Pralhad Joshi: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ; ಕೊಲೆಗೆ ಸಂಚು ಎಂಬ ಆರೋಪದಲ್ಲಿ ಹುರುಳಿಲ್ಲ ಎಂದ ಪ್ರಹ್ಲಾದ್ ಜೋಶಿ

ಪ್ರಧಾನಿ ಮೋದಿ, ಬೊಮ್ಮಾಯಿ ಹಾಗೂ ಕಟೀಲ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ ವಿಚಾರಕ್ಕೆ ಸಚಿವ ಪ್ರಹ್ಲಾದ್ ಜೋಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ

  • Share this:
ಹುಬ್ಬಳ್ಳಿ : ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನುವ ಹೇಳಿಕೆಗೆ ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಕೆಲ ವ್ಯಕ್ತಿಗಳು ಮೊಟ್ಟೆ (Egg) ಎಸೆದಿರೋದನ್ನು ನಾವು ಈಗಾಗಲೇ ಖಂಡಿಸಿದ್ದೇವೆ. ಇದನ್ನು ಯಾರೂ ಒಪ್ಪಿಕೊಳ್ಳಲು ಆಗಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮಾಡೋದು ತಪ್ಪು. ಹಾಗಂತ ಕೊಲೆಗೆ ಸಂಚು ರೂಪಿಸಿದ್ದರು ಅನ್ನೋದು ತಪ್ಪು ಎಂದರು. ಸಿದ್ದರಾಮಯ್ಯ ಈ ಹಿಂದೆ ಏನು ಮಾಡಿದ್ದರು? ಎಸ್​ಡಿಪಿಐ (SDPI) ವಿರುದ್ಧದ ಪ್ರಕರಣ ವಾಪಸ್ ಪಡೆದಿದ್ದರು. ಈಗ ಯಾವ ರೀತಿ ಮಾತಾಡ್ತಿದಾರೆ ಅನ್ನೋದು ಎಲ್ಲರಿಗೂ ಗೊತ್ತು. ರಾಷ್ಟ್ರೀಯ ನಾಯಕರಿಗೆ (National Leaders) ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸದ್ಯ ಇರೋದು ನಕಲಿ ಕಾಂಗ್ರೆಸ್. ಅದನ್ನೂ ಮುಗಿಸೋಕೆ ಸಿದ್ದರಾಮಯ್ಯ ಹೊರಟಿದ್ದಾರೆ ಎಂದರು.

ಮೊಟ್ಟೆ ಎಸೆತ ಪ್ರಕರಣ ಸರ್ಕಾರಿ ಪ್ರಾಯೋಜಿತ ಅಂತ ಹೇಳೋದ್ರಲ್ಲಿ ಅರ್ಥವಿಲ್ಲ. ಸಿದ್ಧರಾಮಯ್ಯನವರು ಈ ರೀತಿ ಚಿಲ್ಲರೆ ರಾಜಕಾರಣ ಮಾಡೋದು ಬಿಡಲಿ. ಮಾಡಿದ್ದು ತಪ್ಪು ಅಂತ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಮತ್ತಿತರ ನಾಯಕರು ಹೇಳಿದ್ದಾರೆ.

ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ರಾಜಕೀಯವಾಗಿ ವಿರೋಧ ಮಾಡಬೇಕು. ಸಿದ್ದರಾಮಯ್ಯ ಅವರು ಸಾವರ್ಕರ್ ವಿಚಾರದಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡುತ್ತಿರುವುದು ಖಂಡನೀಯ. ಮಾಜಿ ಮುಖ್ಯಮಂತ್ರಿ ಆದಂಥವರು ಈ ರೀತಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ.

Union minister Pralhad joshi reacts on egg throws siddaramaiahs car saklb mrq
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ


ಇದನ್ನೂ ಓದಿ:  Belagavi Politics: ಖಾನಾಪುರ ಕ್ಷೇತ್ರದಲ್ಲಿ ಕಮಲ ಕಲಿಗಳ ಮಧ್ಯೆ ಕ್ರೆಡಿಟ್ ವಾರ್; ಬೆಳಗಾವಿ ಬಿಜೆಪಿಯಲ್ಲಿ ಕಿಚ್ಚು ಹಚ್ಚಿದ ಮಾಜಿ ಶಾಸಕನ ಆಡಿಯೋ

ಈಗ ಇರುವುದು ಕಾಂಗ್ರೆಸ್ಸೇ ಅಲ್ಲ, ಮಹಾತ್ಮ ಗಾಂಧಿ ಅವರು ಅಂದೇ ಕಾಂಗ್ರೆಸ್ ವಿಸರ್ಜಿಸುವಂತೆ ಹೇಳಿದ್ದರು. ಆದರೆ ಗಾಂಧೀಜಿ ಮಾತು ಕೇಳದೆ ಕಾಂಗ್ರೆಸ್ ಮುಂದುವರಿದುಕೊಂಡು ಬಂದಿತು.

ಕಾಂಗ್ರೆಸ್ ಪ್ರತಿಬಿಂಬದಲ್ಲಿ ನಕಲಿ ಗಾಂಧಿಗಳು

ಕಾಂಗ್ರೆಸ್ ಪ್ರತಿಬಿಂಬದಲ್ಲಿ ನಕಲಿ ಗಾಂಧಿಗಳು ಹೋರಾಟ ಮಾಡುತ್ತಿದ್ದಾರೆ. ಇರುವೆಗಳು ಕಟ್ಟಿದ ಹುತ್ತದಲ್ಲಿ ಹಾವು ಬಂದು ಸೇರಿಕೊಂಡ ಪರಿಸ್ಥಿತಿ ಕಾಂಗ್ರೆಸ್ ನದ್ದಾಗಿದೆ. ಅಲ್ಪಸಂಖ್ಯಾತರ ಮನವೊಲಿಕೆಗಾಗಿ ಕಾಂಗ್ರೆಸ್ ನವರು ಈ ರೀತಿ ಮಾಡುತ್ತಿದ್ದಾರೆ. ಮುಸ್ಲಿಮರ ಓಲೈಕೆ ಮಾಡುವಲ್ಲಿ ನಾವು ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ಈ ರೀತಿ ಮಾಡೋದ್ರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ ಎಂದು ಪ್ರಹ್ಲಾದ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ಮೋದಿ, ಬೊಮ್ಮಾಯಿಗೆ ಪಂಥಾಹ್ವಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ

ಪ್ರಧಾನಿ ಮೋದಿ, ಬೊಮ್ಮಾಯಿ ಹಾಗೂ ಕಟೀಲ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ ವಿಚಾರಕ್ಕೆ ಸಚಿವ ಪ್ರಹ್ಲಾದ್ ಜೋಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯ ಕಂಡ ಮುಖ್ಯಮಂತ್ರಿಗಳು. ಬಿಜೆಪಿಯ ಯಾವುದೇ ನಾಯಕರು ಇಂತಹ ಘಟನೆಗಳಿಗೆ ನಾವು ಯಾವುದೇ ರೀತಿಯ ಪ್ರಚೋದನೆ ನೀಡಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದ್ರೆ ಯಾರೂ ಲಕ್ಷ್ಮಣ ರೇಖೆ ಮೀರಬಾರದು. ಅವರ ಮೇಲೆ ಮೊಟ್ಟೆ ಒಗರದಿರುವುದು ಸರಿಯಲ್ಲ ಎಂದರು.

ಸಾವರ್ಕರ್ ಅವರು ದೇಶಭಕ್ತರು

ಮೊಟ್ಟೆ ಎಸೆದಿರೋದನ್ನು  ಸಿದ್ಧರಾಮಯ್ಯ ಅವರು ಪ್ರಚೋದನೆ ಮಾಡುವ  ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ತರ ಮಾಡುವುದು ಸರಿಯಲ್ಲ. ಸಾವರ್ಕರ್ ಅವರು ದೇಶಭಕ್ತರು ಅಂತ ಮಹಾತ್ಮ ಗಾಂಧಿ ಅವರೂ ಸಹ ಒಪ್ಪಿಕೊಂಡಿದ್ದರು. ಇಂದಿರಾ ಗಾಂಧಿಯವರೂ ಸಹ ಅವರನ್ನ ಒಪ್ಪಿಕೊಂಡಿದ್ದರು. ಆದ್ರೆ ಸಿದ್ದರಾಮಯ್ಯವರು ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂದಿರಾ ಗಾಂಧಿ ಅವರ ಪತ್ರಗಳನ್ನೇ ಕಾಂಗ್ರೆಸ್​ನವರು ಒಪ್ಪೊಕೊಳ್ಳೋಕೆ ತಯಾರಿಲ್ಲ. ಇಂದಿರಾ ಕ್ಯಾಂಟೀನ್ ಹೆಸರಲ್ಲಿ ವೋಟ್ ಬ್ಯಾಂಕ್​ಗೆ ಕಾಂಗ್ರೆಸ್ ಮುಂದಾಗಿತ್ತು.

ಬಿಜೆಪಿ ಗೋಡ್ಸೆಯನ್ನು ಪೂಜೆ ಮಾಡಿಲ್ಲ

ದೇಶದಲ್ಲಿ ಈಗಿರುವ ಕಾಂಗ್ರೆಸ್ ನಕಲಿ ಕಾಂಗ್ರೆಸ್. ನಕಲಿ ಗಾಂಧಿಗಳನ್ನ ಮೆಚ್ಚಿಸುವುದಕ್ಕೆ ಕಾಂಗ್ರೆಸ್ ನವರು ಈ ರೀತಿ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದಲ್ಲಿ ಭ್ರಮೆಯಲ್ಲಿ ಓಡಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಛತ್ತೀಸ್ ಗಡ ಹಾಗೂ ರಾಜಸ್ಥಾನದಲ್ಲೂ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಬಿಜೆಪಿಯವರು ಗೋಡ್ಸೆ ಪೂಜೆ ಮಾಡುತ್ತಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ನಾವು ಯಾವತ್ತೂ ಗೋಡ್ಸೆಯನ್ನ ಪೂಜೆ ಮಾಡಿಲ್ಲ.

ಇದನ್ನೂ ಓದಿ:  Veer Savarkar: ಸಾವರ್ಕರ್ ವಿವಾದಕ್ಕೆ ಬಿಗ್ ಟ್ವಿಸ್ಟ್; ಈ ಸುದ್ದಿಯಿಂದ ಕಾಂಗ್ರೆಸ್​ಗೆ ತೀವ್ರ ಮುಖಭಂಗ

ಹಗಲು ಕನಸು ಕಾಣಲು ಅಧಿಕಾರವಿದೆ

ಸಿದ್ದರಾಮಯ್ಯ ಅವರು ಯಾರದೋ ತುಷ್ಠೀಕರಣಕ್ಕಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಂಸೆಯ ರಾಜಕಾರಣ ಒಪ್ಪಲ್ಲ. ಸಿದ್ದರಾಮಯ್ಯ ಅವರು ಎಸ್​ಡಿಪಿಐ ಅವರ ಮೇಲಿದ್ದ ಕೇಸ್​ಗಳನ್ನ ವಾಪಸ್ ಪಡದಿದ್ದರು. ತುಷ್ಠೀಕರಣದ ಪರಾಕಾಷ್ಟೆ ಸಿದ್ದರಾಮಯ್ಯ ಅವರ ಕಾಲದಲ್ಲಾಗಿತ್ತು. ಇದು ವೋಟ್ ಬ್ಯಾಂಕ್ ರಾಜಕೀಯ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರ ನಿಶ್ಚಿತ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಹಗಲು ಕನಸು ಕಾಣಲು ಅಧಿಕಾರ ಇದೆ. ಹೀಗಾಗಿ ಕನಸು ಕಾಣುತ್ತಲೇ ಇರಲಿ ಎಂದರು.
Published by:Mahmadrafik K
First published: