HOME » NEWS » State » UNION HOME MINISTER AMIT SHAH HAPPY WITH VEVEKADEEPINI PROGRAM WHICH HELD AT BANGALORE LG

ಮಕ್ಕಳ ಶ್ಲೋಕ ಉಚ್ಛಾರಣೆಯಿಂದ ಮನಸು ಹಗುರವಾಯಿತು; ವಿವೇಕದೀಪಿನಿಯಲ್ಲಿ ಅಮಿತ್​ ಶಾ ಹರ್ಷ

ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲೀಕಾವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಈ ಶ್ಲೋಕಗಳ ಒಳಾರ್ಥ ತಿಳಿಯಬೇಕು. ಅದರಿಂದ ನಾವು ಎಂದೂ ಕೆಟ್ಟ ಹಾದಿ ತುಳಿಯುವುದಿಲ್ಲ. ಜೀವನದ ಉದ್ದೇಶ ಸಾರ್ಥಕವಾಗುತ್ತದೆ. ಲೋಕ ಕಲ್ಯಾಣ ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು 23 ಭಾಷೆಗಳಿಗೆ ಭಾಷಾಂತರಿಸಿ ರಾಷ್ಟ್ರದ ಮೂಲೆ ಮೂಲೆಗಳಿಗೆ ವಿತರಿಸುವ ಕೆಲಸ ಮಾಡಿದ್ದಾರೆ. ನಾನೂ ಸಹ ಇದರ ಗುಜರಾತಿ ಅನುವಾದವನ್ನು ಓದುತ್ತಿದ್ದೇನೆ.

news18-kannada
Updated:January 18, 2020, 3:54 PM IST
ಮಕ್ಕಳ ಶ್ಲೋಕ ಉಚ್ಛಾರಣೆಯಿಂದ ಮನಸು ಹಗುರವಾಯಿತು; ವಿವೇಕದೀಪಿನಿಯಲ್ಲಿ ಅಮಿತ್​ ಶಾ ಹರ್ಷ
ಅಮಿತ್ ಶಾ
  • Share this:
ಬೆಂಗಳೂರು(ಜ.18): ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ  ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಶ್ರೀಶ್ರೀ ಶಂಕರಭಾರತೀ ಸ್ವಾಮೀಜಿಗಳು ಸ್ವಾಗತ ಕೋರಿದರು. ಅಮಿತ್​  ಶಾ ಅವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತಿತರರು ಜೊತೆಯಾಗಿದ್ದರು. ಶಾ ವೇದಿಕೆ ಮೇಲೆ ಬಂದ ಕೂಡಲೇ ಸಾವಿರಾರು ವಿದ್ಯಾರ್ಥಿಗಳು ಸಾಮೂಹಿಕವಾಗಿ ವಿವೇಕದೀಪಿನಿ ಶ್ಲೋಕ ಪಠಣ ಮಾಡಿದರು. ಶ್ಲೋಕದ ಮೂಲಕವೇ ಅಮಿತ್​ ಶಾ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು. ಬಳಿಕ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಆರಂಭಿಸಿದರು. ಮಕ್ಕಳಿಗೆ ವೇದ-ಉಪನಿಷತ್ತುಗಳ ಪ್ರಾಮುಖ್ಯತೆಯನ್ನು ಶಾ ಮನವರಿಕೆ ಮಾಡಿಕೊಟ್ಟರು.

"ಒಂದೇ ಸ್ಥಳದಲ್ಲಿ ಒಂದೇ ಸ್ವರದಲ್ಲಿ ಇಷ್ಟೊಂದು ಮಕ್ಕಳು ಶ್ಲೋಕ ಉಚ್ಛಾರಣೆ ಮಾಡುವುದನ್ನು ಕೇಳಿದರೆ ಮನಸ್ಸು ತುಂಬಿ ಬರುತ್ತದೆ‌. ಹೃದಯ ಸ್ವಚ್ಛವಾಗುತ್ತದೆ. ಪವಿತ್ರ ವಾತಾವರಣ ನಿರ್ಮಾಣವಾಗಿದೆ. ಇಂತಹ ಅನನ್ಯ ಕಾರ್ಯ ನಿರ್ವಹಿಸಿದ ವೇದಾಂತಭಾರತಿ ಸಂಸ್ಥೆಗೆ ನನ್ನ  ನಮನಗಳು," ಎಂದರು.

"ವೇದ ಉಪನಿಷತ್ತು ಮಕ್ಕಳ ಬಾಳಿಗೆ ದೀಪವಾಗಿದೆ. ಶಿಕ್ಷಣದ ಜೊತೆ ವೇದ ಉಪನಿಷತ್ತು ಅಗತ್ಯ. ವೇದಾಂತ ಭಾರತಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವೇದಾಂತ ಭಾರತಿಯವರಿಗೆ ನನ್ನ ನಮನಗಳು. ನವ ಭಾರತ ಕಟ್ಟಲು ವೇದಾಂತ ಭಾರತಿ ಶ್ರಮಿಸುತ್ತಿದೆ. ರತ್ನಮಾಲಿಕೆ ಮಕ್ಕಳಿಗೆಲ್ಲಾ ಪ್ರೇರಣೆಯಾಗಿದೆ. ಜೀವನದಲ್ಲಿ ಅಡ್ಡದಾರಿ ಹಿಡಿಯದಂತೆ ತಡೆಯುತ್ತದೆ.  ವೇದಾಂತ ಭಾರತಿ ಬಗ್ಗೆ ಪ್ರಧಾನಿಗೂ ವಿಶ್ವಾಸವಿದೆ. ವೇದಾಂತ ಭಾರತ ಸಂಸ್ಥೆ ಜೊತೆ ನಾವಿದ್ದೇವೆ. ಗುಜರಾತಿ ಭಾಷೆಗೆ ರತ್ನಮಾಲಿಕೆ ಅನುವಾದವಾಗಿದೆ," ಎಂದರು.

ಅಮಿತ್​ ಶಾರನ್ನು ರಾಜ್ಯದಿಂದ ಗಡಿಪಾರು ಮಾಡುವ ಕಾಲ ಬರುತ್ತೆ: ಸಂಸದ ಬಿ.ಕೆ. ಹರಿಪ್ರಸಾದ್​ ಎಚ್ಚರಿಕೆ

"ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲೀಕಾವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಈ ಶ್ಲೋಕಗಳ ಒಳಾರ್ಥ ತಿಳಿಯಬೇಕು. ಅದರಿಂದ ನಾವು ಎಂದೂ ಕೆಟ್ಟ ಹಾದಿ ತುಳಿಯುವುದಿಲ್ಲ. ಜೀವನದ ಉದ್ದೇಶ ಸಾರ್ಥಕವಾಗುತ್ತದೆ. ಲೋಕ ಕಲ್ಯಾಣ ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು 23 ಭಾಷೆಗಳಿಗೆ ಭಾಷಾಂತರಿಸಿ ರಾಷ್ಟ್ರದ ಮೂಲೆ ಮೂಲೆಗಳಿಗೆ ವಿತರಿಸುವ ಕೆಲಸ ಮಾಡಿದ್ದಾರೆ. ನಾನೂ ಸಹ ಇದರ ಗುಜರಾತಿ ಅನುವಾದವನ್ನು ಓದುತ್ತಿದ್ದೇನೆ. ಆದಿ ಶಂಕರಾಚಾರ್ಯರು ಅತ್ಯಂತ ಕಿರಿಯ ವಯಸ್ಸಿನಲ್ಲೇ ಭಾರತ ಪರ್ಯಟನೆ ಮಾಡಿದ್ದಾರೆ.  ಲೋಕಕಲ್ಯಾಣ ಮಾಡಿದ್ದಾರೆ‌. ಭಕ್ತಿ ಮಾರ್ಗದ ಮೂಲಕವೂ ಮುಕ್ತಿ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ," ಎಂದು ಗುಣಗಾನ ಮಾಡಿದರು.

ಇದೇ ವೇಳೆ ಸಿಎಂ ಬಿಎಸ್​ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು  ಹೊಗಳಿ ಮಾತನಾಡಿದರು. "ಸರ್ದಾರ್ ವಲ್ಲಭಬಾಯ್ ಪಟೇಲರ ನಂತರ ನಾವು ಕಂಡ ಸಮರ್ಥ ಗೃಹ ಸಚಿವ ಅಮಿತ್ ಶಾ. ದೇಶದ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದಿದ್ದಾರೆ‌. ಕಾಶ್ಮೀರ ಸಮಸ್ಯೆ ಬಗೆಹರಿಸಿದ್ದಾರೆ," ಎಂದು ಸ್ಮರಿಸಿದರು.

ಮನಸ್ಸಿಗೆ ಹಿತ,ಬುದ್ದಿಗೆ ತೀಕ್ಷ್ಣತೆ ನೀಡುವುದು ವಿವೇಕದೀಪಿನಿ. ಶಾಲೆಗಳಲ್ಲಿ ವಿವೇಕದೀಪಿನಿ ಬೋಧಿಸಲು ಸರ್ಕಾರದ ಅನುಮತಿ ಬೇಕಿದೆ. ವಿವೇಕದೀಪಿನಿಯಿಂದ ಪ್ರಭಾವಿತರಾಗಿದ್ದಾರೆ. ಭಾರತೀಯ ಸಂಸ್ಕೃತಿ ಪ್ರಾಚೀನವಾದದ್ದು.  ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದದ್ದು. ಜಗತ್ತೇ ಒಂದು ಕುಟುಂಬ ಅನ್ನೋ ಪ್ರತಿಪಾದನೆ ಇದೆ. ವಿವೇಕದೀಪಿನಿಯಲ್ಲಿನ ಅಂಶಗಳು ಸರ್ವಕಾಲಿಕ. ಶಂಕರಾಚಾರ್ಯರು ದೇಶದೆಲ್ಲೆಡೆ ಸಂಚರಿಸಿದ್ದಾರೆ. ಶ್ರೀಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆಯ ಪ್ರಶ್ನೆಗಳು ಹಾಗು ಅವರೇ ನೀಡಿರುವ ಉತ್ತರಗಳು ಪ್ರಸ್ತುತ ಕಾಲಕ್ಕೂ ಅನ್ವಯವಾಗುತ್ತದೆ. ಶಂಕರಾಚಾರ್ಯ ವಿರಚಿತ ಸೌಂದರ್ಯ‌ಲಹರಿಯ 11 ಶ್ಲೋಕಗಳ ಸಾಮೂಹಿಕ ಪಠಣ ಮಾಡಬೇಕು ಎಂದರು.ಕೇರಳಿಗರು ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಗೆಲ್ಲಿಸಿದರೆ ಮೋದಿಗೇ ಲಾಭ: ರಾಮಚಂದ್ರ ಗುಹಾ

ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ  ರಾಜ್ಯ ಬಿಜೆಪಿ ಪ್ರಮುಖರು, ಸಚಿವರು, ಸಂಸದರು ಶಾಸಕರು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿಸೂರ್ಯ, ಪಿ.ಸಿ.ಮೋಹನ್, ಶಾಸಕರಾದ ಎಸ್.ಟಿ.ಸೋಮಶೇಖರ್,ಎಸ್.ಆರ್.ವಿಶ್ವನಾಥ್ ಭಾಗಿಯಾಗಿದ್ದರು.

 

 

 
First published: January 18, 2020, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories