ಕೊರೋನಾ ಸೋಂಕಿತರ ಮಾಹಿತಿ, ಕೈಗೊಂಡ ಕ್ರಮಗಳ ಬಗ್ಗೆ ರಾಮುಲುಗೆ ಕರೆ ಮಾಡಿ ಮಾಹಿತಿ ಪಡೆದ ಕೇಂದ್ರ ಸಚಿವ

ರಾಜ್ಯದಲ್ಲಿ ಕೊರೋನಾ ವೈರಸ್ ಪೀಡಿತರ ಬಗ್ಗೆ ಕೈಗೊಂಡ ಕಾರ್ಯಗಳು ಹಾಗೂ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ವಿವರವನ್ನು ಕೇಂದ್ರ ಸಚಿವರಾದ ಹರ್ಷವರ್ಧನ್ ಅವರಿಗೆ ದೂರವಾಣಿ ಮುಖಾಂತರ ಶ್ರೀರಾಮುಲು ವಿವರಿಸಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಹರ್ಷವರ್ಧನ.

ಆರೋಗ್ಯ ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಹರ್ಷವರ್ಧನ.

 • Share this:
  ಬೆಂಗಳೂರು: ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನ್ ಅವರು ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಅವರಿಗೆ ಕರೆ ಮಾಡಿ, ರಾಜ್ಯದಲ್ಲಿ ಕೊರೋನಾ ವೈರಸ್ ಪೀಡಿತರ ಬಗ್ಗೆ ಕೈಗೊಂಡ ಕಾರ್ಯಗಳು ಹಾಗೂ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ವಿವರ ಕೇಳಿದ್ದಾರೆ.

  ಕೇಂದ್ರ ಸಚಿವ ಹರ್ಷವರ್ಧನ್ ಅವರಿಗೆ ಶ್ರೀ ರಾಮುಲು ವಿವರಗಳನ್ನು ನೀಡಿದ್ದಾರೆ. ವಿವರ ಇಂತಿದೆ...

  • ಈಗಾಗಲೇ ಕಲಬುರ್ಗಿ, ಬೆಳಗಾವಿ, ಮಂಗಳೂರು, ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಬೇಟಿ ಕೊಟ್ಟಿದ್ದೇನೆ.

  • ಕರ್ನಾಟಕದಲ್ಲಿರುವ 83 ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ 3 ಮಂದಿ ಮೃತಪಟ್ಟಿದ್ದಾರೆ.

  • ಈ ಕೊರೋನಾ ಸೋಂಕಿತರಲ್ಲಿ ಶೇ 80 ರೋಗಿಗಳು ಗುಣಮುಖರಾಗುತ್ತಿದ್ದಾರೆ.

  • ಶೇ. 20 ರಷ್ಟು ರೋಗಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು.

  • ಅದರಲ್ಲಿ ಶೇ.3 ರಷ್ಟು ಕೊರೋನಾ ಸೋಂಕಿತರಿಗೆ ಮಾತ್ರ ವೆಂಟಿಲೇಟರ್ ನಲ್ಲಿಡಬೇಕು.

  • ನಮ್ಮಲ್ಲಿ 2 ರೋಗಿಗಳಿಗೆ ಮಾತ್ರ ಇಲ್ಲಿವರೆಗೆ ವೆಂಟಿಲೇಟರ್ ಬೇಕಿದೆ.

  • ಆದ್ರೆ ಕೊರೋನಾ ಸೋಂಕು ತಗುಲಿದ 3 ರೋಗಿಗಳು ಸೋಂಕು ಹಾಗೂ ಇತರ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದಾರೆ.

  • ನಮ್ಮಲ್ಲಿ 734 ವೆಂಟಿಲೇಟರ್​ಗಳು ಇವೆ.

  • ನಂಜನಗೂಡು, ಶಿರಾ ಪಾಸಿಟಿವ್ ಪ್ರಕರಣಗಳ ಪ್ರಯಾಣ ಇತಿಹಾಸವನ್ನು ಟ್ರ್ಯಾಕ್ ಮಾಡ್ತಿದ್ದೇವೆ.

  • ನಮ್ಮಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಅದರ ತೀವ್ರತೆ ಕಡಿಮೆ ಇದೆ.


  ಇದನ್ನು ಓದಿ: Lockdown In India: ಏಪ್ರಿಲ್​ 14ರ ನಂತರವೂ ಲಾಕ್​ಡೌನ್​ ಮುಂದುವರಿಯಲಿದೆ ಅನ್ನೋದು ಸುಳ್ಳು; ಕೇಂದ್ರದ ಸ್ಪಷ್ಟನೆ
  First published: