ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಇಂದು ಕೊನೆಯ ಮೊಳೆ ಬಿದ್ದಿದೆ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

"ಬಚ್ಚೇಗೌಡರು ಎಲ್ಲೂ ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ. ಅವರು ಪಕ್ಷ ವಿರೋಧಿ ನಡೆಸಿದ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ," ಎಂದು ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

  • Share this:
ನವದೆಹಲಿ(ಡಿ.09): ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ನಾಯಕರು ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಉಪಚುನಾವಣೆ ಫಲಿತಾಂಶ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ. 

ದೆಹಲಿಯಲ್ಲಿ ಮಾತನಾಡಿದ ಅವರು," ಸುಭದ್ರ ಸರ್ಕಾರಕ್ಕಾಗಿ ಈ ಜನಾದೇಶ ಬಂದಿದೆ. ದುರಂಹಕಾರದ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಜನರಿಗೆ ನಮ್ಮ ವಿಚಾರ ತಲುಪಿಸುವುದರಲ್ಲಿ ಯಶಸ್ವಿಯಾಗಿದ್ದೇವೆ," ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬ ರಾಜಕಾರಣ ಕುರಿತು ಟೀಕೆ ಮಾಡಿದರು. "ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಇಂದು ಕೊನೆಯ ಮೊಳೆ ಬಿದ್ದಿದೆ. ಪಕ್ಷೇತರರು ಗೆದ್ದಿರುವುದು ಜೆಡಿಎಸ್ ಸಹಕಾರದಿಂದ ಅಲ್ಲ," ಎಂದು ತಿರುಗೇಟು ನೀಡಿದರು.

ಪವಿತ್ರ, ಸುಭದ್ರ ಸರ್ಕಾರಕ್ಕೆ ಮುದ್ರೆ ಒತ್ತಿದ ಪ್ರಜ್ಞಾವಂತ ಮತದಾರರಿಗೆ ಮನದಾಳದ ಅಭಿನಂದನೆ ತಿಳಿಸಿದ ಎಚ್​ಡಿಕೆ

"ಬಚ್ಚೇಗೌಡರು ಎಲ್ಲೂ ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ. ಅವರು ಪಕ್ಷ ವಿರೋಧಿ ನಡೆಸಿದ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ," ಎಂದು ಹೇಳಿದರು.

ಕಾಂಗ್ರೆಸ್​ ಶಾಸಕಾಂಗ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯನವರ ನಡೆಗೆ ಡಿವಿಎಸ್​ ವ್ಯಂಗ್ಯ ಮಾಡಿದರು . "ಸಿದ್ದರಾಮಯ್ಯ ಮಾಡಿದ್ದು ಸರಿ ಇದೆ. ಅವರಿಗೆ ಯಾವಾಗಲೋ ಬುದ್ಧಿ ಬರಬೇಕಿತ್ತು. ತಾನು ನಡೆದಿದ್ದೇ ದಾರಿ ಎಂದುಕೊಂಡಿದ್ದರು. ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ರಾಜೀನಾಮೆ ನೀಡಿದ್ದರಿಂದ ಗೌರವ ಹೆಚ್ಚಳವಾಗಿದೆ," ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್​ ಉತ್ತಮ ಆಯ್ಕೆ; ಜನಾರ್ದನ ಪೂಜಾರಿ

 

 
First published: