Union Budget 2021: ಇದು 5 ರಾಜ್ಯಗಳ ಚುನಾವಣಾ ಬಜೆಟ್​: ಕೇಂದ್ರ ಬಜೆಟ್ ಬಗ್ಗೆ​​ ಡಿ.ಕೆ.ಸುರೇಶ್​ ವ್ಯಂಗ್ಯ

ಎಂಎಸ್‌ಪಿ ಮುಂದುವರಿಯುವ ಭರವಸೆ ನೀಡಿಬೇಕಿತ್ತು. ಆದರೆ ರೈತ ಸಮುದಾಯದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ನಿರಾಶಾದಾಯಕ ಬಜೆಟ್. ಕರ್ನಾಟಕಕ್ಕೆ ಏನು ಸಿಕ್ಕಿಲ್ಲ ಎಂದರು.

ಸಂಸದ ಡಿ ಕೆ ಸುರೇಶ್

ಸಂಸದ ಡಿ ಕೆ ಸುರೇಶ್

  • Share this:
     ಬೆಂಗಳೂರು(ಫೆ.01): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರು 2021ನೇ ವರ್ಷದ ಮೊದಲ ಕೇಂದ್ರ ಬಜೆಟ್​ ಮಂಡನೆ ಮಾಡಿದ್ದಾರೆ. ಕೊರೋನಾ ಸಂಕಷ್ಟದ ನಡುವೆ ಬಹುನಿರೀಕ್ಷಿತ ಕೇಂದ್ರ ಬಜೆಟ್​ ಇಂದು ಮಂಡನೆಯಾಗಿದೆ. ಕೇಂದ್ರ ಬಜೆಟ್​​​​ನಿಂದ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಮಧ್ಯಮ ವರ್ಗದ ಜನರಿಗೆ ಭಾರೀ ನಿರಾಸೆಯಾಗಿದೆ. ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ.  ಕೇಂದ್ರ ಬಜೆಟ್​​ ಕುರಿತಾಗಿ ವಿಪಕ್ಷ ನಾಯಕರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದ ಡಿ.ಕೆ.ಸುರೇಶ್​ ಅವರು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್​​ ಕುರಿತಾಗಿ ಮಾತನಾಡಿದ್ದಾರೆ. ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಜನರು ಬಹಳಷ್ಟು ‌ನಿರೀಕ್ಷೆ ಇಟ್ಟುಕೊಂಡಿದ್ದರು. ಕೊರೋನಾ ಹಿನ್ನಲೆ ನಿರೀಕ್ಷೆ ಹೆಚ್ಚಿತ್ತು. ಆದರೆ ಇದು ಐದು ರಾಜ್ಯಗಳ ಚುನಾವಣಾ ಬಜೆಟ್ ಆಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

    Gold Price Today: ಚಿನ್ನದ ದರದಲ್ಲಿ ಏರಿಕೆ: ಕೊಂಚ ಇಳಿಕೆ ಕಂಡ ಬೆಳ್ಳಿ; ವಿವಿಧ ನಗರಗಳಲ್ಲಿ ಇಂದಿನ ರೇಟ್ ಎಷ್ಟು?

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಬಜೆಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಚುನಾವಣಾ ರಾಜ್ಯಗಳಿಗೆ ಆದ್ಯತೆ ನೀಡಲಾಗಿದೆ. ಕರ್ನಾಟಕವನ್ನು ನಿರ್ಮಲಾ ಸೀತರಾಮನ್ ಯಾಕೆ ಪ್ರತಿನಿಧಿಸುತ್ತಾರೆ. ಆದರೆ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎರಡು ಕಡೆ ಬಿಜೆಪಿ ಸರ್ಕಾರ ಇದ್ದರೂ ವ್ಯರ್ಥ ಎಂದು ಬೇಸರ ವ್ಯಕ್ತಪಡಿಸಿದರು.

    ಇನ್ನು, ಮೆಟ್ರೋಗೆ ನೀಡಿರುವುದು ಹೊಸ ಅನುದಾನ ಅಲ್ಲ. ಈಗಾಗಲೇ ಘೋಷಣೆ ಆಗಿರುವ ಯೋಜನೆಗೆ ಅನುದಾನ ನೀಡಿದ್ದಾರೆ. ಎಂಎಸ್‌ಪಿ ಮುಂದುವರಿಯುವ ಭರವಸೆ ನೀಡಿಬೇಕಿತ್ತು. ಆದರೆ ರೈತ ಸಮುದಾಯದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ನಿರಾಶಾದಾಯಕ ಬಜೆಟ್. ಕರ್ನಾಟಕಕ್ಕೆ ಏನು ಸಿಕ್ಕಿಲ್ಲ ಎಂದರು.

    ಹತ್ತಿ ಮತ್ತು ರೇಷ್ಮೆ ಬೆಳೆಯುವ ರೈತರಿಗೆ ಶುಭ ಸುದ್ದಿ ಸಿಕ್ಕಿದೆ. ಆಮದು ಸುಂಕು ಏರಿಕೆಯಾಗಿದೆ ಅದೊಂದೆ‌ ಒಳ್ಳೆ ಸುದ್ದಿ. ಬಾಕಿ ಉಳಿದಂತೆ ಬಡವರ ಮೇಲೆ‌ ಬೆಲೆ ಏರುವ ಬಜೆಟ್ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    Published by:Latha CG
    First published: