Pralhad Joshi; ಸಿದ್ದರಾಮಯ್ಯ ದೃಷ್ಟಿಯಲ್ಲಿ DK Shivakumar ದೊಡ್ಡ ದುರ್ಜನರು: ಪ್ರಹ್ಲಾದ್ ಜೋಶಿ ತಿರುಗೇಟು

ಸಿದ್ದರಾಮಯ್ಯರಿಗೆ ತಾವು ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಮಾತ್ರ ಸಜ್ಜನರು. ಅವರ ದೃಷ್ಟಿಯಲ್ಲಿ ಉಳಿದವರೆಲ್ಲರೂ ದುರ್ಜನರು. ಸಿದ್ದರಾಮಯ್ಯನವರ ದೃಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅತ್ಯಂತ ದೊಡ್ಡ ದುರ್ಜನರು ಎಂದು ವಾಗ್ದಾಳಿ ನಡೆಸಿದರು

ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ

  • Share this:
ಹಾವೇರಿ: ಉಪ ಕದನ ರಣಕಣ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದ್ದು, ರಾಜಕೀಯ ನಾಯರು ಏಟು ತಿರುಗೇಟು ನೀಡುತ್ತಿದ್ದಾರೆ. ಹಾನಗಲ್ ಉಪಚುನಾವಣೆಯ (Hangal Byelection) ಬಿಜೆಪಿ ಅಭ್ಯರ್ಥಿ ಶಿವರಾಮ್ ಸಜ್ಜನ್(Shivaram Sajjan) ಅವರು ದುರ್ಜನ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ( Leader of Opposition in Karnataka Assembly Siddaramaiah)ನವರ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ತಿರುಗೇಟು ನೀಡಿದ್ದಾರೆ. ಇಂದು ಹಾನಗಲ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ (Congress Leaders) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯರಿಗೆ ತಾವು ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಮಾತ್ರ ಸಜ್ಜನರು. ಅವರ ದೃಷ್ಟಿಯಲ್ಲಿ ಉಳಿದವರೆಲ್ಲರೂ ದುರ್ಜನರು. ಸಿದ್ದರಾಮಯ್ಯನವರ ದೃಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅತ್ಯಂತ ದೊಡ್ಡ ದುರ್ಜನರು ಎಂದು ವಾಗ್ದಾಳಿ ನಡೆಸಿದರು. ಹೀಗಾಗಿಯೇ ಡಿ.ಕೆ.ಶಿವಕುಮಾರ್ ವಿರುದ್ಧ ಪಿಸು ಮಾತುಗಳನ್ನಾಡಿಸಿದ್ದಾರೆ ಎಂದರು.

ಪಿಸು ಮಾತಿನ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ

ಪಿಸು ಮಾತುಗಳ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಪಿಸು ಮಾತನಾಡಿದವರ ಪೈಕಿ ಒಬ್ಬರನ್ನು ಮಾತ್ರ ಅಮಾನತು ಮಾಡಿದ್ದಾರೆ. ಮತ್ತೊಬ್ಬರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಪಕ್ಷದಿಂದ ಹೊರಗೆ ಹಾಕುವ ಆಗಿದ್ದರೆ ಇಬ್ಬರನ್ನು ಹೊರ ಹಾಕಬೇಕಿತ್ತು ಅಲ್ವಾ ಎಂದು ಪ್ರಶ್ನೆ ಮಾಡಿದರು. ಮುಂದುವರಿದು ಮಾತನಾಡಿದ ಪ್ರಹ್ಲಾದ್ ಜೋಶಿ, ಬಿಜೆಪಿಯವರೇ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸೋಕೆ ಯತ್ನಿಸ್ತಿದಾರೆ ಅಂತ ಕಾಂಗ್ರೆಸ್ ಬಿಂಬಿಸುತ್ತಿದೆ. ಆದ್ರೆ ಬಿಜೆಪಿ ಬಂಡೆಗಲ್ಲಿನಂತಿದೆ. ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಸಜ್ಜನ್ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:  ಬುರುಡೆ ಬೊಮ್ಮಾಯಿ..ಕೊರೊನಾ ವೇಳೆ ಜನ ಬದುಕಿದ್ದು ಅನ್ನಭಾಗ್ಯದಿಂದ ನಿಮ್ಮಿಂದ ಅಲ್ಲ: Siddaramaiah ತಿರುಗೇಟು

ರಾಹುಲ್ ಗಾಂಧಿಗೆ ಏನೂ ತಿಳಿಯಲ್ಲ ಮತ್ತು ಅವರ ಮಾರ್ಜಿನ್ ದೊಡ್ಡದು. ಹೀಗಾಗಿ ಅವರ ಬಗ್ಗೆ ಮಾತನಾಡಲ್ಲ. ಆದರೆ ಸಿದ್ದರಾಮಯ್ಯ ಅವರು ವ್ಯಾಕ್ಸಿನ್ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ವಿರೋಧ ಮಾಡುವ ಭರದಲ್ಲಿ ದೇಶವನ್ನೇಕೆ ವಿರೋಧಿಸ್ತಿದ್ದೀರಿ. ನೀವು ದೇಶ ವಿರೋಧೀನಾ? ಏಕವಚನದಲ್ಲಿ ಮೋದಿ ಅವರನ್ನ ಬೈಯ್ಯೋದರಿಂದ ಕಳೆದ ಚುನಾವಣೆಗಳಲ್ಲಿ ಅಡ್ರೆಸ್ ಇಲ್ಲದೇ ಹೋದಿರಿ ಎಂದು ವ್ಯಂಗ್ಯದ ಮಾತುಗಳನ್ನಾಡಿದರು.

ಕಾಂಗ್ರೆಸ್ ಪಿಸುಮಾತು?

ಕಾಂಗ್ರೆಸ್ ಮುಖಂಡರಾದ ವಿ ಎಸ್ ಉಗ್ರಪ್ಪ ಮತ್ತು ಮಾಧ್ಯಮ ಸಂಯೋಜಕ ಸಲೀಂ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಬಗ್ಗೆ ಆಡಿದ ಪಿಸು ಮಾತುಗಳು ಮಾಧ್ಯಮಗಳಲ್ಲಿ ರೆಕಾರ್ಡ್ ಆಗಿತ್ತು. ವೇಳೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಉಗ್ರಪ್ಪ ಪಕ್ಕ ಕುಳಿತಿದ್ದ ಕಾಂಗ್ರಸ್ ಮಾಧ್ಯಮ ಸಂಯೋಜಕ ಸಲೀಂ ಅಹಮ್ಮದ್​ ಉಗ್ರಪ್ಪ ಅವರ ಕಿವಿಯಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಇದೇ ವೇಳೆ "ಈ ಭ್ರಷ್ಟಾಚಾರದಲ್ಲಿ ಡಿ.ಕೆ. ಶಿವಕುಮಾರ್​ ಬೆಂಬಲಿಗರು ನೂರಾರು ಕೋಟಿ ಹಣ ಲೂಟಿ ಮಾಡಿದ್ದು, ಸ್ವತಃ ಡಿಕೆಶಿ ಅವರಿಗೆ 8 ರಿಂದ 12 ಪರ್ಸೆಂಟ್ ಕಮಿಷನ್ ಹೋಗುತ್ತದೆ" ಎಂದಿದ್ದರು. ಆದರೆ, ಪತ್ರಿಕಾಗೋಷ್ಠಿಯಲ್ಲಿ ಮೈಕ್ ಆಫ್ ಆಗಿರದ ಕಾರಣ ಈ ಖಾಸಗಿ ಸಂಭಾಷಣೆ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ:  ಈ ದರಿದ್ರ ಸರ್ಕಾರ ಬರಲು ಸಿದ್ದರಾಮಯ್ಯನೇ ಕಾರಣಿಭೂತ : HD Kumaraswamy ತೀವ್ರ ವಾಗ್ದಾಳಿ

ಇದೇ ವಿಚಾರವಾಗಿ ಸಲೀಂ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದಾದ ಬಳಿಕ ಉಗ್ರಪ್ಪ ಮತ್ತೆ ಸುದ್ದಿಗೋಷ್ಠಿ ಕರೆದು ಪಿಸು ಮಾತುಗಳ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಕಾಂಗ್ರೆಸ್​​ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಒಂದಾಗಿದ್ದೆವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನನಗೆ ಡಿ.ಕೆ.ಶಿವಕುಮಾರ್​ ಅವರ ಬಗ್ಗೆ ಗೊತ್ತಿದೆ. ನಿನ್ನೆ ಸುದ್ದಿಗೋಷ್ಠಿ ವೇಳೆ ಸಲೀಂ ಅವರು ಡಿಕೆಶಿ ಬಗ್ಗೆ ಹೇಳಿದ್ದಾರೆ. ಅದು ಸಲೀಂ ಅವರ ಅಭಿಪ್ರಾಯವಾಗಿರಲಿಲ್ಲ. ಜನ ಹೇಗೆ ಮಾತಾನಾಡುತ್ತಿದ್ದಾರೆ ಅಂತ ಸಲೀಂ ಅವರು ಹೇಳಲು ಬಂದರು. ಅದನ್ನ ತಪ್ಪಾಗಿ ತೋರಿಸಲಾಗಿದೆ ಎಂದು ಹೇಳಿದ್ದರು.
Published by:Mahmadrafik K
First published: