ಕರ್ನಾಟಕಕ್ಕೆ 577 ಕೋ. ರೂ. ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ 

‘ಅಮ್ಫಾನ್’ ಚಂಡಮಾರುತದಿಂದ ಕಂಗೆಟ್ಟಿದ್ದ ಪಶ್ಚಿಮ ಬಂಗಾಳಕ್ಕೆ 2,707 ಕೋಟಿ ರೂಪಾಯಿ ಮತ್ತು ಒಡಿಶಾಗೆ 128 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕೇಂದ್ರದ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿದೆ

ನರೇಂದ್ರ ಮೋದಿ.

ನರೇಂದ್ರ ಮೋದಿ.

  • Share this:
ನವದೆಹಲಿ,‌ (ನ. 13): ರಾಜ್ಯದ 13 ಜಿಲ್ಲೆಗಳಲ್ಲಿ ಈ‌ ವರ್ಷ ಅತಿವೃಷ್ಠಿಯಾಗಿ, ಪ್ರವಾಹ ಬಂದು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಬೆಳೆ ನಷ್ಟ ಸಂಭವಿಸಿತ್ತು. ಅದಕ್ಕೆ ಈಗ ಕೇಂದ್ರ ಸರ್ಕಾರ 577 ಕೋಟಿ ರೂಪಾಯಿ ಹೆಚ್ಚುವರಿ ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕವೂ ಸೇರಿದಂತೆ 6 ರಾಜ್ಯಗಳಿಗೆ 4,381,88 ಕೋಟಿ ರೂಪಾಯಿ ಹೆಚ್ಚುವರಿ ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.‌ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ನಿಧಿಯಿಂದ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕವಲ್ಲದೆ ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಪ್ರಸಕ್ತ ವರ್ಷ ಸಂಭವಿಸಿದ ಪ್ರವಾಹ, ಭೂಕುಸಿತ, 'ಅಮ್ಫಾನ್' ಮತ್ತು 'ನಿಸರ್ಗಾ' ಚಂಡಮಾರುತಗಳಿಗೆ ಈ ಹೆಚ್ಚುವರಿ ಪರಿಹಾರ ನಿಧಿ ಬಿಡುಗಡೆ ಮಾಡಲಾಗುತ್ತದೆ.

ನೈರುತ್ಯ ಮಾನ್ಸೂನ್ ಸಮಯದಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 577 ಕೋಟಿ ರೂಪಾಯಿ ಹೆಚ್ಚುವರಿ ಪ್ರವಾಹ ಪರಿಹಾರ ನಿಧಿ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

‘ಅಮ್ಫಾನ್’ ಚಂಡಮಾರುತದಿಂದ ಕಂಗೆಟ್ಟಿದ್ದ ಪಶ್ಚಿಮ ಬಂಗಾಳಕ್ಕೆ 2,707 ಕೋಟಿ ರೂಪಾಯಿಮತ್ತು ಒಡಿಶಾಗೆ 128 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕೇಂದ್ರದ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿದೆ. 'ನಿಸರ್ಗಾ’ ಚಂಡಮಾರುತಕ್ಕೆ ತುತ್ತಾಗಿದ್ದ ಮಹಾರಾಷ್ಟ್ರಕ್ಕೆ 268 ಕೋಟಿ ರೂಪಾಯಿ ಬಿಡುಗಡೆ ಮಾಡುವುದಕ್ಕೂ ಒಪ್ಪಿಗೆ ನೀಡಿದೆ. ಇದಲ್ಲದೆ ಮಧ್ಯಪ್ರದೇಶಕ್ಕೆ 611 ಕೋಟಿ ರೂಪಾಯಿ ಮತ್ತು ಸಿಕ್ಕಿಂಗೆ 87 ಕೋಟಿ ರೂಪಾಯಿ ನೀಡುವುದಕ್ಕೂ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದೆ.

ಬಸವಕಲ್ಯಾಣದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ; ಸಚಿವ ಎಸ್​.ಟಿ. ಸೋಮಶೇಖರ್ ಸ್ಪಷ್ಟನೆ

‘ಅಮ್ಫಾನ್’ ಚಂಡಮಾರುತದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ 2020ರ ಮೇ 22ರಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಪೀಡಿತ ರಾಜ್ಯಗಳಿಗೆ ಭೇಟಿ ನೀಡಿದ್ದರು. ಅಂದು ತಕ್ಷಣದ ಪರಿಹಾರ ಕಾರ್ಯಗಳಿಗಾಗಿ  ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ರೂಪಾಯಿ ಹಾಗೂ ಒರಿಸ್ಸಾಗೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಈಗ ಹೆಚ್ಚುವರಿ ಪರಿಹಾರ ನೀಡಲಾಗುತ್ತಿದೆ.

ಎಲ್ಲಾ ಆರು ರಾಜ್ಯಗಳಲ್ಲಿ ಪ್ರವಾಹ, ಅತಿವೃಷ್ಠಿ, ಭೂಕುಸಿತ, ಚಂಡಮಾರುತ ಕಂಡುಬಂದಾಗ ತಕ್ಷಣವೇ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಗೆ ತನ್ನ ತಂಡವನ್ನು ಕಳುಹಿಸಿಕೊಟ್ಟಿತ್ತು. ಜನ, ಜಾನುವಾರಗಳ ಸಾವು, ಆಸ್ತಿ ಮತ್ತು ಬೆಳೆ ನಷ್ಟದ ಬಗ್ಗೆ ಅಧ್ಯಯನ ತಂಡದಿಂದ ವರದಿ ತರಿಸಿಕೊಂಡಿತ್ತು. ರಾಜ್ಯ ಸರ್ಕಾರಗಳು ವರದಿ ನೀಡಿದ್ದವು. ಎಲ್ಲವುಗಳನ್ನು ಪರಿಗಣಿಸಿ, ವಿಪತ್ತು ನಿರ್ವಹಣಾ ನಿಧಿ ಬಳಕೆಯ ಮಾರ್ಗಸೂಚಿಗಳ ಅಡಿ ಹೆಚ್ಚುವರಿ ಪರಿಹಾರ ನಿಧಿ ಬಿಡುಗಡೆ ಮಾಡಲು ಕೇಂದ್ರ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ.

2020-21ರ ಆರ್ಥಿಕ ವರ್ಷದಲ್ಲಿ ಈವರೆಗೆ ಕೇಂದ್ರ ಸರ್ಕಾರವು ಎಸ್ಡಿಆರ್ಎಫ್ನಿಂದ 28 ರಾಜ್ಯಗಳಿಗೆ 15,524.43 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
Published by:Latha CG
First published: