news18-kannada Updated:September 6, 2020, 2:39 PM IST
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ(ಸೆ.06): ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್ವುಡ್ನವರು ಭಾಗಿಯಾಗಿದ್ದು ಅತ್ಯಂತ ಬೇಸರದ ಸಂಗತಿಯಾಗಿದೆ. ಆದರೆ ಇದರಲ್ಲಿ ಕೆಲವು ಪ್ರಭಾವಿಗಳು ಇದ್ದಾರೆ ಎನ್ನುವ ವದಂತಿ ಇದೆ. ಯಾರೇ ಇದ್ರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ವಿಚಾರವಾಗಿ ಗೃಹ ಸಚಿವರ ಜೊತೆ ನಾನು ಮಾತನಾಡಿದ್ದೇನೆ. ಅಲ್ಲದೇ ಅವಳಿ ನಗರದ ಪೊಲೀಸ್ ಆಯುಕ್ತರಿಗೂ ಸಹ ನಾನು ಗಾಂಜಾ ಹಾಗೂ ಕ್ರೈಂ ಕಂಟ್ರೋಲ್ ಮಾಡಲು ಹೇಳಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಲೋಕಸಭೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದ್ದು, ಸೆ.14 ರಿಂದ ಅ.1 ರವರೆಗೆ ಅಧಿವೇಶನ ನಡೆಸಲಿದ್ದೇವೆ. ವಿಶಿಷ್ಟ ಸನ್ನಿವೇಶದದಲ್ಲಿ ಅಧಿವೇಶನವನ್ನ ನಡೆಸಲು ತೀರ್ಮಾನ ಮಾಡಲಾಗಿದೆ. ರಾಜ್ಯಸಭೆ, ಲೋಕಸಭೆ ಎರಡೂ ಕಡೆ ಅಧಿವೇಶನ ನಡೆಸುತ್ತೇವೆ ಎಂದರು. ಅಧಿವೇಶನ ಸಂದರ್ಭ ಎಂಪಿಗಳ ಪಿಎ, ಪಿಎಸ್ ಗಳಿಗೆ ಅನುಮತಿ ನೀಡಲ್ಲ, ಪ್ರಶ್ನೋತ್ತರ ವೇಳೆಯನ್ನ ಒಂದು ಗಂಟೆಗೆ ನಿಗದಿಗೊಳಿಸಲಾಗಿದೆ ಎಂದರು.
ಇನ್ನೂ ಅಧಿವೇಶನಕ್ಕೆ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆದ್ರೆ ಅವರು ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ಒಂದೇ ದಿನ ಅಧಿವೇಶನ ನಡೆಸಿ ಎಲ್ಲಾ ಬಿಲ್ಗಳನ್ನ ಪಾಸ್ ಮಾಡಿದ್ದಾರೆ ಎಂದು ಕೇಂದ್ರಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಾಳೆ ರಾಜ್ಯ ಸಂಪುಟ ಸಚಿವರೊಂದಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಭೆ; ಅಧೀವೇಶನದ ಬಗ್ಗೆ ಚರ್ಚೆ
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಈಗಾಗಲೇ ನಮ್ಮ ಸರ್ಕಾರ ಆದೇಶ ಮಾಡಿದೆ ಎಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೊದಲ ಹಂತದಲ್ಲಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ ಎಂದರು.
ಅದು ಭಾರತ ಸರ್ಕಾರಕ್ಕೆ ಸೇರಿದ ರಸ್ತೆ ಅಲ್ಲದೆ ಇದ್ದರೂ, ವಿಶೇಷ ಕಾಳಜಿ ಮೂಲಕ ಯೋಜನೆಗೆ ಆದೇಶ ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರಗಳನ್ನು ಟ್ರಾಫಿಕ್ ಫ್ರೀ ಮಾಡುತ್ತಿದ್ದೇವೆ. ಇದಕ್ಕಾಗಿ 600 ಕೋಟಿಯ ಯೋಜನೆ ರೂಪುಗೊಳುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
Published by:
Latha CG
First published:
September 6, 2020, 2:39 PM IST