ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣ; Amit Shah

ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ನಾಶವಾಗುತ್ತದೆ. ಸಿದ್ಧಗಂಗೆಗೆ ಬಂದ್ರೂ ನಮ್ಮ ಪಾಪಗಳು ಕಳೆಯುತ್ತವೆ. ಲಕ್ಷಾಂತರ ಜನರ ಬದುಕನ್ನು ಉದ್ಧರಿಸಿದ್ದು ಶ್ರೀಗಳು. ಅನ್ನ, ಅಕ್ಷರ, ಆಶ್ರಯದ ಮೂಲಕ ತ್ರಿವಿಧ ದಾಸೋಹ ಮಾಡಿದರು.

ಗುರುವಂದನಾ ಕಾರ್ಯಕ್ರಮ

ಗುರುವಂದನಾ ಕಾರ್ಯಕ್ರಮ

 • Share this:
  ತುಮಕೂರು (ಏ. 1): ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣ (Basavanna). ಬದುಕಿನ ಕೊನೆಯ ಉಸಿರಿರುವವರೆಗೂ ಸೇವೆ ಮಾಡಿದರು. ಶ್ರೀಗಳು (Shivakumar Swamiji) ಜೀವನ ಕರ್ಮದಿಂದಲೇ ಸಂದೇಶ ನೀಡಿದರು. 3ನೇ ಬಾರಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುತ್ತಿದ್ದೇನೆ. ಪ್ರತಿ ಬಾರಿ ಇಲ್ಲಿಗೆ ಬಂದಾಗ ಹೊಸ ಚೈತನ್ಯ ಪಡೆಯುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ತಿಳಿಸಿದರು. ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 150ನೇ ಜಯಂತೋತ್ಸವದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಮಠದಲ್ಲಿ ಸದಾ ಸಂತೋಷ ಸಿಗುತ್ತದೆ. ‘ಉತ್ತರ್​ ಮೆ ಗಂಗಾ, ದಕ್ಷಿಣ್​ ಮೆ ಸಿದ್ಧಗಂಗಾ’ ಎಂದು ವಾಜಪೇಯಿಯವರು ಸರಿಯಾಗಿಯೇ ಹೇಳಿದರು.

  ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ನಾಶವಾಗುತ್ತದೆ. ಸಿದ್ಧಗಂಗೆಗೆ ಬಂದ್ರೂ ನಮ್ಮ ಪಾಪಗಳು ಕಳೆಯುತ್ತವೆ. ಲಕ್ಷಾಂತರ ಜನರ ಬದುಕನ್ನು ಉದ್ಧರಿಸಿದ್ದು ಶ್ರೀಗಳು. ಅನ್ನ, ಅಕ್ಷರ, ಆಶ್ರಯದ ಮೂಲಕ ತ್ರಿವಿಧ ದಾಸೋಹ ಮಾಡಿದರು. ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆಶ್ರಯ ನೀಡಿದರು ಎಂದು ಅವರ ಕಾರ್ಯ ಸ್ಮರಿಸಿದರು.

  ಸಿದ್ದಗಂಗಾ ಶ್ರೀಗಳ ಆದರ್ಶದಲ್ಲಿ ಮೋದಿ ಸರ್ಕಾರ ಸಾಗುತ್ತಿದೆ. ಮೋದಿ ಸರ್ಕಾರ 3 ಕೋಟಿ ಜನರಿಗೆ ಮನೆ ನೀಡಿದೆ. ಕೋಟ್ಯಂತರ ಬಡವರಿಗೆ ಉಚಿತ ಅಕ್ಕಿ ನೀಡಿದ್ದೇವೆ. ಶಿವಕುಮಾರ ಶ್ರೀಗಳ ದಾಸೋಹವನ್ನು ಪಾಲಿಸಿದ್ದೇವೆ. ಇಂದು ಶ್ರೀಗಳ ಗದ್ದುಗೆಗೆ ನಮಿಸಿ ಆಶೀರ್ವಾದ ಪಡೆದಿದ್ದೇನೆ ಎಂದರು.

  ವಿಜಯೇಂದ್ರನ ಕಾರ್ಯಕ್ಕೆ ಮೆಚ್ಚುಗೆ
  ಇನ್ನು ಸಿದ್ದಗಂಗಾ ಗುರುವಂದನಾ ಕಾರ್ಯಕ್ರಮದಲ್ಲಿ ಉತ್ತಮವಾಗಿ ಯೋಜಿಸಿದ್ದ ಹಿನ್ನಲೆ ಬಿಜೆಪಿ ನಾಯಕ ವಿಜಯೇಂದ್ರ ಅವರಿಗೆ ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮೆಚ್ಚುಗೆ ಸೂಚಿಸಿದರು.

  ಇದನ್ನು ಓದಿ: 115 ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣ; ಮಗನಿಗೆ 'ಶಿವಮಣಿ' ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

  ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು

  ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳ ಜಯಂತಿಯನ್ನು ದಾಸೋಹ ದಿನ ಎಂದು ಈಗಾಗಲೇ ಸರ್ಕಾರ ಆಚರಿಸುತ್ತಿದೆ. ಮಧ್ಯಾಹ್ನದ ಬಿಸಿ ಊಟದ ಯೋಜನೆಗೆ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.

  ಈ ನೆಲದಲ್ಲಿ ಅವರ ಸ್ಫೂರ್ತಿ, ಪ್ರೇರಣೆ ಇದೆ. ಇಲ್ಲಿ ಬಂದರೆ ಮನಸ್ಸಿಗೆ ಶಾಂತಿ, ಬದುಕಿಗೆ ದಾರಿ ಸಿಗುವ ಶಕ್ತಿ ಸಿದ್ದಗಂಗಾ ಕ್ಷೇತ್ರದಲ್ಲಿ ಇದೆ. ಅದೇ ದಾರಿಯಲ್ಲಿ ಸಿದ್ದಲಿಂಗಸ್ವಾಮಿಗಳು ಶಿವಕುಮಾರ ಸ್ವಾಮಿಗಳ ಪರಂಪರೆಯನ್ನು ಅತ್ಯಂತ ಪ್ರಾಮಾಣಿಕವಾಗಿ ದಕ್ಷತೆಯಿಂದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಯೋಗ್ಯವಾಗಿ ಮುನ್ನಡೆಸುತ್ತಿದ್ದಾರೆ ಎಂದರು.

  ಇದನ್ನು ಓದಿ: ವಿಧಾನಸಭೆ ಚುನಾವಣೆಯಲ್ಲಿ ಡಿಕೆಶಿ-ಸಿದ್ದರಾಮಯ್ಯಗೆ 150 ಸ್ಥಾನ ಗೆಲ್ಲುವ ಟಾಸ್ಕ್​ ಕೊಟ್ಟ Rahul Gandhi

  ಸರ್ವೋದಯ ಕಾರ್ಯಕ್ರಮಕ್ಕೆ ಬಜೆಟ್​ನಲ್ಲಿ ಅನುದಾನ

  ಆಡಳಿತಗಾರರು ಶ್ರೀ ಮಠವನ್ನು ಶ್ರದ್ಧಾ ಭಕ್ತಿಯಿಂದ ಕಂಡಿದ್ದಾರೆ. ನಮ್ಮ ಸರ್ಕಾರವೂ ಅತ್ಯಂತ ಶ್ರದ್ಧೆಯಿಂದ ಕಾಣುತ್ತಿದೆ. ಭಕ್ತಿಯಿಂದ ಬಸವಣ್ಣನವರ ದಾಸೋಹ, ಶಿಕ್ಷಣ, ಆರೋಗ್ಯ ತತ್ವಗಳಿಗೆ ನಮ್ಮ ಸರ್ಕಾರ ಮಹತ್ವ ನೀಡಿದೆ. ಸರ್ವೋದಯ ಕಾರ್ಯಕ್ರಮಕ್ಕೆ 60 ಸಾವಿರ ಕೋಟಿ ರೂ. ಗಳಿಗಿಂತ ಹೆಚ್ಚು ಅನುದಾನವನ್ನು ಈ ವರ್ಷದ ಬಜೆಟ್ ನಲ್ಲಿ ಮೀಸಲಿರಿಸಿದೆ. ಜನಕಲ್ಯಾಣಕ್ಕಾಗಿ ಹಾಗೂ ಜನರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ನಿಮ್ಮ ವಿಶ್ವಾಸ ಗಳಿಸುವ ರೀತಿಯಲ್ಲಿ ಕೆಲಸ ಮಾಡುತ್ತದೆ . ಬಡವರು ದೀನದಲಿತರು, ಹೆಣ್ಣು ಮಕ್ಕಳಿಗೆ ಕಾರ್ಯಕ್ರಮಗಳ ಅನುಷ್ಠಾನ ಮಾಡಿ ನಿಮ್ಮ ಪ್ರೀತಿ ವಿಶ್ವಾಸವನ್ನು ಗಳಿಸಿ ನಿಮ್ಮ ಮುಂದೆ ಬರುತ್ತೇವೆ ಎಂದರು.

  ಕಾಂಗ್ರೆಸ್​​ ನಾಯಕ ಜಿ ಪರಮೇಶ್ವರ್​ ಮಾತನಾಡಿ, ಈ ಸಮಾರಂಭಕ್ಕೆ ಬಸವ ಭಾರತ ಅಂತ ಕರೆದಿದ್ದಾರೆ. ಇಂದು ನಮಗೆ ಬಸವ ಭಾರತ ಬೇಕಾಗಿದೆ. ಭಾರತ ಹೇಗಿರಬೇಕೆಂದು ಕನಸು ಕಂಡವರು ಶ್ರೀಗಳು. ಗ್ರಾಮೀಣ ಭಾರತದ ಮಕ್ಕಳು ಶಿಕ್ಷಣ ಪಡೆಯಬೇಕು. ನಮ್ಮ ಮಕ್ಕಳಿಗೆ ಪ್ರಶ್ನೆ ಮಾಡುವ ಜ್ಞಾನ ಸಿಗಬೇಕೆಂದಿದ್ದರು. ಶ್ರೀಗಳ ಆದರ್ಶ ಒಂದು ದಿನವಾದ್ರೂ ಪಾಲಿಸೋಣ. ಶ್ರೀಗಳ ಆದರ್ಶ ಪಾಲನೆಯೇ ಸೂಕ್ತ ಗುರುವಂದನೆ ಎಂದರು.
  Published by:Seema R
  First published: