಸ್ಟಾಲಿನ್ ಯಾರೇ ಬಂದು ಸ್ಪರ್ಧಿಸಿದರೂ ನಾವು ಗೆಲ್ಲುತ್ತೇವೆ- ಸದಾನಂದಗೌಡ

Latha CG | news18
Updated:March 15, 2019, 11:28 AM IST
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹೊಸ ಚುನಾವಣಾ ಕಚೇರಿ ತೆರೆದ ಕೇಂದ್ರ ಸಚಿವ ಸದಾನಂದಗೌಡ
ಹೊಸ ಕಚೇರಿಯಲ್ಲಿ ಪೂಜೆ ನೆರವೇರಿಸುತ್ತಿರುವ ಸದಾನಂದಗೌಡ
Latha CG | news18
Updated: March 15, 2019, 11:28 AM IST
ಬೆಂಗಳೂರು,(ಮಾ.15): ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಹೊಸ ಚುನಾವಣಾ ಕಾರ್ಯಾಲಯವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದ್ದಾರೆ. ಕುಟುಂಬ ಸದಸ್ಯರ ಜೊತೆ ಸೇರಿ ಪೂಜೆ, ಹೋಮ ಹವನ ಮಾಡಿಸಿದ್ದಾರೆ.ಈ ವೇಳೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಬೇಕು. ಕಳೆದ ಬಾರಿಗಿಂತ ಹೆಚ್ಚು ಮತ ಗೆಲ್ಲಬೇಕೆಂದು ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನಮ್ಮ ಕೆಲಸ ದೇಶದ ಕೆಲಸ, ನಮಗೆ ದೇಶ ಮೊದಲು. ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರನ್ನು ಭೇಟಿ ಮಾಡಿದ್ದೇನೆ. ಇಬ್ಬರು ಅಶ್ವಥ್ ನಾರಾಯಣದ್ವಯರ ಜೊತೆ ಚುನಾವಣಾ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ದೇವೇಗೌಡ VS ಸದಾನಂದ ಗೌಡ: ಬೆಂಗಳೂರು ಉತ್ತರದಲ್ಲಿ ಮೊಳಗಲಿದೆ ಒಕ್ಕಲಿಗ ನಾಯಕರಿಬ್ಬರ ರಣಕಹಳೆ

 

ನಮ್ಮ ಎದುರಾಳಿ ಯಾರೆಂದು ನಾವು ತಲೆಕೆಡಿಸಿಕೊಂಡಿಲ್ಲ. ಗೆಲುವು ಎಷ್ಟರಮಟ್ಟಿಗೆ ಸಿಗುತ್ತದೆಂದು ತಲೆಕೆಡಿಸಿಕೊಂಡಿದ್ದೇವೆ. ನಮ್ಮ ವಿರುದ್ಧ ಯಾರೇ ಸ್ಪರ್ಧಿಸಿದರೂ ಗೆಲುವು ನಮ್ಮದೇ. ಇದು ಅತಿಯಾದ ವಿಶ್ವಾಸ ಅಲ್ಲ, ಆತ್ಮವಿಶ್ವಾಸ. ದೇವೇಗೌಡರೇ ಅಲ್ಲ, ಯಾರೇ ಸ್ಪರ್ಧಿಸಿದರೂ ಸ್ವಾಗತ. ರಾಹುಲ್ ಗಾಂಧಿ, ಮಾಯಾವತಿ, ಚಂದ್ರಬಾಬು ನಾಯ್ಡು,ಸ್ಟಾಲಿನ್ ಯಾರೇ ಬಂದು ಸ್ಪರ್ಧಿಸಿದರೂ ನಾವು ಗೆಲ್ಲುತ್ತೇವೆ ಎಂದರು.


Loading...

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್​ ಪಕ್ಷದ ಪ್ರಭಾವವಿಲ್ಲದ ಈ ಕ್ಷೇತ್ರದಲ್ಲಿ ದೇವೇಗೌಡರ ವರ್ಚಸ್ಸು ಎಷ್ಟರ ಮಟ್ಟಿಗೆ ಮಹತ್ವ ಪಡೆಯಲಿದೆ ಎಂಬುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...