ಬಳ್ಳಾರಿ: 2008ರ ವಿಧಾನಸಭಾ ಚುನಾವಣೆ (Assembly Election) ವೇಳೆ ಅಖಂಡ ಬಳ್ಳಾರಿ (Bellary) ಜಿಲ್ಲೆಯಲ್ಲಿ ಕಮಲ ಅರಳಿತ್ತು. ಆದ್ರೆ ಸಂಡೂರ ವಿಧಾನಸಭಾ ಕ್ಷೇತ್ರದಲ್ಲಿ (Sandur Assembly Constituency) ಮಾತ್ರ ಕಾಂಗ್ರೆಸ್ (Congress) ಗೆಲುವಿನ ಪತಾಕೆಯನ್ನು ಹಾರಿಸಿತ್ತು. 2008, 2013 ಮತ್ತು 2018ರಲ್ಲಿ ಚುನಾವಣೆ ನಡೆದಾಗಲೂ ಇಲ್ಲಿ ಕಾಂಗ್ರೆಸ್ ಗೆದ್ದಿದೆ. 2004ರಲ್ಲಿ ಜೆಡಿಎಸ್ನಿಂದ (JDS) ಸ್ಪರ್ಧೆ ಮಾಡಿದ್ದ ಸಂತೋಷ್ ಲಾಡ್ (Santhosh S Lad) ಗೆದ್ದಿದ್ದರು. ಸಂಡೂರು ಚುನಾವಣಾ ಇತಿಹಾಸದಲ್ಲಿ ಒಂದೂ ಬಾರಿಯೂ ಕಮಲ ಅರಳಿಲ್ಲ. ಈ ಹಿನ್ನೆಲೆ 2023ರ ಚುನಾವಣೆಯಲ್ಲಿ (Karnataka Elections 2023) ಸಂಡೂರು ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ (BJP) ಮುಂದಾಗಿದೆ. ಹೀಗಾಗಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಪಾದರಸದಂತೆ ಸಕ್ರಿಯರಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಹಾಲಿ ಶಾಸಕರಾಗಿರುವ ಇ.ತುಕಾರಂ(Congress MLA E Tukaram) ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಮಾಡಿದ್ದಾರೆ. ನಾಲ್ಕನೇ ಬಾರಿಯೂ ಸಂಡೂರಿನಲ್ಲಿ ಗೆಲ್ಲುವ ವಿಶ್ವಾಸವನ್ನು ತುಕಾರಂ ವ್ಯಕ್ತಪಡಿಸಿದ್ದಾರೆ.
ಇದೀಗ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಚುನಾವಣಾ ಚಾಣಾಕ್ಯ ಅಮಿತ್ ಶಾ ಅವರೇ ಸಂಡೂರಿಗೆ ಆಗಮಿಸುತ್ತಿದ್ದಾರೆ.
ಫೆ.23ಕ್ಕೆ ಅಮಿತ್ ಶಾ ಆಗಮನ
ಗಣಿನಾಡಿನ ಅಖಂಡ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಬಿಜೆಪಿ ಸಾಕಷ್ಟು ಚುನಾವಣಾ ಕಾರ್ಯತಂತ್ರಗಳನ್ನ ರೂಪಿಸಿದೆ. ಇದರ ಭಾಗವಾಗಿ ಬಳ್ಳಾರಿ ಜಿಲ್ಲೆಗೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನ ಕರೆಸಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರುವರಿ 23 ರಂದು ಅಮಿತ್ ಶಾ ಆಗಮಿಸಲಿದ್ದಾರೆ.
ತುಕಾರಂ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಪ್ಲಾನ್
ಈ ಭಾರಿ ಸಂಡೂರು ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಅಂತಾ ಮೆಗಾ ಪ್ಲಾನ್ ಮಾಡಿರುವ ಬಿಜೆಪಿ ಅಮಿತ್ ಶಾ ಅವರನ್ನ ಕರೆಯಿಸಿ ಚುನಾವಣಾ ರಣತಂತ್ರ ರೂಪಿಸಲಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕ ಇ.ತುಕಾರಂ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ಸಂಡೂರು ಪಟ್ಟಣದಲ್ಲಿ ಫೆಬ್ರುವರಿ 23 ರಂದು ಅಮಿತ್ ಶಾ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ.
ನಾಲ್ಕು ಜಿಲ್ಲೆಗಳ ನಾಯಕರೊಂದಿಗೆ ಅಮಿತ್ ಶಾ ಸಭೆ
ಸಂಡೂರು ಮಾತ್ರವಲ್ಲದೇ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಫೆಬ್ರುವರಿ 23 ರಂದು ಈ ನಾಲ್ಕು ಜಿಲ್ಲೆಗಳ ಕೋರ್ ಕಮಿಟಿ ಸಭೆಯನ್ನ ಅಮಿತ್ ಶಾ ಮಾಡಲಿದ್ದಾರೆ. ಹಾಲಿ- ಮಾಜಿ ಶಾಸಕರು, ಸಂಸದರು ಸೇರಿದಂತೆ ನಾಲ್ಕು ಪ್ರಮುಖ ಮುಖಂಡರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂಡೂರಿನಲ್ಲಿ ಬೃಹತ್ ಸಮಾವೇಶ
ಕೋರ್ ಕಮಿಟಿ ಸಭೆಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚು ಬಿಜೆಪಿ ಸ್ಥಾನ ಗೆಲ್ಲಲು ಚುನಾವಣಾ ಚಾಣಕ್ಯ ಅಮಿತ್ ಶಾ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಂಡೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಸೇರಿಸಲು ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ: Suman Talwar: ತುಳುನಾಡ ದೈವಗಳನ್ನು ನೆನೆದ ಸೂಪರ್ ಸ್ಟಾರ್! ಸುಮನ್ ತಲ್ವಾರ್ಗೆ ಹುಟ್ಟೂರಲ್ಲಿ ಅದ್ದೂರಿ ಸನ್ಮಾನ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಪ್ಲಾನ್ ಮಾಡಿದೆ. ಈ ಭಾಗವಾಗಿ ಯಾದಗಿರಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ನೀಡಿದ್ರು. ಈಗ ಗಣಿನಾಡಿಗೆ ಚುನಾವಣಾ ಚಾಣಕ್ಯ ಅಮಿತ್ ಶಾ ಆಗಮಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದೆ.
ವರದಿ: ಬಸವರಾಜ್ ಹರನಹಳ್ಳಿ, ಬಳ್ಳಾರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ