• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ; ರಾಜ್ಯದಿಂದ ಇಬ್ಬರು ಸಂಸದರಿಗೆ ಮಂತ್ರಿ ಗಿರಿ?

ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ; ರಾಜ್ಯದಿಂದ ಇಬ್ಬರು ಸಂಸದರಿಗೆ ಮಂತ್ರಿ ಗಿರಿ?

ಸಿಎಂ ಬಿಎಸ್​ ಯಡಿಯೂರಪ್ಪ-ಪ್ರಧಾನಿ ಮೋದಿ

ಸಿಎಂ ಬಿಎಸ್​ ಯಡಿಯೂರಪ್ಪ-ಪ್ರಧಾನಿ ಮೋದಿ

ಇನ್ನೆರಡು ದಿನಗಳಲ್ಲಿ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಜ್ಯೋತಿರಾಧಿತ್ಯ ಸಿಂಧ್ಯ, ಸರಬಾನಂದ ಸೋನುವಾಲಾ, ಸುಶೀಲ್ ಮೋದಿ ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ.

  • Share this:

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಂದೆರಡು ದಿನದಲ್ಲೇ ಪುನಾರಚನೆ ಆಗಲಿದೆ. ರಾಜ್ಯದ ಇಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಾಧ್ಯತೆ ಇದೆ. ರಾಜ್ಯಕ್ಕೆ ಯಾವಾಗಲೂ 4 ಸಚಿವ ಸ್ಥಾನಗಳು ಸಿಗುತ್ತಿದ್ದವು. ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿ ಡಿ.ವಿ. ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಶಿ ಮಾತ್ರ ಇದ್ದಾರೆ. ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಸಾವಿನಿಂದ ಒಂದು ಸ್ಥಾನ ಖಾಲಿಯಾಗಿದೆ. ಹೀಗಾಗಿ ರಾಜ್ಯದ ಇಬ್ಬರು ಸಂಸದರಿಗೆ ರಾಜ್ಯ ಖಾತೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.


ಸುರೇಶ್ ಅಂಗಡಿ ಅವರಿಂದ ತೆರವಾದ ಸಚಿವ ಸ್ಥಾನಕ್ಕೆ ಮತ್ತೊಬ್ಬ ಲಿಂಗಾಯತ ಸಂಸದನ ಆಯ್ಕೆ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಸಂಸದರಾದ ಶಿವಕುಮಾರ್ ಉದಾಸಿ ಅಥವಾ ಬಿ.ವೈ. ರಾಘವೇಂದ್ರ ನಡುವೆ ಪೈಪೋಟಿ ಇದೆ. ಒಂದು ವೇಳೆ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುವುದಾದರೆ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಮತ್ತೊಂದು ಸ್ಥಾನಕ್ಕೆ ಎಸ್ಸಿ ಅಥಾವ ಓಬಿಸಿಗೆ ನೀಡುವ ಅಂದಾಜು ಮಾಡಲಾಗಿದೆ. ಎಸ್ಸಿ ಸಮುದಾಯದಲ್ಲಿ ಉಮೇಶ್ ಜಾಧವ್ ಅವರಿಗೆ ಅವಕಾಶ ಸಿಗುವ ಸಂಭವ ಇದೆ. ಓಬಿಸಿ ಕೋಟಾದಲ್ಲಿ ಪಿ.ಸಿ. ಮೋಹನ್ ಹೆಸರು ಚರ್ಚೆ ಆಗುತ್ತಿದೆ.


ಸುದೀರ್ಘವಾಗಿ ಕುಟುಂಬದ ಜೊತೆ ಭವಿಷ್ಯದ ರಾಜಕೀಯ ಆಗುಹೋಗುಗಳ ಬಗ್ಗೆ ಸಿಎಂ ಬಿಎಸ್​​ವೈ ಮುಕ್ತವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಚರ್ಚೆಯ ಬೆನ್ನಲ್ಲೇ ಬಿ ವೈ ವಿಜಯೇಂದ್ರ ಮೂರು ದಿನಗಳ ಹಿಂದೆ  ದೆಹಲಿಗೆ ತೆರಳಿರುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಕೆಲಸದ ಮೇಲೆ ದೆಹಲಿ ಭೇಟಿ ಎ‌ನ್ನುತ್ತಿರುವ ವಿಜಯೇಂದ್ರ, ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಅಣ್ಣ ರಾಘವೇಂದ್ರಗೆ ಸಚಿವ ಸ್ಥಾನ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲು ವಿಜಯೇಂದ್ರ ದೆಹಲಿಗೆ ಆಗಮಿಸಿದ್ದರು ಎನ್ನಲಾಗುತ್ತಿದೆ.


ಇನ್ನೆರಡು ದಿನಗಳಲ್ಲಿ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಜ್ಯೋತಿರಾಧಿತ್ಯ ಸಿಂಧ್ಯ, ಸರಬಾನಂದ ಸೋನುವಾಲಾ, ಸುಶೀಲ್ ಮೋದಿ ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ.


ಇದನ್ನು ಓದಿ: ಕೇಂದ್ರ‌ ಸಚಿವ ಸಂಪುಟ ವಿಸ್ತರಣೆ; ಯಾರಿಗೆ ಮಂತ್ರಿ ಸ್ಥಾನ ಎಂಬುದು ಸಿಕ್ಕ ಮೇಲೆ ಗೊತ್ತಾಗುವುದು; ಜೋಶಿ


ಕೇಂದ್ರ ಸಚಿವ ಸಂಪುಟ ಪುನಾರಚಣೆ ವಿಚಾರವಾಗಿ ಇಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಗಣಿ-ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಸಂಪುಟ ಪುನಾರವಣೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತೀರ್ಮಾನದ ಮೇಲೆಯೇ ಸಚಿವ ಸಂಪುಟ ಪುನಾರಚನೆ ಆಗಲಿದೆ. ಅಲ್ಲದೇ ನಮ್ಮ ಸರ್ಕಾರಸಲ್ಲಿ ಯಾರು ಸಚಿವರಾಗುತ್ತಾರೆ ಎಂಬುದು ಮೊದಲೇ ಗೊತ್ತಾಗುವುದಿಲ್ಲ. ಸಚಿವರಾದ ಬಳಿಕವೇ ಗೊತ್ತಾಗಲಿದೆ. ಸಂಪುಟದಿಂದ ಕೆಲವರನ್ನು ಕೈ ಬಿಡುವ ಹಾಗೂ ಹೊಸಬರನ್ನು ಸೇರಿಸಿಕೊಳ್ಳುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಇದು ಮಾಧ್ಯಮಗಳ ಊಹಾಪೋಹ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ತಿಳಿಸಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಸಹ ಮನೆಯಿಂದ ಹೊರಗೆ ಅಡ್ಡಾಡದಂತೆ ಮುನ್ನೆಚ್ಚರಿಕೆ ವಹಿಸಬೇಕು. 

Published by:HR Ramesh
First published: