ಬೆಂಗಳೂರು: ಶನಿವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ರೋಡ್ ಶೋ (Roadshow) ವೇಳೆ ದಾವಣಗೆರೆಯಲ್ಲಿ ಭದ್ರತಾ ಲೋಪ ಉಂಟಾಗಿತ್ತು. 28 ವರ್ಷದ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಓಡಿ ಬಂದು ಒಂದು ಕ್ಷಣ ಆತಂಕ ಸೃಷ್ಟಿಸಿದ್ದನು. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಪ್ರಯಾಣಿಸುತ್ತಿದ್ದ ಮಾರ್ಗಮಧ್ಯೆ ಭದ್ರತಾ ವೈಫಲ್ಯ ಉಂಟಾಗಿದೆ. ಭಾನುವಾರ ರಾತ್ರಿ ಅಮಿತ್ ಶಾ ಅವರು ತಾಜ್ ವೆಸ್ಟ್ ಎಂಡ್ ನಿಂದ ಹೆಚ್ಎಎಲ್ ಗೆ ಹೋಗುತ್ತಿದ್ದ ವೇಳೆ ಭದ್ರತಾ ವೈಫಲ್ಯ (Security Failure) ಉಂಟಾಗಿದೆ. ಬೆಂಗಳೂರಿನ ಶಫಿನಾ ಫ್ಲಾಜಾದಿಂದ ಮಣಿಪಾಲ್ ಸೆಂಟರ್ವರೆಗೂ ಕಾನ್ವೇ ಹಿಂದೆ ಇಬ್ಬರು ಬೈಕರ್ಸ್ (Bikers) ಬಂದಿದ್ದಾರೆ.
ಸಡನ್ ಆಗಿ ಮಾರ್ಗ ಮಧ್ಯೆ ಬಂದ ಇಬ್ಬರು ಬೈಕರ್ಸ್ ಕಾನ್ವೆ ಹಿಂದೆ ಸುಮಾರು 300 ಮೀಟರ್ ಬಂದಿದ್ದಾರೆ. ಕಾನ್ವೆ ಜೊತೆಯಲ್ಲೇ ಕೆಲ ದೂರ ಬೈಕ್ನಲ್ಲಿ ಹೋಗಿದ್ದಾರೆ. ತಕ್ಷಣವೇ ಬೈಕ್ನಲ್ಲಿದ್ದ ಇಬ್ಬರನ್ನು ಮಣಿಪಾಲ್ ಸೆಂಟರ್ (Manipal Centre) ಬಳಿ ಭಾರತೀನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ
ವಿಚಾರಣೆ ವೇಳೆ ಇಬ್ಬರು ವಿದ್ಯಾರ್ಥಿಗಳು (Students) ಅನ್ನೋದು ಬೆಳಕಿಗೆ ಬಂದಿದೆ. ಇಬ್ಬರು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಬಂದಿಲ್ಲ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಇದನ್ನೂ ಓದಿ: JDS ಸಮಾವೇಶದಲ್ಲಿ ಉಳಿದಿದ್ದ ಆಹಾರ ಸೇವಿಸಿ 15 ಜಾನುವಾರು ಸಾವು
ತಡರಾತ್ರಿವರೆಗೂ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ಪ್ರಕರಣ (NCR Case) ದಾಖಲಾಗಿದೆ.
ಅಮಿತ್ ಶಾ ನೇತೃತ್ವದಲ್ಲಿ ಮೀಟಿಂಗ್
ಬೆಂಗಳೂರಿನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಏಂಬಿಎಸ್ವೈ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ B.L.ಸಂತೋಷ್ ಸೇರಿ ಪ್ರಮುಖರ ಜೊತೆ ಚರ್ಚೆ ನಡೆಸಿದರು.
ಮುಂದಿನ 1 ತಿಂಗಳು ಹೇಗೆಲ್ಲಾ ಪ್ರಚಾರ ನಡೆಸಬೇಕು. ಮೋದಿ ರೋಡ್ ಶೋ ಎಲ್ಲೆಲ್ಲಿ ನಡೆಸಿದ್ರೆ ಲಾಭ? ಕೇಂದ್ರ ಸಚಿವರು ರಾಜ್ಯದಲ್ಲಿ ಎಲ್ಲೆಲ್ಲಿ ಸಮಾವೇಶ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ನಡೆದಿದೆ.
ಅಲ್ಲದೇ ಮೀಸಲಾತಿ ಜಾರಿ, ಟಿಕೆಟ್ ಆಯ್ಕೆ, ಮತದಾರರ ಅಭಿಪ್ರಾಯದ ಬಗ್ಗೆಯೂ ಚರ್ಚೆ ನಡೆದಿದೆ. ಇನ್ನು ಇದೇ ವೇಳೆ ಬಿಜೆಪಿಯಲ್ಲಿ ಪರಸ್ಪರ ಮುನಿಸಿಕೊಂಡಿದ್ದವರನ್ನೂ ಒಟ್ಟಿಗೆ ಸೇರಿಸೋ ಕೆಲಸ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ