• Home
  • »
  • News
  • »
  • state
  • »
  • BMTC ನೌಕರರ ನಡುವೆಯೂ ಧರ್ಮ ದಂಗಲ್​; ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರ್​

BMTC ನೌಕರರ ನಡುವೆಯೂ ಧರ್ಮ ದಂಗಲ್​; ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರ್​

ಟೋಪಿ, ಶಾಲು ಹಾಕಿರೋ ನೌಕರರು

ಟೋಪಿ, ಶಾಲು ಹಾಕಿರೋ ನೌಕರರು

ಇನ್ನು ಬಿಎಂಟಿಸಿಯ 1,500 ಸಿಬ್ಬಂದಿ ಕೇಸರಿ ಕಾರ್ಮಿಕರ ಸಂಘದ ಸದಸ್ಯತ್ವ ಹೊಂದಿದ್ದು, ಮುಸ್ಲಿಂರು ಟೋಪಿ ತೆಗೆದಿಟ್ಟು ಕೆಲಸಕ್ಕೆ ಹಾಜರಾಗುವವರೆಗೂ ನಾವು ಕೇಸರಿ ಶಾಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

  • Share this:

ಬೆಂಗಳೂರು (ಜೂ 11) : ರಾಜ್ಯದಲ್ಲಿ ಹಿಜಾಬ್, ಅಜಾನ್, ಮಂದಿರ v/s ಮಸೀದಿ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಧರ್ಮ ದಂಗಲ್ (Dharma Dangal ) ಶುರುವಾಗುವ ಸಾಧ್ಯತೆ ಇದ್ದು, ಇದೀಗ ಬಿಎಂಟಿಸಿ (BMTC) ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘನೆ ಮಾಡಿ ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರು ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ (School College) ಹಿಜಾಬ್ ವಿವಾದದ ಬೆನ್ನಲ್ಲೇ ಇದೀಗ ಬಿಎಂಟಿಸಿಯಲ್ಲೂ ಟೋಪಿಗಿ/s ಕೇಸರಿ ಶಾಲು ವಿವಾದ ಶುರುವಾಗಿದ್ದು, ಬಿಎಂಟಿಸಿ ನೌಕರರು (Employees) ಕಳೆದ ಹಲವು ದಿನಗಳಿಂದ ಕೇಸರಿ ಶಾಲು (Saffron scarf) ಮತ್ತು ಟೋಪಿ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.


ಹಿಬಾಜ್​ ಬಳಿಕ ಹೊಸ ವಿವಾದ ಶುರು


ಹಿಜಾಬ್​ನಿಂದ ಆರಂಭವಾದ ಧರ್ಮ ಸಂಘರ್ಷ ರಾಜ್ಯದಲ್ಲಿ ಮುಂದುವರೆಯುತ್ತಲೇ ಇದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಪ್ರತಿಭಟಿಸಿದ್ದರು. ಹಿಜಾಬ್ ತೆಗೆಯುವವರೆಗೂ ಕೇಸರಿ ಶಾಲು ಧರಿಸುತ್ತೇವೆಂದು ಪಟ್ಟು ಹಿಡಿದಿದ್ದರು.


ಸಮವಸ್ತ್ರ ನೀತಿ ಉಲ್ಲಂಘನೆ


ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಹಿಜಾಬ್ ಧರಿಸಿ ಶಾಲಾ- ಕಾಲೇಜಿಗೆ ಹೋಗುವಂತಿಲ್ಲವೆಂದು ತೀರ್ಪು ನೀಡಿದೆ. ಈ ನಡುವೆ ಇದೀಗ ಸರ್ಕಾರಿ ನಿಗಮದಲ್ಲೂ ಧರ್ಮ ದಂಗಲ್ ಆರಂಭವಾಗಿದೆ. ಬಿಎಂಟಿಸಿ ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘನೆ ಮಾಡಿದ್ದು, ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರಿಂದ ಕೇಸರಿ ಶಾಲು ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ


ಮುಸ್ಲಿಂರು ಟೋಪಿ ತೆಗೆದಿಟ್ಟು ಕೆಲಸಕ್ಕೆ ಹಾಜರಾಗಿ


ಇನ್ನು ಬಿಎಂಟಿಸಿಯ 1,500 ಸಿಬ್ಬಂದಿ ಕೇಸರಿ ಕಾರ್ಮಿಕರ ಸಂಘದ ಸದಸ್ಯತ್ವ ಹೊಂದಿದ್ದು, ಮುಸ್ಲಿಂರು ಟೋಪಿ ತೆಗೆದಿಟ್ಟು ಕೆಲಸಕ್ಕೆ ಹಾಜರಾಗುವವರೆಗೂ ನಾವು ಕೇಸರಿ ಶಾಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Basavaraj Bommai: ‘ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆ; ಶೂಟ್ ಆನ್​ ಸೈಟ್ ಆರ್ಡರ್ ಕೊಡೋ ಅಗತ್ಯವಿಲ್ಲ


BMTC ಟಿಕೆಟ್​ ದರ ಶೀಘ್ರವೇ ಏರಿಕೆ


ಪೆಟ್ರೋಲ್​ ಡಿಸೇಲ್ ದರ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಬೀಳೋ ಸಾಧ್ಯತೆ ಇದೆ. ಬಿಎಂಟಿಸಿ (BMTC) ಬಸ್​ ಪ್ರಯಾಣ ದರ ಏರಿಕೆ (Price Hike) ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ರೆ ಬಿಎಂಟಿಸಿ ಬಸ್​ ಪ್ರಯಾಣ ದರ ಏರಿಕೆಯಾಗೋ ಸಾಧ್ಯತೆ ಇದೆ. ಇಂಧನ ಬೆಲೆ, ಹೋಟೆಲ್​ ತಿಂಡಿ, ಔಷಧಿಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬಸ್​ ಪ್ರಯಾಣಿಕರಿಗೆ ಟಿಕೆಟ್​ ಬೆಲೆ ಏರಿಕೆ ಶಾಕ್​ ಕೊಡಲು ರಾಜ್ಯ ಸರ್ಕಾರ (Government) ಮುಂದಾಗಿದೆ. ಇನ್ನು ಈಗಾಗಲೇ ನಷ್ಟದಲ್ಲಿರೋ ಬಿಎಂಟಿಸಿ ದರ ಏರಿಕೆ ಮಾಡೋದು ಅನಿವಾರ್ಯ ಎಂದು ಹೇಳುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ  ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.


ಇದನ್ನೂ ಓದಿ: Council Election: ಪ್ರಭಾಕರ್ ಕೋರೆ ಭೇಟಿಯಾದ ಸಿಎಂ ಬೊಮ್ಮಾಯಿ; ಯಾರಾದ್ರೂ ಬಿ ಟೀಂ ಆಗಲಿ, ನಾವ್ ಮಾತ್ರ ಎ ಟೀಂ


2 ಬಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

 ಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. 2 ಬಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಬಾರಿ ಶೇ.20ರಷ್ಟು ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾಪಿಸಿತ್ತು. ಈಗ 2ನೇ ಪ್ರಸ್ತಾವನೆಯಲ್ಲಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. 2 ತಿಂಗಳ ಹಿಂದಷ್ಟೇ ಬಿಎಂಟಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಒಪ್ಪಿದರೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

Published by:Pavana HS
First published: