Union Budget 2022: ಕೇಂದ್ರ ಬಜೆಟ್ ಮೇಲೆ ಹೆಚ್ಚಿದ ನಿರೀಕ್ಷೆ, ಈ ಬಾರಿಯಾದ್ರೂ ಸಿಗುತ್ತಾ ಪ್ರವಾಸೋದ್ಯಮಕ್ಕೆ ಬಂಪರ್?

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಭಿವೃದ್ಧಿ, ಬಾಗಲಕೋಟೆ-ಕುಡಚಿ ರೈಲುಮಾಗ೯ಕ್ಕೆ ಅನುದಾನ ಹಾಗೂ ಕೃಷ್ಣಾ ಮೇಲ್ದಂಡೆ  ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿಸುವ ಬೇಡಿಕೆಗಳಿಗೆ ಸ್ಪಂದನೆ ಸಿಗುವ ನಿರೀಕ್ಷೆ ಜನರಲ್ಲಿ ಇದೆ. 

ಪ್ರವಾಸಿ ತಾಣ

ಪ್ರವಾಸಿ ತಾಣ

 • Share this:
  ಬಾಗಲಕೋಟೆ(ಫೆ.1):  ದೇಶದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್(Union Budget) ಇಂದು ಮಂಡನೆಯಾಗುತ್ತಿದ್ದು, ಇದರ ಬೆನ್ನಲ್ಲೇ ಉತ್ತರ ಕರ್ನಾಟಕದ ಬಾಗಲಕೋಟೆ(Bagalkote) ಜಿಲ್ಲೆಯ ಜನ್ರಲ್ಲಿ ಇನ್ನಿಲ್ಲದ ಕನಸುಗಳು ಶುರುವಾಗಿವೆ. ಪ್ರತಿಬಾರಿ ಬಜೆಟ್(Budget) ದಿನ ಬಂದಾಗ ಎದುರು ನೋಡುವ ಜನ್ರು, ಈ ಬಾರಿ ಹಲವು ಸಮಸ್ಯೆಗಳಿಗೆ(Problems) ಪರಿಹಾರ ಸಿಗಬಹುದೆನ್ನುವ ಲೆಕ್ಕಾಚಾರದಲ್ಲಿದ್ದಾರೆ. 

  ರಾಜ್ಯದ ಜನರಲ್ಲಿ ಹೆಚ್ಚಿದ ಕುತೂಹಲ

  ಹೌದು, ಕೇಂದ್ರ ಸಕಾ೯ರದ ಬಜೆಟ್ ಇಂದು ಮಂಡನೆಯಾಗಲಿದ್ದು, ದೇಶಾದ್ಯಂತ ಇನ್ನಿಲ್ಲದ ಕುತೂಹಲಗಳು ಹೆಚ್ಚಿವೆ. ಈ ‌ಮಧ್ಯೆ ರಾಜ್ಯದಿಂದ ಅತಿ ಹೆಚ್ಚು ಬಿಜೆಪಿ ಸಂಸದರನ್ನ ಕೇಂದ್ರಕ್ಕೆ ಕಳುಹಿಸಿರೋ ರಾಜ್ಯದ ಜನರಲ್ಲಿ ಇನ್ನಿಲ್ಲದ ಆಶಯಗಳು ಕೇಳಿ ಬರುತ್ತಿವೆ.  ಅದ್ರಲ್ಲೂ ಬಾಗಲಕೋಟೆ ಜಿಲ್ಲೆಯಲ್ಲೂ ಅನೇಕ ಬೇಡಿಕೆಗಳು ಕೇಳಿ ಬಂದಿವೆ. ಬಹು ವಷ೯ಗಳಿಂದ ಪರಿಪೂಣ೯ಗೊಳ್ಳದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿಸಬೇಕೆಂಬ ಕೂಗು ಕೇಳಿ ಬರುತ್ತಲೇ ಇದೆ. ಆದ್ರೆ ಅದ್ಯಾವುದೂ ಆಗಿಲ್ಲ, ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾಗೋ ಹಳ್ಳಿಗಳಿಗೆ ತ್ವರಿತ ಪರಿಹಾರ ಸಿಗಬೇಕಿದೆ. ಇದಕ್ಕೆಲ್ಲಾ ಈ ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿಸಬೇಕೆಂಬ ಕೂಗು ಕೇಳಿ ಬಂದಿದೆ.

  ಇದನ್ನೂ ಓದಿ:Union Budget 2022: ಬಜೆಟ್ ಮಂಡನೆ ವೇಳೆ ಕ್ಷಮೆ ಕೇಳಿದ್ರು ಇಂದಿರಾ ಗಾಂಧಿ; Black Budget ಮಂಡಿಸಿದ್ಯಾರು?

  ಕುಡಚಿ ರೈಲು ಮಾರ್ಗಕ್ಕೆ ಸಿಗುತ್ತಾ ಅನುದಾನ?

  ಇತ್ತ ರೈಲ್ವೆ ವಿಭಾಗಕ್ಕೆ ಬಂದಾಗ ಬಾಗಲಕೋಟೆ ಕುಡಚಿ ರೈಲುಮಾಗ೯ ಮಂದಗತಿಯಲ್ಲಿದ್ದು, ಅದಕ್ಕೆ ಬಜೆಟ್ ನಲ್ಲಿ ಪೂರಕ ಅನುದಾನ ಬಿಡುಗಡೆಯನ್ನ ಮಾಡಬೇಕಿದೆ. ಸಮರ್ಪಕ ಅನುದಾನ ಸಿಗದೇ ಈ ಯೋಜನೆ ಅರ್ಧಕ್ಕೆ ನಿಂತಿದೆ. ಹೀಗಾಗಿ ಈ ಬಾರಿಯಾದ್ರೂ ಕೇಂದ್ರ ಬಜೆಟ್​ನಲ್ಲಿ ಅನುದಾನ ಮೀಸಲಿಡಲಿ ಜೊತೆಗೆ ಬಾಗಲಕೋಟೆಯಿಂದ ನೂತನ ರೈಲುಗಳ ಓಡಾಟ ಆಗುವಂತಾಗಲಿ ಅಂತಾರೆ ರೈಲ್ವೆ ಹೋರಾಟಗಾರು.

  ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಬೇಕಿದೆ

  ಇತ್ತ ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ ಚಾಲುಕ್ಯರ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ವಿಶೇಷ ತಾಣಗಳಿದ್ದು, ಇವುಗಳ ಅಭಿವೃದ್ಧಿಗೆ ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್ ಘೋಷಣೆ ಆಗಬೇಕಿದೆ. ಈ ಬಗ್ಗೆ ಪ್ರತಿಬಾರಿ ಕೇಂದ್ರದ ಬಜೆಟ್​ನಲ್ಲಿ ಜಿಲ್ಲೆಯ ಜನ್ರು ನಿರೀಕ್ಷೆ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

  ಜವಳಿ ಪಾರ್ಕ್​ ನಿರ್ಮಾಣ ನಿರೀಕ್ಷೆ

  ಇನ್ನು ಜಿಲ್ಲೆಯಲ್ಲಿ ಅತಿಹೆಚ್ಚು ನೇಕಾರರಿದ್ದು ಅವರಿಗೆ ಜವಳಿ ಪಾರ್ಕ್​​ ಸೇರಿದಂತೆ ನೇಕಾರರಿಗೆ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕಿದೆ. ಹೀಗಾಗಿ ಇಂದಿನ ಬಜೆಟ್​ ನಲ್ಲಿ ಬಹಳಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದ್ದೇವೆ ಅಂತಾರೆ ಜಿಲ್ಲೆಯ ಜನ್ರು. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ರೈಲು ಮಾರ್ಗ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳು  ಅನುದಾನ ಕೊರತೆಯಿಂದ ನೆನೆಗುದಿಗೆ ಬಿದ್ದಿವೆ.

  ಇದನ್ನೂ ಓದಿ:Budget 2022: ಇಂದು ಕೇಂದ್ರ ವಿತ್ತ ಸಚಿವರಿಂದ ಬಜೆಟ್​ ಮಂಡನೆ; ಹೆಚ್ಚಿದ ನಿರೀಕ್ಷೆ

  ಒಟ್ಟಿನಲ್ಲಿ ಇಂದು ಮಂಡನೆಯಾಗಲಿರೋ ಕೇಂದ್ರ ಸಕಾ೯ರದ ಬಜೆಟ್ ಮೇಲೆ ಬಾಗಲಕೋಟೆ ಜಿಲ್ಲೆಯ ಜನ್ರ ನಿರೀಕ್ಷೆಗಳು ಸಹ ಹೆಚ್ಚಿದ್ದು, ಯಾವ್ಯಾವ ಬೇಡಿಕೆಗಳು ಈಡೇರಬಹುದು ಅಂತ ಕಾದು ನೋಡಬೇಕಿದೆ.

  ವರದಿ: ಮಂಜುನಾಥ್ ತಳವಾರ
  Published by:Latha CG
  First published: