• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಳಗಾವಿ-ಧಾರವಾಡ ರೈಲು ಮಾರ್ಗದ ಯೋಜನಾ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ; ಸಚಿವ ಸುರೇಶ ಅಂಗಡಿ

ಬೆಳಗಾವಿ-ಧಾರವಾಡ ರೈಲು ಮಾರ್ಗದ ಯೋಜನಾ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ; ಸಚಿವ ಸುರೇಶ ಅಂಗಡಿ

ಸಚಿವ ಸುರೇಶ್ ಅಂಗಡಿ

ಸಚಿವ ಸುರೇಶ್ ಅಂಗಡಿ

927.40 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಅಸ್ತು ಎಂದಿದ್ದು, ಭೂಸ್ವಾಧೀನ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭವಾಗಲಿದೆ. ಇದಕ್ಕಾಗಿ ಅಧಿಕಾರಿಗಳ ಸಭೆಯಲ್ಲಿ ರೈತರ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಮಹತ್ವದ ಚರ್ಚೆ ನಡೆಯಬೇಕಿದೆ.

  • Share this:

ಬೆಳಗಾವಿ(ಸೆಪ್ಟೆಂಬರ್ 8): ಉತ್ತರ ಕರ್ನಾಟಕದ ಬಹುದಿನಗಳ ಕನಸಿನ ಯೋಜನೆ ಇದೀಗ ಸಾಕಾರಗೊಳ್ಳುವ ಕಾಲ ಬಂದಿದೆ. ಬೆಳಗಾವಿ- ಧಾರವಾಡ ನಡುವಿನ ರೈಲು ಮಾರ್ಗದ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ಹೇಳಿದರು. ಸದ್ಯ ಬೆಳಗಾವಿಯಿಂದ ಧಾರವಾಡಕ್ಕೆ ರೈಲು ಮಾರ್ಗದಿಂದ ಹೋಗುವುದು ದೂರದ ಪ್ರಯಾಣವಾಗಿದೆ. ಬೆಳಗಾವಿಯಿಂದ ಖಾನಾಪುರ, ಲೋಂಡಾ ಮಾರ್ಗವಾಗಿ ಧಾರವಾಡಕ್ಕೆ ಹೋಗಬೇಕು. ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡಕ್ಕೆ ರೈಲು ಸಂಪರ್ಕ ಕಲ್ಪಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಹಿಂದೆ ಅನೇಕ ಸರ್ವೆಗಳು ನಡೆದಿದ್ದವು. ಆದ ಯಾವುದೇ ಪ್ರಯೋಜವಾಗಿರಲಿಲ್ಲ. ಇದೀಗ ಸಚಿವ ಸುರೇಶ ಅಂಗಡಿ ಯೋಜನೆ ಜಾರಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ.


ಸದ್ಯದ ಬೆಳಗಾವಿ- ಧಾರವಾಡ ರೈಲು ಮಾರ್ಗಕ್ಕೆ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 73 ಕಿ.ಮೀ ಉದ್ದದ ಯೋಜನಾ ವರದಿಗೆ ಹಸಿರು ನಿಶಾನೆ ತೋರಿಸಿದ್ದು, ಈ ಬಗ್ಗೆ ಲೋಕಸಭಾ ಅಧಿವೇಶನ ಮುಗಿದ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.


ನಿಮ್ಮ ಕಣ್ಣಿನ ಆರೋಗ್ಯ ಉತ್ತಮಗೊಳ್ಳಬೇಕೇ? ಹಾಗಿದ್ರೆ ಹೀಗೆ ಮಾಡಿ


927.40 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಅಸ್ತು ಎಂದಿದ್ದು, ಭೂಸ್ವಾಧೀನ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭವಾಗಲಿದೆ. ಇದಕ್ಕಾಗಿ ಅಧಿಕಾರಿಗಳ ಸಭೆಯಲ್ಲಿ ರೈತರ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಮಹತ್ವದ ಚರ್ಚೆ ನಡೆಯಬೇಕಿದೆ. ಯೋಜನೆಯಿಂದ ಬೆಳಗಾವಿ- ಧಾರವಾಡ ಭಾಗಕ್ಕೆ ಹೆಚ್ಚಿನ ಅನಕೂಲವಾಗಲಿದ್ದು, ವ್ಯಾಪಾರ, ವಹಿವಾಟು ನಡೆಸಲು ಹೆಚ್ಚಿನ ಅನುಕೂಲವಾಗಲಿದೆ.


ಬೆಳಗಾವಿ- ಧಾರವಾಡ ನಡುವೆ ಒಟ್ಟು 11 ರೈಲು ನಿಲ್ದಾಣಗಳು ಬರಲಿವೆ. ಬೆಳಗಾವಿ, ದೇಸೂರು, ಕೆ ಕೆ ಕೊಪ್ಪ, ಹಿರೇಬಾಗೇವಾಡಿ, ಎಂ ಕೆ ಹುಬ್ಬಳ್ಳಿ, ಹುಲಿಕಟ್ಟಿ, ಕಿತ್ತೂರು, ತೇಗೂರು, ಮಮ್ಮಿಗುಟ್ಟಿ, ಕ್ಯಾರಕೊಪ್ಪಯಿಂದ ಧಾರವಾಡಕ್ಕೆ ತಲುಪಿದೆ. ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾಗುವ ಭೂಮಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡಲಿದೆ.


ಈ ಯೋಜನೆಯಿಂದ ಕೇವಲ ಬೆಳಗಾವಿ- ಧಾರವಾಡ ಅಷ್ಟೇ ಅಲ್ಲ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಸಂಪರ್ಕ ವ್ಯವಸ್ಥೆ ಸುಧಾರಣೆಯಾಗಲಿದೆ. ಇದರಿಂದ ಎರಡು ರಾಜ್ಯಗಳಿಗೆ ಅನೇಕ ರೀತಿಯಲ್ಲಿ ಉಪಯೋಗವಾಗಲಿದೆ. ಇನ್ನೂ ಯೋಜನೆಗೆ ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಫಿಯೂಶ್ ಗೋಯಲ್ ಗೆ ಸಚಿವ ಸುರೇಶ ಅಂಗಡಿ ಧನ್ಯವಾದ ಹೇಳಿದ್ದಾರೆ.

First published: