• Home
  • »
  • News
  • »
  • state
  • »
  • Karnataka Politics: ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ನೆರಳು ಬಿದ್ದಿದೆ; ಪ್ರಹ್ಲಾದ್ ಜೋಶಿ

Karnataka Politics: ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ನೆರಳು ಬಿದ್ದಿದೆ; ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ನಾನು ದೇವೆಗೌಡರ ಬಗ್ಗೆ ಮಾತಾಡಲ್ಲ, ಅವರು ಹಿರಿಯರು. ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆ ಕಿಚ್ಚಿನಿಂದ ಮಾತಾಡ್ತಿದಾರೆ. ನಾವು ಮಾಡಲಾರದ್ದು ಬಿಜೆಪಿ‌ ಮಾಡಿದೆ ಎಂದು ಹೊಟ್ಟೆ ಕಿಚ್ಚಿನಿಂದ ಮಾತಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದರು.

  • News18 Kannada
  • Last Updated :
  • Hubli-Dharwad (Hubli), India
  • Share this:

ಮೈಸೂರಿನಲ್ಲಿ ಟಿಪ್ಪು ಪ್ರತಿಮೆ (Tipu Sultan Statue) ವಿಚಾರಕ್ಕೆ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಟಿಪ್ಪು ಪ್ರತಿಮೆ ಮಾಡಲಿ, ಅವರನ್ನ ಜನ ಮನೆಗೆ ಕಳುಹಿಸುತ್ತಾರೆ. ಟಿಪ್ಪು ಪ್ರತಿಮೆಗೆ ಬೆಂಬಲ ಕೊಟ್ಟವರನ್ನು ಮನೆಗೆ ಕಳುಹಿಸುತ್ತಾರೆ. ಈಗಲೂ ಟಿಪ್ಪು ಜಯಂತಿಗೆ (Tipu Jayanti) ನಮ್ಮ ವಿರೋಧ ಇದೆ. ಸರ್ಕಾರದಿಂದ ಟಿಪ್ಪು ಜಯಂತಿ ಮಾಡಬಾರದು ಅನ್ನೋದಿದೆ ಎಂದು ಹೇಳಿದರು. ಈದ್ಗಾ ಮೈದಾನದಲ್ಲಿ (Eidgaha Maidana) ನಾವೇನು ಟಿಪ್ಪು ಜಯಂತಿ ಮಾಡಿ ಅಂತಾ ಹೇಳಿಲ್ಲ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಟಿಪ್ಪು ಕನ್ನಡ ವಿರೋಧಿಯಾಗಿದ್ದಾನೆ. ಇದು ನನ್ನ ವೈಯಕ್ತಿಕ ನಿಲುವು ಮತ್ತು ಪಕ್ಷದ ನಿಲವು ಎಂದರು.


ಯಾವುದೇ ಮೂರ್ತಿ ನಿಲ್ಲಿಸಬೇಕು ಅಂದ್ರು ಸರ್ಕಾರದ ಅನುಮತಿ ಬೇಕು. ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ. ನಾವು ಯಾವ ಕಾಲದಲ್ಲಿ ಉತ್ತರ ಕೊಡಬೇಕು ಕೊಡ್ತೀವಿ ಎಂದರು.


ಊದು ಬತ್ತಿ ಬೆಳಗಿ ಆರತಿ ಮಾಡಲಿ


ನಾವು ಬೇಜಾವಾಬ್ದರಿಯಿಂದ ಮಾತಾಡೋಕೆ ಆಗಲ್ಲ ಎಂದು ಪ್ರಹ್ಲಾದ್ ಜೋಶಿ, ತನ್ವೀರ್ ಸೇಠ್ ಗೆ ಟಾಂಗ್ ನೀಡಿದರು. ಅವರೇನು ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿ ಊದು ಬತ್ತಿ ಬೆಳಗಿ ಆರತಿ ಮಾಡಲಿ. ತುಷ್ಟೀಕರಣ ರಾಜಕಾರಣಕ್ಕೆ ಇದೊಂದು ವೇದಿಕೆ ಎಂದು ಜೋಶಿ ಕಿಡಿಕಾರಿದರು.


ದೇವೇಗೌಡರಿಗೆ ಆಹ್ವಾನ ನೀಡಲಾಗಿತ್ತು


ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಆಹ್ವಾನಿಸಿಲ್ಲ ಅನ್ನೋದು ತಪ್ಪು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ದೇವೇಗೌಡರ ಆಹ್ವಾನದ ವಿಚಾರ‌‌ವಾಗಿ ನಾನು ಮುಖ್ಯ ಮಂತ್ರಿಗಳು, ಅಶೋಕ್, ಅಶ್ವಥ್ ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆಯ. ದೇವೇಗೌಡರು ನಮ್ಮ ರಾಜ್ಯದ ಒಬ್ರೇ ಮಾಜಿ ಪ್ರಧಾನಿ. ಅವರನ್ನ ಕರದಿಲ್ಲ ಅನ್ನೋದು ಸರಿಯಲ್ಲ. ನಾನು ಕರೆದಿದ್ದೇನೆ ಎಂದು ಮುಖ್ಯಮಂತ್ರಿಗಳು ನನಗೆ ಹೇಳಿದ್ದಾರೆ. ದೇವೇಗೌಡರು ಯಾಕೆ ಬಂದಿಲ್ಲ ಅನ್ನೋದು ವಿಚಾರಸ್ತೀನಿ. ಆದ್ರೆ ಅವರನ್ನ ಕರದಿಲ್ಲ ಅನ್ನೋದು ಸರಿ ಅಲ್ಲ ಎಂದರು.


ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಜೋಶಿ, ಕುಮಾರಸ್ವಾಮಿ ಕುಟುಂಬ ಹಲವು ವರ್ಷಗಳಿಂದ ಮುಖ್ಯಮಂತ್ರಿ, ಮಂತ್ರಿ ಆಗಿದ್ದಾರೆ. ಆದ್ರೆ ಅವರು ಕೆಂಪೇಗೌಡ ಪುತ್ಥಳಿ ಸ್ಥಾಪನೆ ಮಾಡಲಿಲ್ಲ, ಹೆಸರು ಇಡಲಿಲ್ಲ. ಅವರ ಕುಟುಂಬಕ್ಕೆ ಕೆಂಪೇಗೌಡರ ನೆನಪು ಆಗಲಿಲ್ಲ. ನಾನು ದೇವೆಗೌಡರ ಬಗ್ಗೆ ಮಾತಾಡಲ್ಲ, ಅವರು ಹಿರಿಯರು. ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆ ಕಿಚ್ಚಿನಿಂದ ಮಾತಾಡ್ತಿದಾರೆ. ನಾವು ಮಾಡಲಾರದ್ದು ಬಿಜೆಪಿ‌ ಮಾಡಿದೆ ಎಂದು ಹೊಟ್ಟೆ ಕಿಚ್ಚಿನಿಂದ ಮಾತಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದರು.


ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ನೆರಳು


ರಾಹುಲ್ ಗಾಂಧಿ ನೆರಳಲ್ಲಿ ಓಡಾಡ್ತಿರೋದ್ರಿಂದ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಆಡ್ತಿದಾರೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಏನೇನೋ ಮಾತಾಡ್ತಿದಾರೆ. ನಿನ್ನೆ ಪ್ರಧಾನ ಮಂತ್ರಿಗಳು ಎರಡು ಮೂರು ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.


ಇದನ್ನೂ ಓದಿ:  D K Shivakumar: ಪ್ರತಿಮೆ ಪಾಲಿಟಿಕ್ಸ್, ನನ್ನನ್ನು ಸಹ ಕರೆದಿಲ್ಲ ಕಣ್ರೀ! ದೇವೇಗೌಡರ ಕಡೆಗಣನೆಗೆ ಬಿಜೆಪಿ ವಿರುದ್ಧ ಡಿಕೆಶಿ ಗರಂ


50 ವರ್ಷ ಏನ್ ಮಾಡಿದೆ?


ವಂದೇ ಭಾರತ ರೈಲು ಭಾರತದಲ್ಲಿ ನಿರ್ಮಾಣವಾಗಿದೆ. ಇದು ನಮಗೆಲ್ಲ ಸಂತೋಷ. ಕಳೆದ ಏಳು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಹೆದ್ದಾರಿ ಹಾಗೂ ರೈಲ್ವೆಯಲ್ಲಿ ಅಭೂತ ಪೂರ್ವ ಕೆಲಸ ಆಗಿದೆ. 52 ಸಾವಿರ ಕಿಲೋ ಮೀಟರ್ ರೇಲ್ವೆ ವಿದ್ಯುದೀಕರಣ ಆಗಿದೆ. 8 ವರ್ಷದಲ್ಲಿ 30 ಸಾವಿರ ಕಿಲೋ ಮೀಟರ್ ನಮ್ಮ ಕಾಲದಲ್ಲಿ ಆಗಿದೆ. ಕಾಂಗ್ರೆಸ್ 50 ವರ್ಷ ಏನ್ ಮಾಡಿದೆ ನಾವು ಏಳು ವರ್ಷದಲ್ಲಿ ಮಾಡಿದ್ದೇವೆ.


ಸಿದ್ದರಾಮಯ್ಯ ಒಂದೊಂದು ಸಲ ರಾಹುಲ್ ಗಾಂಧಿ ತರಹ ಮಾತಾಡ್ತಾರೆ. ಸಹವಾಸ ದೋಷದಿಂದ ಹಾಗೆ ಮಾಡ್ತಾರೆ ಎಂದರು. ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ನಡೆದಿದಾರೆ. ಸಹವಾಸ ದೋಷದಿಂದ ಸಿದ್ದರಾಮಯ್ಯ ರಾಹುಲ್ ಗಾಂಧಿ ತರ ಮಾತಾಡ್ತಿದಾರೆ. ಅವರು ಏನ್ ಮಾಡಿದಾರೆ ಅಂತಾ ಕೇಳ್ತಾರೆ. ಕಾಂಗ್ರೆಸ್ ಏನು ಮಾಡಿಲ್ಲ, ಅದಕ್ಕೆ ಎರಡು ಲೋಕಸಭೆಯಲ್ಲಿ ನಿಮಗೆ ವಿರೋಧ ಪಕ್ಷದ ಅರ್ಹತೆ ಸಿಗಲಿಲ್ಲ.


ಕಾಂಗ್ರೆಸ್ ದುರಂಹಕಾರ ಕಡಿಮೆ ಆಗಿಲ್ಲ


ಎರಡು ರಾಜ್ಯದಲ್ಲಿ ಕಾಂಗ್ರೆಸ್ ಇದೆ, ಈಗ ಅದು ಹೋಗೋದಿದೆ. ಆದ್ರೆ ಕಾಂಗ್ರೆಸ್ ನ ದುರಹಂಕಾರ ಕಡಿಮೆ ಆಗಿಲ್ಲ. ನಾವು ಕೆಂಪೇಗೌಡ ಏರಪೋರ್ಟ್ ಮಾಡಿದ್ದೇವೆ ಅಂತಾರೆ. ಇದು ಯಡಿಯೂರಪ್ಪ ಕಾಲದಲ್ಲಿ ರೆಸ್ಯೂಲೇಶನ್ ಆಗಿದ್ದು, ನೀವು 2013 ಚುನಾವಣೆ ವೇಳೆ ಕೆಲಸ ಮಾಡಿದ್ರಿ.


ಇದನ್ನೂ ಓದಿ:  Congress Tweet: ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಆರ್. ಅಶೋಕ್ ಕೈ! ಸಚಿವರ ಪೋಸ್​ಗೆ​ ಕಾಂಗ್ರೆಸ್ ಕಿಡಿಕಿಡಿ


ಕಾಂಗ್ರೆಸ್​​​ನವರಿಗೆ ಅಭಿವೃದ್ಧಿ ಬೇಕಿಲ್ಲ, ಜನರ ಕಲ್ಯಾಣ ಬೇಕಿಲ್ಲ. ಅವರಿಗೆ ಬೇಕಾಗಿರೋದು ರಾಜಕಾರಣ ಎಂದು ಜೋಶಿ ವಾಗ್ದಾಳಿ ನಡೆಸಿದರು. ಈ ಎಲ್ಲ ಸಂಗತಿ ಸಿದ್ದರಾಮಯ್ಯಗೆ ಗೊತ್ತು. ರಾಹುಲ್ ಗಾಂಧಿ ಜೊತೆ ಓಡಾಡಿ ಏನೇನೋ ಮಾತಾಡ್ತೀದಾರೆ ಎಂದು ಜೋಶಿ ಟಾಂಗ್ ಕೊಟ್ಟರು.

Published by:Mahmadrafik K
First published: