Uniform: ಇನ್ಮುಂದೆ ಕಾಲೇಜು ವಿದ್ಯಾರ್ಥಿಗಳಿಗೂ ಯೂನಿಫಾರಂ ಕಡ್ಡಾಯ; ಪಿಯುಸಿ ಬೋರ್ಡ್ ಆದೇಶ

ಕಾಲೇಜು ಅಭಿವೃದ್ಧಿ ಸಮಿತಿ‌ ನಿಗದಿ ಮಾಡಿರುವ ಸಮವಸ್ತ್ರ ಧರಿಸಬೇಕು. ಒಂದು ವೇಳೆ ಸಮವಸ್ತ್ರ ನಿಯಮ ‌ಇಲ್ಲದೆ ಹೋದ್ರೆ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತಹ ವಸ್ತ್ರ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ‌ ಪಿಯುಸಿ ಬೋರ್ಡ್ ತಿಳಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ18): ಹಿಜಾಜ್ (Hijab)​ ಹಾಗೂ ಕೇಸರಿ ಶಾಲು ವಿವಾದ ಕೊನೆಯಾಗಿದ್ರು. ಸರ್ಕಾರ ಕಾನೂನಾತ್ಮಕವಾಗಿ ಅಂತ್ಯಗೊಳಿಸಲು ಸಮವಸ್ತ್ರ ನಿಯಮ (Uniform law) ಜಾರಿ ಮಾಡಿದೆ. ಹಿಜಾಬ್​ ವಿವಾದ ಹಿನ್ನೆಲೆ ರಾಜ್ಯದಲ್ಲಿ ಸಮವಸ್ತ್ರ ನಿಯಮ ಜಾರಿ ಮಾಡಿ ಆದೇಶ  ಹೊರಡಿಸಿದೆ. 2022-23ನೇ‌ ಸಾಲಿನ‌ ಶೈಕ್ಷಣಿಕ ವರ್ಷಕ್ಕೆ ಪಿಯುಸಿ ಬೋರ್ಡ್ (PUC Board)​ ಮಾರ್ಗಸೂಚಿ ಪ್ರಕಟ ಮಾಡಿದೆ. ಮಾರ್ಗಸೂಚಿಯಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವಂತೆ ಆದೇಶ, ಈ ವರ್ಷದಿಂದ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಲು ಆದೇಶ ನೀಡಲಾಗಿದೆ. ಕಾಲೇಜು ಪ್ರವೇಶಕ್ಕೆ ಮಾರ್ಗಸೂಚಿ ಪ್ರಕಟ‌ ಮಾಡಿರುವ ಶಿಕ್ಷಣ ಇಲಾಖೆ, ಮಾರ್ಗಸೂಚಿಯಲ್ಲಿ (Guidelines) ಸಮವಸ್ತ್ರದ ಬಗ್ಗೆ ಉಲ್ಲೇಖ ಮಾಡಿದೆ.

ಕಾಲೇಜು ವಿದ್ಯಾರ್ಥಿಗಳಿಗೂ ಡ್ರೆಸ್ ಕೋಡ್ 

ಕಾಲೇಜು ಅಭಿವೃದ್ಧಿ ಸಮಿತಿ‌ ನಿಗದಿ ಮಾಡಿರುವ ಸಮವಸ್ತ್ರ ಧರಿಸಬೇಕು. ಒಂದು ವೇಳೆ ಸಮವಸ್ತ್ರ ನಿಯಮ ‌ಇಲ್ಲದೆ ಹೋದ್ರೆ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತಹ ವಸ್ತ್ರ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ‌ ಪಿಯುಸಿ ಬೋರ್ಡ್ ತಿಳಿದಿದೆ. ಹಿಬಾಜ್ ವಿವಾದದ ಹಿನ್ನೆಲೆಯಲ್ಲಿ ಈ ವರ್ಷ ಮಾರ್ಗಸೂಚಿಯಲ್ಲಿ ಸಮವಸ್ತ್ರದ ಬಗ್ಗೆ ಶಿಕ್ಷಣ ಇಲಾಖೆ ಉಲ್ಲೇಖ ಮಾಡಿದೆ. ಹೈಕೋರ್ಟ್ ತೀರ್ಪಿನ ಅನ್ವಯ ಸಮವಸ್ತ್ರ ಧರಿಸುವಂತೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ. 1 ರಿಂದ 10ನೇ ತರಗತಿಗಳಿಗೆ ಇರುವಂತೆ ಡ್ರೆಸ್ ಕೋಡ್ ನಿಯಮ ಕಾಲೇಜುಗಳಲ್ಲಿ ಜಾರಿ ಮಾಡುವಂತೆ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ SSLC ಫಲಿತಾಂಶ ಪ್ರಕಟ
 ಬೆಂಗಳೂರು (ಮೇ 18):  ನಾಳೆ SSLC ಫಲಿತಾಂಶ ಪ್ರಕಟವಾಗಲಿದೆ.  ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಚಿವ ಬಿ.ಸಿ ನಾಗೇಶ್​  ಅವರು ನಾಳೆ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಘೋಷಣೆ ಮಾಡಲಿದ್ದಾರೆ.  SSLC ಬೋರ್ಡ್​ ಕೂಡ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದೆ.  ವಿದ್ಯಾರ್ಥಿಗಳಿಗೆ ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿರಲಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ನಂಬರ್ ಗೆ ಎಸ್ಎಂಎಸ್ ಮೂಲಕ ಫಲಿತಾಂಶ ಬರಲಿದೆ.ವಿದ್ಯಾರ್ಥಿಗಳು  ಫಲಿತಾಂಶವನ್ನು  https://sslc.karnataka.gov.in/ ಅಥವಾ https://karresults.nic.in/ ಗೆ ಭೇಟಿ ನೀಡಿ  ಚೆಕ್‌ ಮಾಡಬಹುದಾಗಿದೆ. ಮೌಲ್ಯಮಾಪನ  ನಿರೀಕ್ಷೆಗಿಂತ ತಡವಾಗಿ ಪೂರ್ಣಗೊಂಡಿದೆ. ಬಳಿಕ ಮೌಲ್ಯಮಾಪನದಲ್ಲಿ ಸಣ್ಣ ಪುಟ್ಟ ದೋಷಗಳು, ಕಣ್ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಈ ಬಾರಿ SSLC ಫಲಿತಾಂಶ ಪ್ರಕಟನೆ ತಡವಾಗಿದೆ.
SSLC 10 ನೇ ಫಲಿತಾಂಶ 2022: ಪರಿಶೀಲಿಸಲು ಕ್ರಮಗಳು

ಹಂತ 1. ಅಧಿಕೃತ ವೆಬ್‌ಸೈಟ್ KSEEB - sslc.karnataka.gov.in ಗೆ ಹೋಗಿ

ಹಂತ 2. ಮುಖಪುಟದಲ್ಲಿ SSLC 10 ನೇ ಪರೀಕ್ಷೆಯ ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ

ಹಂತ 3. ಲಾಗಿನ್ ID ನಮೂದಿಸಿ- ನೋಂದಣಿ ಸಂಖ್ಯೆ/ ರೋಲ್ ಸಂಖ್ಯೆ ಹಾಕಿ

ಹಂತ 4. ನಿಮ್ಮ SSLC  ಫಲಿತಾಂಶ  ಸ್ಕ್ರೀನ್​ ಮೇಲೆ ಕಾಣಿಸುತ್ತದೆ

ಹಂತ 5.  ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಮಾಹಿತಿಗಾಗಿ  ಪ್ರಿಂಟ್ ಔಟ್ ತೆಗೆದುಕೊಳ್ಳಿ

ಇದನ್ನೂ ಓದಿ: Bengaluru Rain: ಮಹಾಮಳೆಗೆ ಮುಳುಗಿದ ಮಹಾನಗರಿ! ಬೆಂಗಳೂರಿನ ಮಳೆ ಅವಾಂತರದ ಚಿತ್ರಗಳು ಇಲ್ಲಿವೆ

ಈ ಬಾರಿ ವಿದ್ಯಾರ್ಥಿಗಳಿಗೆ ಸಿಗಲಿದೆ ಗ್ರೇಸ್ ಮಾರ್ಕ್ಸ್​

SSLC ಪೇಲ್‌ ಕಡಿಮೆ ಮಾಡಲು 10%  ಗ್ರೇಸ್ ಮಾರ್ಕ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.  SSLC ಫಲಿತಾಂಶಕ್ಕಾಗಿ ಕಾಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ 3 ವಿಷಯದಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ. ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಗ್ರೇಸ್​  ಮಾರ್ಕ್ಸ್​ಗಳನ್ನು  ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ.

Published by:Pavana HS
First published: