ಮಂಡ್ಯ (ಡಿ.30): ವಿಧಾನಸಭೆ ಚುನಾವಣೆ (Assembly Election) ಹಿನ್ನೆಲೆ ಎಲ್ಲಾ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಹಳೇ ಮೈಸೂರು ಭಾಗದ ಮತಗಳ ಮೇಲೆ ಬಿಜೆಪಿ (BJP) ಕಣ್ಣು ಹಾಕಿದ್ದು, ಘಟಾನುಘಟಿಗಳೇ ಮತಬೇಟೆಗಿಳಿದಿದ್ದಾರೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಕ್ಕರೆ ನಾಡು ಮಂಡ್ಯದಲ್ಲಿ (Mandya) ರಣಕಹಳೆ ಮೊಳಗಿಸಿದ್ದಾರೆ. ಮೆಗಾ ಡೈರಿ ಉದ್ಘಾಟನೆ ಮಾಡಿದ ಅಮಿತ್ ಶಾ ಅವ್ರು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕೊಂಡಾಡಿದ್ದಾರೆ.
47 ಎಕರೆ ವಿಸ್ತೀರ್ಣದಲ್ಲಿ ಮೆಗಾ ಡೈರಿ
ಮೆಗಾ ಡೈರಿ 47 ಎಕರೆ ವಿಸ್ತೀರ್ಣದಲ್ಲಿದ್ದು, ಹಾಲು ಉತ್ಪಾದಕ ಘಟಕವನ್ನು 260.9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಂದು ದಿನಕ್ಕೆ 30 ಮೆಟ್ರಿಕ್ ಟನ್ ಹಾಲಿನ ಪೌಡರ್ ಉತ್ಪಾದನೆ ಮಾಡಲಾಗುತ್ತದೆ. 4 ಮೆಟ್ರಿಕ್ ಟನ್ ಕೋವಾ, 2 ಮೆಟ್ರಿಕ್ ಟನ್ ಪನೀರ್, 12 ಮೆಟ್ರಿಕ್ ಟನ್ ತುಪ್ಪ
10 ಮೆಟ್ರಿಕ್ ಟನ್ ಬೆಣ್ಣೆ, 10 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗ್ತಿದ್ದು,
ಮೆಗಾ ಡೈರಿಯಿಂದ ಉದ್ಘಾಟನೆಯಿಂದ 1 ವರ್ಷಕ್ಕೆ 6 ಕೋಟಿ ಹಣ ಉಳಿತಾಯವಾಗಲಿದೆ.
ಕರ್ನಾಟಕ ಸಹಕಾರ ಕ್ಷೇತ್ರದಲ್ಲಿ ಮುಂದಿದೆ
ಮೆಗಾ ಡೈರಿ ಉದ್ಘಾಟನೆ ಬಳಿಕ ಮಾತಾಡಿದ ಅಮಿತ್ ಶಾ, ಕೃಷಿ ಮತ್ತು ಸಹಕಾರ ಇಲಾಖೆ ಬೇರೆ ಬೇರೆಯಾಗಿರಬೇಕು ಎಂಬುದು ಸ್ವಾತಂತ್ರ್ಯ ಬಂದ ದಿನದಿಂದಲೂ ಜನರ ಬೇಡಿಕೆಯಾಗಿತ್ತು ಎಂದು ಹೇಳಿದ್ರು. ಅದು ನೆರವೇರಿದ್ರೆ ಇಂದು ಜನರ ಬದುಕೇ ಬೇರೆಯಾಗಿರ್ತಿತ್ತು. 260 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರೋ ಈ ಮೆಗಾ ಡೈರಿಯಲ್ಲಿ, ಸದ್ಯ 10 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಬಹುದಾಗಿದೆ. ಮುಂದೆ ಇದನ್ನ 14 ಲಕ್ಷ ಲೀಟರ್ ಗೆ ಹೆಚ್ವಳ ಮಾಡೋ ಸಾಮರ್ಥ್ಯ ಇದೆ. ದೇಶದಲ್ಲೇ ಕರ್ನಾಟಕ ರಾಜ್ಯ ಸಹಕಾರ ಕ್ಷೇತ್ರದಲ್ಲಿ ಮುಂದಿದೆ ಎಂದು ಹೇಳಿದ್ರು.
ರೈತರಿಗೆ ಅನ್ಯಾಯ ಆಗಲು ಬಿಡಲ್ಲ
ನಾನು ಮಂಡ್ಯ ಮೆಗಾ ಡೈರಿ ವೇದಿಕೆಯಿಂದ ಹೇಳ್ತಿದ್ದೇನೆ. ರೈತರಿಗೆ ಅನ್ಯಾಯ ಆಗಲು ಬಿಡಲ್ಲ. ದೇಶದಲ್ಲಿ ಕರ್ನಾಟಕ ಹೈನುಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹೆಚ್ಚು ರೈತರು ಇದರಲ್ಲಿ ತೊಡಗಿಕೊಂಡಿದ್ದಾರೆ.
16 ಜಿಲ್ಲೆಗಳಿಂದ 28 ಕೋಟಿ ರೂ ಹಣ 26- ಲಕ್ಷ ರೈತರಿಗೆ ಜಮೆ ಆಗ್ತಿದೆ.
1975ರಿಂದ ಇಲ್ಲಿಯವರೆಗೆ ಕರ್ನಾಟಕ ಡೈರಿ ಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದೆ. ಮಿಲ್ಕ್ ಫೆಡರೇಶನ್ ನಲ್ಲಿ ಮೊದಲು 4 ಕೋಟಿ ಟರ್ನೋವರ್ ಇತ್ತು. ಈಗ 25 ಕೋಟಿ ಟರ್ನೋವರ್ ಆಗ್ತಿದೆ. 36 ಲಕ್ಷ ರೈತರಿಗೆ ಬ್ಯಾಂಕ್ ಅಕೌಂಟ್ ಮೂಲಕ ಹಣ ತಲುಪಿಸಲಾಗ್ತಿದೆ. ಕರ್ನಾಟಕ ಒಳ್ಳೆಯ ಕೆಲಸ ಮಾಡ್ತಿದೆ ಎಂದು ಶಾ ಹೇಳಿದ್ದಾರೆ.
ಅಮೂಲ್- ನಂದಿನಿ ಒಟ್ಟಿಗೆ ಸೇರಿಸಬೇಕು
ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಕೆಲಸ ಮಾಡಬೇಕು.
ಇದರಿಂದ ಎಲ್ಲಾ ಹಳ್ಳಿಗಳಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡಬಹುದು.
ಎನ್ ಡಿಡಿ ಮೂಲಕ ಪ್ರತಿ ಪಂಚಾಯ್ತಿಯಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡಲಾಗಿದೆ. 2 ಲಕ್ಷ ಪ್ರೈಮರಿ ಡೈರಿ ನಿರ್ಮಾಣ ಮಾಡುವ ಮೂಲಕ ಹಾಲನ್ನ ಎಕ್ಸ್ ಪೋರ್ಟ್ ಮಾಡಬೇಕು ಎಂದು ಗುಜರಾತ್ ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಸೇರಿ ಮತ್ತಷ್ಟು ಉತ್ಪಾದನೆ ಮಾಡಬೇಕು ಎಂದು ಹೇಳಿದ್ರು.
ಇದನ್ನೂ ಓದಿ: Amit Sha: ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು; ಮಂಡ್ಯದಲ್ಲಿ ಮೊಳಗಲಿದೆ ಚುನಾವಣಾ ರಣಕಹಳೆ!
ನಿಮಗೆ ಬೇಕಾದ ಎಲ್ಲಾ ಪ್ರೋತ್ಸಾಹವನ್ನ ಸಹಕಾರ ಇಲಾಖೆ ನೀಡುತ್ತೇನೆ. ನಾನು ಬೊಮ್ಮಾಯಿ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸ್ತಿನಿ. ರೈತರಿಗೆ ನೇರವಾಗಿ ಹಣ ಸಂದಾಯವಾಗ್ತಿದೆ. ಕ್ಷೀರ ಭಾಗ್ಯ ಯೋಜನೆಯಲ್ಲಿ 52 ಲಕ್ಷ ಲೀ. ಹಾಲನ್ನು ಅಂಗನವಾಡಿ ಕೇಂದ್ರಗಳಿಗೆ ನೀಡಲಾಗ್ತಿದೆ. ಮಂಡ್ಯ ಮೆಗಾ ಡೈರಿಯ ಅಧ್ಯಕ್ಷರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಶಾ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ