ಕುಳಿತು ಮಾತನಾಡಿ Mekedatu ವಿವಾದ ಬಗೆಹರಿಸಿಕೊಳ್ಳಿ; ಕರ್ನಾಟಕ-ತಮಿಳುನಾಡಿಗೆ ಕೇಂದ್ರ ಸಚಿವರ ಸಲಹೆ

ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಖಾಸಗಿ ಏಜೆನ್ಸಿ ಮೂಲಕ ಮಾಡಲಾಗುತ್ತಿದೆ. 5 ಲಕ್ಷ ಹಳ್ಳಿಗಳಲ್ಲಿ ವಾಟರ್ ಕಮಿಟಿ ನೇಮಿಸಲಾಗಿದೆ. ನೀರಿನ ಪ್ರಮಾಣ, ಶುದ್ದತೆ ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಲ್ಯಾಬ್ ನಿರ್ಮಿಸಲಾಗುವುದು ಎಂದರು ತಿಳಿಸಿದರು.

ಮೇಕೆದಾಟು

ಮೇಕೆದಾಟು

  • Share this:
ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು (Karnataka -Tamil Nadu) ಎರಡೂ ರಾಜ್ಯಗಳು ಕೂತು ಮಾತನಾಡಿ ಮೇಕೆದಾಟು ವಿವಾದವನ್ನು (Mekedatu Project) ಬಗೆಹರಿಸಿಕೊಳ್ಳಲಿ. ಎರಡೂ ರಾಜ್ಯಗಳೇ ಮಾತುಕತೆ ನಡೆಸಿದರೆ ಯೋಜನೆ ಆರಂಭವಾಗಲಿದೆ. ಈ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಿದ್ದವಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಬೆಂಗಳೂರಿನಲ್ಲಿ ಸಲಹೆ ನೀಡಿದರು. ನನಗೆ ಮೇಕೆದಾಟು ಯೋಜನೆ ಆಗಲಿ ಎಂಬ ಆಶಯವಿದೆ. ಆದರೆ ನ್ಯಾಯಾಲಯದಲ್ಲಿ (Court) ಪ್ರಕರಣ ಇರುವ ಕಾರಣ ಹೆಚ್ಚು ಮಾತನಾಡುವುದಿಲ್ಲ. ಎರಡೂ ರಾಜ್ಯಗಳೂ ಕುಳಿತು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವುದೇ ಈ ಪ್ರಕರಣದ ಅಂತ್ಯಕ್ಕೆ ದಾರಿ ಎಂದು ಅವರು ಸಲಹೆ ನೀಡಿದ್ದಾರೆ. 

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳ ನಡುವೆ ಕೂಡ ಇದೇ ರೀತಿ ಸಮಸ್ಯೆ ಇತ್ತು. ಆ ಎರಡೂ ರಾಜ್ಯಗಳ ನಡುವೆ ಕೆನ್ ಬೆತ್ವಾ ನದಿ ಜೋಡಣೆ ಸಮಸ್ಯೆ ಇತ್ತು  ಮಾತು ಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದವು. ಅದೇ ರೀತಿ ಮೇಕೆದಾಟು ವಿಚಾರದಲ್ಲೂ ಮಾತುಕತೆ ಮೂಲಕ ವಿವಾದವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಬಗೆಹರಿಸಿಕೊಳ್ಳಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಶಯ ವ್ಯಕ್ತಪಡಿಸಿದರು.

ಭಾರತದ ಕೊನೆ ವ್ಯಕ್ತಿಗೂ ಕೂಡ ಕುಡಿಯುವ ನೀರು ಸಿಗುವ ರೀತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇಡೀ ಯೋಜನೆಯಿಂದ ಅನುಭವ ಪಡೆದುಕೊಂಡಿದ್ದೇವೆ, ಜನತೆಯ ಯೋಜನೆಯಾಗಿದ್ದರೆ ಎಂತಹ ಗುರಿಯನ್ನಾದರೂ ಮುಟ್ಟಬಹುದು ಎಂದ ಅವು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಇದನ್ನೂ ಓದಿ: ಅಂತರರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: CM Basavaraja Bommai

ಮುಂದುವರೆದು ಮಾತನಾಡಿದ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಖಾಸಗಿ ಏಜೆನ್ಸಿ ಮೂಲಕ ಮಾಡಲಾಗುತ್ತಿದೆ. 5 ಲಕ್ಷ ಹಳ್ಳಿಗಳಲ್ಲಿ ವಾಟರ್ ಕಮಿಟಿ ನೇಮಿಸಲಾಗಿದೆ. ನೀರಿನ ಪ್ರಮಾಣ, ಶುದ್ದತೆ ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಲ್ಯಾಬ್ ನಿರ್ಮಿಸಲಾಗುವುದು ಎಂದರು ತಿಳಿಸಿದರು.

ಕರ್ನಾಟಕದ ಕೊಡುಗೆಯೂ ಕಡಿಮೆಯಿಲ್ಲ
ಅಪ್ಡೇಟ್ ಉಪಕರಣಗಳ ಮೂಲಕ 6 ತಿಂಗಳ ಅವಧಿಯ ನೀರಿನ ಶುದ್ದತೆಯನ್ನು ಪರಿಶೀಲಿಸಬಹುದು. 60 ಸಾವಿರ ಕೋಟಿಯನ್ನು ಕೇಂದ್ರ ಬಜೆಟ್​ನಲ್ಲಿ ಕುಡಿಯುವ ನೀರು ಮತ್ತು ಸ್ವಚ್ಚ ಭಾರತ್ ಯೋಜನೆಗಾಗಿ ಮೀಸಲಿಡಲಾಗಿದೆ ಎಂದರು.

ಕರ್ನಾಟಕ ಸರ್ಕಾರ ಕೂಡ ದೊಡ್ಡ ಮಟ್ಟದಲ್ಲಿ ಜಲಜೀವನ್ ಮಿಷನ್​ಗೆ ಕೊಡುಗೆ ನೀಡುತ್ತಿದೆ. ನಾನು ಎಲ್ಲಾ ರಾಜ್ಯದ ಸರ್ಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯೇ ಇಲ್ಲ
ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಹಣ ಮೀಸಲಿಟ್ಟಿದೆ ಅನ್ನೋ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮಹದಾಯಿ ವಿಚಾರದಲ್ಲೂ ಕೂಡ ಬೇರೆ ಬೇರೆ ರೀತಿಯ ಸಮಸ್ಯೆ ಇದೆ ಅದರ ಬಗ್ಗೆ ಕೂಡ ಚರ್ಚೆ ಮಾಡೋದಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Uttara Kannada: 160 ವರ್ಷಗಳ ಸೇತುವೆಗೆ ಬೇಕಿದೆ ಕಾಯಕಲ್ಪ: ಬಿರುಕು ಬಿಟ್ಟರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಪಾದಯಾತ್ರೆ ವಿಚಾರವಾಗಿಯೂ ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ನಾಯಕರ ಪಾದಯಾತ್ರೆಗೆ ಗರಂ ಆದರು. ಕಾಂಗ್ರೆಸ್ ಪಕ್ಷಕ್ಕೆ ಮೇಕೆದಾಟು ವಿಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಕಳೆದ 55 ವರ್ಷಗಳಿಂದ ಅಧಿಕಾರದಲ್ಲಿದ್ದಾಗ ಸಮಸ್ಯೆ ಬಗೆಹರಿಸೋ ಬಗ್ಗೆ ಯೋಚಿಸಿಲ್ಲ. ಅವರಿಂದಾಗಿಯೇ ಈ ರೀತಿಯ ಸಮಸ್ಯೆ ಸೃಷ್ಟಿಯಾಗಿದ್ದು ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
Published by:guruganesh bhat
First published: