• Home
  • »
  • News
  • »
  • state
  • »
  • Cabinet Expansion: ಸಂಪುಟ ವಿಸ್ತರಣೆಗೆ ಅನುಮತಿ ನೀಡದ ಅಮಿತ್ ಶಾ!

Cabinet Expansion: ಸಂಪುಟ ವಿಸ್ತರಣೆಗೆ ಅನುಮತಿ ನೀಡದ ಅಮಿತ್ ಶಾ!

ಅಮಿತ್ ಶಾ, ಕೇಂದ್ರ ಸಚಿವ

ಅಮಿತ್ ಶಾ, ಕೇಂದ್ರ ಸಚಿವ

ಸಂಪುಟ ಸೇರಲು ತುದಿಗಾಲಿನಲ್ಲಿ ನಿಂತಿರುವ ಮಾಜಿ ಸಚಿವರಾದ ಕೆಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತು ಸಿಪಿ ಯೋಗೇಶ್ವರ್ ಖಾಸಗಿ ಹೋಟೆಲ್​ನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿದ್ದರಂತೆ.

  • Share this:

ಕೇಂದ್ರ  ಗೃಹ ಸಚಿವ ಅಮಿತ್ ಶಾ (Union Minister Amit Shah) ಎರಡು ದಿನದ ಪ್ರವಾಸ ಮುಕ್ತಾಯವಾಗಿದೆ. ಎರಡೂ ದಿನವೂ ಹಳೆ ಮೈಸೂರು ಭಾಗದಲ್ಲಿಯ ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಇನ್ನು ಬಹುದಿನದಿಂದ ಸಂಪುಟ ವಿಸ್ತರಣೆ (Cabinet Expansion) ಬಾಕಿ ಇದ್ದು, ಇದುವರೆಗೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಎರಡು ದಿನವೂ ರಾಜ್ಯದ ಮುಖಂಡರ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದರೂ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಮಾತನಾಡಿದ ಅಮಿತ್ ಶಾ, ಮುಂದಿನ ಚುನಾವಣೆಯಲ್ಲಿ (Karnataka Elections 2023) ಬಿಜೆಪಿ ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳಲ್ಲ. ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ. ಏಕಾಂಗಿಯಾಗಿ ಅಧಿಕಾರ ಹಿಡಿಯಲಿದೆ ಎಂದು ಹೇಳುವ ಮೂಲಕ ಜೆಡಿಎಸ್ (JDS) ಜೊತೆ ಯಾವುದೇ ಹೊಂದಾಣಿಕೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.


ಅಮಿತ್ ಶಾ ಭೇಟಿಗೆ ಯತ್ನ


ಸಂಪುಟ ಸೇರಲು ತುದಿಗಾಲಿನಲ್ಲಿ ನಿಂತಿರುವ ಮಾಜಿ ಸಚಿವರಾದ ಕೆಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತು ಸಿಪಿ ಯೋಗೇಶ್ವರ್ ಖಾಸಗಿ ಹೋಟೆಲ್​ನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿದ್ದರಂತೆ. ಎಲ್ಲರೂ ಜೊತೆಯಾಗಿ ಅಮಿತ್ ಶಾ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರಂತೆ. ಆದರೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.


Union minister Amit Shah Shows No Interest In Cabinet Expansion mrq
ರಮೇಶ್​ ಜಾರಕಿಹೊಳಿ


ಆದ್ರೆ ಯಾರನ್ನೂ ಭೇಟಿಯಾಗದ ಅಮಿತ್ ಶಾ, ಸಂಪುಟ ವಿಸ್ತರಣೆಯನ್ನು ನೋಡೋಣ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.


ಸದ್ಯ ಶೂನ್ಯ ಮಾಸ ಇರೋದರಿಂದ ಒಳ್ಳೆಯ ಕಾರ್ಯಕ್ಕೆ ಶುಭ ಅಲ್ಲ. ಶೂನ್ಯ ಮಾಸ ಮುಕ್ತಾಯದ ನಂತರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.


ಬೆಳಗಾವಿ ಅಧಿವೇಶನಕ್ಕೆ ಗೈರು 


ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಮತ್ತು ಕೆಎಸ್ ಈಶ್ವರಪ್ಪ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನಕ್ಕೆ ಗೈರಾಗುವ ಮೂಲಕ ತಮ್ಮಅಸಮಾಧಾನ ಹೊರ ಹಾಕಿದ್ದರು. ಇಬ್ಬರು ನಾಯಕರು ಜೊತೆಯಾಗಿಯೇ ಹಲವು ಸಭೆ ನಡೆಸುತ್ತಿರೋದು ಮುಂದೆ ಏನು ಆಗುತ್ತೆ ಅನ್ನೋ ಕುತೂಹಲ ಮೂಡಿದೆ.


Union minister Amit Shah Shows No Interest In Cabinet Expansion mrq
ಕೆಎಸ್​ ಈಶ್ವರಪ್ಪ/ ರಮೇಶ್​ ಜಾರಕಿಹೊಳಿ


ಕಾಂಗ್ರೆಸ್-ಜೆಡಿಎಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ


ಕಾಂಗ್ರೆಸ್‌ - ಜೆಡಿಎಸ್ ‌ವೋಟ್ ಬ್ಯಾಂ‌ಕ್‌ಗಾಗಿ ಪಿಎಫ್‍ಐ, ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ. ಆದರೆ, ನಾವು ಹಾಗಲ್ಲ. ದೇಶದ ಸುರಕ್ಷತೆ, ಸರ್ವತೋಮುಖ ಅಭಿವೃದ್ಧಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ದೂರವಿಡಲು ಬಿಜೆಪಿ ಬೆಂಬಲಿಸಿ ಎಂದು ಅಮಿತ್ ಶಾ ಮನವಿ ಮಾಡಿಕೊಂಡರು.


ಕಾಂಗ್ರೆಸ್ ಪಕ್ಷದವರು ಹೊಸ ವಿಚಾರಗಳನ್ನು ತಂದು ಮತ ಕೇಳುತ್ತಾರೆ. ಕಾಂಗ್ರೆಸ್ಸಿಗೆ ಆಡಳಿತವು ಭ್ರಷ್ಟಾಚಾರಕ್ಕೆ ಸಾಧನ. ಗೆದ್ದರೆ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತಾರೆ.  ಜೆಡಿಎಸ್ - ಕಾಂಗ್ರೆಸ್ ಚುನಾವಣೆಯಲ್ಲಿ ಎದುರಾಳಿ ಆಗಿದ್ದರೂ ಬಳಿಕ ಬಿಜೆಪಿ ಎದುರು ಬಂದಾಗ ಜೊತೆಗೂಡುತ್ತವೆ.  2018 ರಲ್ಲೂ ಹೀಗೇ ಆಗಿತ್ತು. ಬಳಿಕ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರ್ಕಾರ ಕುಸಿದು ಬಿತ್ತು. ಬಳಿಕ ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ.


ಇದನ್ನೂ ಓದಿ: Cabinet Expansion: ಮದುವೆ ಗಂಡು ಈಶ್ವರಪ್ಪ ಆಸೆಗೆ ತಣ್ಣೀರು ಅಂತ ಕಾಂಗ್ರೆಸ್ ವ್ಯಂಗ್ಯ! ಅತ್ತ ಸಂಪುಟ ವಿಸ್ತರಣೆಗೆ ಸಿಕ್ಕಿದ್ಯಂತೆ ಹೈಕಮಾಂಡ್ ಸಿಗ್ನಲ್!


ದೇಶದ ಸುರಕ್ಷತೆಗಾಗಿ ಬಿಜೆಪಿ ಸರ್ಕಾರ ಕೆಲಸ


ಕಾಂಗ್ರೆಸ್‍ನವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ. ನಾವು ಪುರಾವೆಯೊಂದಿಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಭ್ರಷ್ಟಾಚಾರದ ವಿವರ ಕೊಟ್ಟಿದ್ದೇವೆ ಎಂದರು.


ಬಿಜೆಪಿ ಕಾರ್ಯಕರ್ತರು ಎಂದೂ ವೋಟ್‌ ಬ್ಯಾಂಕ್‌ಗೆ ಹೆದರುವುದಿಲ್ಲ. ದೇಶದ ಸುರಕ್ಷತೆಯಲ್ಲಿ ನಂಬಿಕೆ ಇಡುವವರು ನಾವು.  ಈ ದೇಶಕ್ಕೆ ಸುರಕ್ಷತೆಯನ್ನು ನೀಡುವ ಕೆಲಸವನ್ನು ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

Published by:Mahmadrafik K
First published: