HOME » NEWS » State » UNION MINISTER PRAHLAD JOSHI SAYS UNDER SMART CITY PLAN WATER GAMES WILL START AT UNAKAL LAKE LG

ಸ್ಮಾರ್ಟ್​​​ಸಿಟಿ ಯೋಜನೆಯಡಿ ಉಣಕಲ್ ಕೆರೆಯಲ್ಲಿ ಜಲಕ್ರೀಡೆಗಳ ಸಮುಚ್ಚಯ ನಿರ್ಮಾಣ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರು ರಸ್ತೆ ನಿರ್ಮಾಣಕ್ಕೆ ಮುಂಚೆ ಗ್ಯಾಸ್ ಹಾಗೂ ಯುಜಿಡಿ ಸಂಪರ್ಕ ಪ್ರತಿ ಮನಗೆ ನೀಡಲಾಗಿದೆಯೇ ಎಂದು ಸರ್ವೇ ಮಾಡಬೇಕು. ರಸ್ತೆ ನಿರ್ಮಿಸಿದ ನಂತರ ಅದನ್ನು ಅಗೆಯಲು ಪರವಾನಿಗೆ ನೀಡಬಾರದು ಎಂದು ಹೇಳಿದರು.

news18-kannada
Updated:December 7, 2020, 10:24 AM IST
ಸ್ಮಾರ್ಟ್​​​ಸಿಟಿ ಯೋಜನೆಯಡಿ ಉಣಕಲ್ ಕೆರೆಯಲ್ಲಿ ಜಲಕ್ರೀಡೆಗಳ ಸಮುಚ್ಚಯ ನಿರ್ಮಾಣ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
  • Share this:
ಹುಬ್ಬಳ್ಳಿ(ಡಿ.07): ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರೀಡಾ ಸಮುಚ್ಚಯದ ಜೊತೆಗೆ, ಉಣಕಲ್ ಕೆರೆಯಲ್ಲಿ ಜಲಕ್ರೀಡೆಗಳಿಗೆ ಅನುಕೂಲವಾಗುವಂತೆ ಪೂರ್ಣ ಪ್ರಮಾಣದ ಸಂಯೋಜಿತ ಕ್ರೀಡಾ ಸಮುಚ್ಚಯವನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಉಣಕಲ್ ಕೆರೆ ಕೋಡಿ ನಾಲಾ ಪ್ರದೇಶದ ಬಳಿ, ಹುಬ್ಬಳ್ಳಿ  ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ, 8 ಕೋಟಿ ಮೊತ್ತದ 680.ಮೀ ಗ್ರೀನ್ ಮೊಬೈಲಿಟಿ ಕಾರಿಡರ್, 5 ಕೋಟಿ ವೆಚ್ಚದ ಈಜುಗೊಳದ ದ್ವೀತಿಯ ಹಂತದ ಕಾಮಗಾರಿ, ಹಾಗೂ 92.94 ಕೋಟಿ ವೆಚ್ಚದ ಸ್ಮಾರ್ಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೇರವೇರಿಸಿ ಮಾತನಾಡಿದರು.

ಸಂಯೋಜಿತ ಕ್ರೀಡಾ ಸಮುಚ್ಚಯದ ಯೋಜನೆ ಹಾಗೂ ನೀಲನಕ್ಷೆ ಸಿದ್ದಪಡಿಸಲಾಗಿದೆ. ಕ್ರೀಡಾ ಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕ್ರೀಡಾ ಶಾಲೆಯನ್ನು ಸಹ ತೆರೆಯಲಾಗುವುದು. ರಾಜ್ಯದಲ್ಲಿ ಮಾದರಿಯಾದ ಕ್ರೀಡಾ ಸಮುಚ್ಚಯ ನಿರ್ಮಾಣದ ಜೊತೆಗೆ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳನ್ನು ಸಹ ಆಯೋಜಿಸಲು ಕ್ರೀಡಾ ಸಮುಚ್ಚಯ ಬಳಕೆಗೆ ಬರಲಿದೆ. ಸಭಾಂಗಣ, ಕ್ರೀಡಾ ಸ್ಪರ್ಧಿಗಳಿಗೆ ಅನುಕೂಲವಾಗುವಂತಹ ಸಮಾಲೋಚನಾ ಕೇಂದ್ರವನ್ನು ಸಹ ನಿರ್ಮಿಸಲಾಗುವುದು. ಯೋಜನೆ ಕುರಿತಾಗಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರಾತ್ಯಕ್ಷೆತೆ ನೀಡುವರು. ಸಿಟಿಸ್ ಚಾಲೆಂಜ್ ಪ್ರೋಜೆಕ್ಟ್ ಯೋಜನೆಯಲ್ಲಿ ವಿಶ್ವಕ್ಕೆ ಮಾದರಿಯಾಗುವಂತಹ 680 ಮೀ. ಗ್ರೀನ್ ಮೊಬೈಲಿಟಿ ಕಾರಿಡಾರ್ ನಿರ್ಮಿಸಲಾಗುತ್ತಿದೆ ಎಂದರು.

Niharika Marriage: ಮದುವೆಗೆ ಅಮ್ಮನ ನಿಶ್ಚಿತಾರ್ಥದ ಸೀರೆ ತೊಟ್ಟ ಮೆಗಾ ಮಗಳು: 32 ವರ್ಷದ ಹಳೇ ಸೀರೆಯಲ್ಲಿ ಮಿಂಚಿದ ನಿಹಾರಿಕಾ ..!

ಉಣಕಲ್ ನಾಲಾ ವ್ಯಾಪ್ತಿಯ 10.5 ಕಿ.ಮೀ ಉದ್ದದ ಗ್ರೀನ್ ಮೊಬೈಲಿಟಿ ಕಾರಿಡಾರ್ ನಿರ್ಮಾಣಕ್ಕೆ 130 ಕೋಟಿ ವೆಚ್ಚವಾಗಲಿದೆ. 50 ಕೋಟಿ ರುಪಾಯಿಗಳನ್ನು ಸ್ಮಾಟ್ ಸಿಡಿ ಯೋಜನೆಯಡಿ ಹಾಗೂ 80 ಕೋಟಿ ರೂಪಾಯಿಗಳನ್ನು ಯುರೋಪಿನ್ ಯುನಿಯನ್ ಹಾಗೂ ಪ್ರೆಂಚ್ ಡೆವಲಪ್‍ಮೆಂಟ್ ಫಂಡಿಂಗ್ ಸಂಸ್ಥೆಗಳು ನೀಡಲಿವೆ. ಸುಸಜ್ಜಿತ ತಡೆಗೋಡೆ, ಸೈಕಲ್ ಪಾಥ್, ಉದ್ಯಾನವನಗಳನ್ನು ನಾಲಾ ಅಕ್ಕಪಕ್ಕದಲ್ಲಿ ನಿರ್ಮಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 100 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರು ರಸ್ತೆ ನಿರ್ಮಾಣಕ್ಕೆ ಮುಂಚೆ ಗ್ಯಾಸ್ ಹಾಗೂ ಯುಜಿಡಿ ಸಂಪರ್ಕ ಪ್ರತಿ ಮನಗೆ ನೀಡಲಾಗಿದೆಯೇ ಎಂದು ಸರ್ವೇ ಮಾಡಬೇಕು. ರಸ್ತೆ ನಿರ್ಮಿಸಿದ ನಂತರ ಅದನ್ನು ಅಗೆಯಲು ಪರವಾನಿಗೆ ನೀಡಬಾರದು ಎಂದು ಹೇಳಿದರು.

ಬೃಹತ್ ಮಧ್ಯಮ ಕೈಗಾರಿಕೆ,ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಅಧಿಕಾರಿಗಳು ಸಿಟಿಸ್ ಚಾಲೆಂಜ್ ಪ್ರೋಜೆಕ್ಟ್ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು. ಯೋಜನೆ ಕುರಿತು ಸಾರ್ವಜನಿಕರಲ್ಲಿ ಪ್ರಚುರ ಪಡಿಸಬೇಕು. ರಾಜ ಕಾಲುವೆ ಒತ್ತುವರಿಯಿಂದ ಬೆಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಆಗುತ್ತಿರುವ ಅನಾವುತಹಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಕೆರೆ ಹಾಗೂ ಒಳಚರಂಡಿ ನೀರುಗಳು ಸರಾಗವಾಗಿ ಹರಿದು ಹೋಗಬೇಕು. ಉಣಕಲ್ ನಾಲಾ ಪ್ರದೇಶದಲ್ಲಿ ಒತ್ತುವರಿಗೆ ಅವಕಾಶ ನೀಡಬಾರದು. ರಾಷ್ಟ್ರದಲ್ಲಿ ಆಯ್ದ 100 ನಗರಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಲ್ಲಿದೆ. ಸ್ಮಾರ್ಟ್ ಸಿಟಿ ಅನುಷ್ಠಾನದಲ್ಲಿ ಹುಬ್ಬಳ್ಳಿ ಧಾರವಾಡ ರಾಷ್ಟ್ರಮಟ್ಟದಲ್ಲಿ 13ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮೊದಲನೇ ಸ್ಥಾನದಲ್ಲಿದೆ. ನಿಗದಿತ ವೇಳೆಯ ಒಳಗೆ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಮಹಾನಗರ ಪಾಲಿಕೆಗೆ ನೀಡಲಾದ ಎರೆಡು ಜಟ್ಟಿಂಗ್ ವಾಹನಗಳಿಗೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಸಿ ಜಡಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ್ರ, ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಸೇರಿದಂತೆ ಮತ್ತಿರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Published by: Latha CG
First published: December 7, 2020, 10:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories