HOME » NEWS » State » UNION GOVT REQUESTS TWITTER TO BLOCK 2015 COMMUNAL TWEET OF MP TEJASVI SURYA LINKING TERRORISM TO ISLAM RMD

ತೇಜಸ್ವಿ ಸೂರ್ಯ ಮಾಡಿದ್ದ ಕೋಮುವಾದದ ಟ್ವೀಟ್ ಬ್ಲಾಕ್​ ಮಾಡುವಂತೆ ಟ್ವಿಟ್ಟರ್ ಬಳಿ ಮನವಿ ಮಾಡಿದ ಕೇಂದ್ರ

ಈ ಟ್ವೀಟ್​ ಡಿಲೀಟ್​ ಮಾಡುವಂತೆ ಸಾಕಷ್ಟು ಜನರು ಆಗ್ರಹಿಸಿದ್ದರು. ಆದಾಗ್ಯೂ ತೇಜಸ್ವಿ ಸೂರ್ಯ ಅವರು ಟ್ವೀಟ್​ ಅಳಿಸಿ ಹಾಕಿರಲಿಲ್ಲ. ಆದರೆ ಈಗ ಈ ಪೋಸ್ಟ್​ ಬ್ಲಾಕ್​ ಮಾಡುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಇಲಾಖೆ ಟ್ವಿಟ್ಟರ್ ಬಳಿ ಕೋರಿದೆ ಎನ್ನಲಾಗಿದೆ.

news18-kannada
Updated:May 9, 2020, 11:09 AM IST
ತೇಜಸ್ವಿ ಸೂರ್ಯ ಮಾಡಿದ್ದ ಕೋಮುವಾದದ ಟ್ವೀಟ್ ಬ್ಲಾಕ್​ ಮಾಡುವಂತೆ ಟ್ವಿಟ್ಟರ್ ಬಳಿ ಮನವಿ ಮಾಡಿದ ಕೇಂದ್ರ
ತೇಜಸ್ವಿ ಸೂರ್ಯ
  • Share this:
ಬೆಂಗಳೂರು (ಮೇ 9): ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿವೆ. ಅವುಗಳ ಸ್ವಚ್ಛತಾ ಕಾರ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಮುಂದಾಗಿದೆ. 2015ರಲ್ಲಿ ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್​ ಸೇರಿ ಒಟ್ಟು 121 ಪೋಸ್ಟ್​​ಗಳನ್ನು ಅಳಿಸಿ ಹಾಕುವಂತೆ ಟ್ವಿಟ್ಟರ್​ ಬಳಿ ಕೇಂದ್ರ ಮನವಿ ಮಾಡಿದೆ.

2015ರಲ್ಲಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ತೇಜಸ್ವಿ ಸೂರ್ಯ ಪೋಸ್ಟ್​ ಒಂದನ್ನು ಮಾಡಿದ್ದರು. ಅದರಲ್ಲಿ, “ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ, ಭಯೋತ್ಪಾದಕರಿಗೆ ಧರ್ಮ ಇದ್ದೇ ಇದೆ. ಬಹುತೇಕ ಪ್ರಕರಣಗಳಲ್ಲಿ ಅವರು ಮುಸ್ಲೀಮರೇ ಆಗಿದ್ದಾರೆ,” ಎಂದು ಹೇಳಿದ್ದರು. ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಈ ಟ್ವೀಟ್​ ಡಿಲೀಟ್​ ಮಾಡುವಂತೆ ಸಾಕಷ್ಟು ಜನರು ಆಗ್ರಹಿಸಿದ್ದರು. ಆದಾಗ್ಯೂ ತೇಜಸ್ವಿ ಸೂರ್ಯ ಅವರು ಟ್ವೀಟ್​ ಅಳಿಸಿ ಹಾಕಿರಲಿಲ್ಲ. ಆದರೆ ಈಗ ಈ ಪೋಸ್ಟ್​ ಬ್ಲಾಕ್​ ಮಾಡುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಇಲಾಖೆ ಟ್ವಿಟ್ಟರ್ ಬಳಿ ಕೋರಿದೆ ಎನ್ನಲಾಗಿದೆ.

ಇದನ್ನೂ ಓದಿ: ಅರಬ್ ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆ; ತೇಜಸ್ವಿ ಸೂರ್ಯ ಹಳೇ ಟ್ವೀಟ್​ಗೆ ಛೀಮಾರಿ

2015ರಲ್ಲಿ ಮತ್ತೊಂದು ಟ್ವೀಟ್​ ಮಾಡಿದ್ದ ತೇಜಸ್ವಿ ಸೂರ್ಯ, 'ಅರಬ್ ರಾಷ್ಟ್ರಗಳ ಶೇ. 95ರಷ್ಟು ಮಹಿಳೆಯರು ನೂರಾರು ವರ್ಷಗಳಿಂದ ಲೈಂಗಿಕವಾಗಿ ಉದ್ರೇಕಗೊಳ್ಳುವುದನ್ನೇ ಮರೆತಿದ್ದಾರೆ. ಅಲ್ಲಿನ ಪ್ರತಿಯೊಬ್ಬ ತಾಯಿಯೂ ಯಾಂತ್ರಿಕವಾದ ಲೈಂಗಿಕ ಕ್ರಿಯೆಯಿಂದ ಮಕ್ಕಳನ್ನು ಹೆತ್ತಿದ್ದಾಳೆಯೇ ವಿನಃ ಪ್ರೀತಿಯಿಂದಲ್ಲ' ಎಂದಿದ್ದರು.​ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ನಂತರ ಈ ಟ್​ವೀಟ್​ ಅನ್ನು ತೆಗೆದು ಹಾಕಲಾಗಿತ್ತು.
First published: May 9, 2020, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories