ಸರಕಾರ ಬೀಳಿಸಲು ಸ್ಕೆಚ್ ಹಾಕ್ತಿದೆಯಾ ಅಂಡರ್​ವರ್ಲ್ಡ್? ಸಿಎಂ ಹೇಳಿದ ಆ ಕಿಂಗ್​ಪಿನ್ಸ್ ಯಾರು?

ಅಂಡರ್ವರ್ಲ್ಡ್ ಸಹಾಯದಿಂದ ಬಿಜೆಪಿಯವರು ತಮ್ಮ ಸರಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆಂದು ಸುಳಿವು ನೀಡುವ ಮೂಲಕ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ನಾರ್ವೆ ಸೋಮಶೇಖರ್, ಸಿ.ಪಿ. ಯೋಗೇಶ್ವರ್, ಆರ್. ಅಶೋಕ್ ವಿರುದ್ಧ ಸಿಎಂ ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಹಾಗೆಯೇ, ಸರಕಾರ ಬೀಳಿಸುವ ಭೂಗತಪಾತಕಿಗಳಿಗೆ ಕೆಲ ಪೊಲೀಸರು ಬೆಂಗಾವಲಾಗಿದ್ದಾರೆಂಬ ಸುದ್ದಿಯೂ ಇದೆ.


Updated:September 14, 2018, 2:49 PM IST
ಸರಕಾರ ಬೀಳಿಸಲು ಸ್ಕೆಚ್ ಹಾಕ್ತಿದೆಯಾ ಅಂಡರ್​ವರ್ಲ್ಡ್? ಸಿಎಂ ಹೇಳಿದ ಆ ಕಿಂಗ್​ಪಿನ್ಸ್ ಯಾರು?
ಹೆಚ್.ಡಿ. ಕುಮಾರಸ್ವಾಮಿ

Updated: September 14, 2018, 2:49 PM IST
- ಚಿದಾನಂದ ಪಟೇಲ್ / ಜನಾರ್ದನ ಹೆಬ್ಬಾರ್, ನ್ಯೂಸ್18 ಕನ್ನಡ

ಬೆಂಗಳೂರು(ಸೆ. 14): ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಭಿನ್ನಮತದ ಜೊತೆಗೆ ಈಗ ಸಮ್ಮಿಶ್ರ ಸರಕಾರಕ್ಕೆ ಬೇರೆ ದಿಕ್ಕುಗಳಿಂದಲೂ ಕಂಟಕವಿದ್ದಂತಿದೆ. ಕಾಂಗ್ರೆಸ್​ನೊಳಗಿರುವ ಬಂಡಾಯವನ್ನು ಶಮನ ಮಾಡುವಂತೆ ಕಾಂಗ್ರೆಸ್ ವರಿಷ್ಠ ವೇಣುಗೋಪಾಲ್ ಅವರಿಗೆ ಮನವಿ ಮಾಡಿರುವ ಸಿಎಂ ಕುಮಾರಸ್ವಾಮಿ ಇದೀಗ ಸರಕಾರ ಭಂಜಕರನ್ನು ಸದೆಬಡಿಯಲು ಸನ್ನದ್ಧರಾದಂತಿದೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ಎಲ್ಲವನ್ನೂ ಎಚ್ಚರಿಕೆಯಿಂದ ಗಮನಿಸುತ್ತಿರುವ ಸುಳಿವು ನೀಡಿದರು. ತಮ್ಮ ಸರಕಾರವನ್ನು ಉರುಳಿಸಲು ಯಾರೆಲ್ಲಾ ಸ್ಕೆಚ್ ಹಾಕಿದ್ದಾರೆ ಎಂಬುದನ್ನು ತಿಳಿಸಿದ ಅವರು ಪರೋಕ್ಷವಾಗಿ ಬಿಜೆಪಿ ಮೇಲೆ ಗದಾಪ್ರಹಾರ ಮಾಡಿದರು. ಅಂಡರ್​ವರ್ಲ್ಡ್ ಕ್ರಿಮಿನಲ್​ಗಳ ಸಹಾಯದಿಂದ ಬಿಜೆಪಿಯವರು ತಮ್ಮ ಸರಕಾರವನ್ನು ಉರುಳಿಸಲು ಯತ್ನಿಸುತ್ತಿರುವ ಸುಳಿವನ್ನು ನೀಡಿದರು.

ಶಾಸಕರನ್ನು ಸೆಳೆಯಲು ಹಣದ ಆಮಿಷ ಒಡ್ಡಲಾಗುತ್ತಿದೆ. ಈ ಹಣ ಎಲ್ಲಿ ಸಂಗ್ರಹವಾಗುತ್ತಿದೆ ಎಂಬುದು ತನಗೆ ಗೊತ್ತು. ಬಿಬಿಎಂಪಿ ಕಡತಕ್ಕೆ ಬೆಂಕಿ ಕಟ್ಟಡಕ್ಕೆ ಬೆಂಕಿ ಇಟ್ಟವರು ಈಗ ಸರಕಾರ ಬೀಳಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ರೆಸಾರ್ಟ್ ಮಾಡಲು ಹೋಗಿದ್ದ ಸಕಲೇಶಪುರದ ಕಾಫಿ ಪ್ಲಾಂಟರ್ ತನ್ನ ಪತ್ನಿ, ಮಗುವನ್ನು ಗುಂಡಿಟ್ಟು ಕೊಲ್ಲಲು ಕಾರಣರಾದರು ಈಗ ಸರಕಾರ ಉರುಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಇಸ್ಪೀಟ್ ದಂಧೆಯಲ್ಲಿ ಕೋಟ್ಯಂತರ ದುಡ್ಡು ಸಂಗ್ರಹಿಸಿ ಸರಕಾರ ಬೀಳಿಸಲು ಈ ಹಣ ಬಳಸುತ್ತಾ ಇದ್ದಾರೆ. ಆ ಕಿಂಗ್ ಪಿನ್ ಯಾರು.. ಅವರ ಹಿನ್ನೆಲೆ ಏನು ಎಂದು ತನಗೆ ಗೊತ್ತು. ತಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ… ಸೋಮವಾರದಿಂದ ಅಧಿಕಾರಿಗಳ ಸಭೆ ಮಾಡಿ ಆಡಳಿತವನ್ನು ಇನ್ನಷ್ಟು ಚುರುಕುಗೊಳಿಸುತ್ತೇನೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಯಾರು ಆ ಕಿಂಗ್ ಪಿನ್ಸ್? 

ಸಿಎಂ ಹೇಳಿದಂತೆ ಬಿಬಿಎಂಪಿ ಕಡತಕ್ಕೆ ಬೆಂಕಿ ಇಟ್ಟ ಘಟನೆ ನಡೆದದ್ದು 2011ರಲ್ಲಿ. ಬೆಂಗಳೂರಿನ ಪ್ರಮುಖ ಬಿಜೆಪಿ ನಾಯಕರೊಬ್ಬರು ಈ ಘಟನೆಯ ಹಿಂದಿದ್ದಾರೆಂಬ ಆರೋಪವಿದೆ. ಹಾಗೆಯೇ, ಸಕಲೇಶಪುರದ ಕಾಫಿ ಪ್ಲಾಂಟರ್​ವೊಬ್ಬರು ಇತ್ತೀಚೆಗೆ ಶೂಟೌಟ್ ನಡೆಸಿ ತನ್ನ ಪತ್ನಿಯನ್ನು ಕೊಂದು, ಮಕ್ಕಳನ್ನೂ ಕೊಲ್ಲಲು ಯತ್ನಿಸಿದ ಘಟನೆ ನಡೆದಿತ್ತು. ಆ ಉದ್ಯಮಿ ಹೆಸರು ಗಣೇಶ್. ಸಕಲೇಶಪುರದ ಗಣೇಶ್ ಅವರು ರೆಸಾರ್ಟ್ ಪ್ರಾರಂಭಿಸಿದ್ದರು. ಸಾಲದ ಬಾಧೆಯಿಂದ ಅವರು ಇಡೀ ಕುಟುಂಬದೊಂದಿಗೆ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದರು. ಅವರ ಆ ಸ್ಥಿತಿಗೆ ಕಾರಣ ನಾರ್ವೆ ಸೋಮಶೇಖರ್ ಎಂಬ ಮಾಹಿತಿ ಇದೆ. ರೌಡಿ ಶೀಟರ್ ಆಗಿರುವ ನಾರ್ವೆ ಸೋಮಶೇಖರ್ ಅವರು ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರದಲ್ಲಿ ಬಿಜೆಪಿ ಟಿಕೆಟ್​ ಪಡೆದು ಸ್ಪರ್ಧಿಸಿದ್ದರು. ಗಣೇಶ್​ಗೆ ಬಡ್ಡಿ ನೀಡಿ ಸಾಲದ ಶೂಲಕ್ಕೆ ಸಿಲುಕಿಸಿದವರು ಇದೇ ನಾರ್ವೆ ಚಂದ್ರಶೇಖರ್ ಎನ್ನಲಾಗಿದೆ.

ಹಾಗೆಯೇ, ಬೆಂಗಳೂರಿನಲ್ಲಿ ಲಾಟರಿ, ಬೆಟ್ಟಿಂಗ್ ಮತ್ತು ಇಸ್ಪೀಟ್ ದಂಧೆಯಲ್ಲಿ ಕುಖ್ಯಾತರಾಗಿರುವುದು ಉದಯ್ ಗೌಡ, ಹೊಂಬಾಳೆ ವಿಜಿ ಮತ್ತು ಫೈಟರ್ ರವಿ. ಇವರಿಗೂ ನಾರ್ವೆ ಸೋಮಶೇಖರ್​ಗೂ ನೇರ ಸಂಪರ್ಕವಿದೆ ಎನ್ನಲಾಗಿದೆ. ನಾರ್ವೆ ಸೋಮಶೇಖರ್​ಗೆ ಸಕಲೇಶಪುರದಲ್ಲಿ ಬಿಜೆಪಿ ಟಿಕೆಟ್ ಕೊಡಲು ಶಿಫಾರಸು ಮಾಡಿದ್ದು ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರೆಯೇ. ಹೀಗಾಗಿ ಸಿಎಂ ಹೇಳಿದ ಪ್ರಕಾರ, ನಾರ್ವೆ ಚಂದ್ರಶೇಖರ್ ಮೂಲಕ ಸಿ.ಪಿ. ಯೋಗೇಶ್ವರ್, ಬೆಂಗಳೂರಿನ ಪ್ರಮುಖ ನಾಯಕರಾದ ಆರ್. ಅಶೋಕ್ ಮತ್ತು ಅಶ್ವಥ್ ನಾರಾಯಣ್ ಈ ಸರಕಾರ ಉರುಳಿಸಲು ಸ್ಕೆಚ್ ಹಾಕಿರಬಹುದೇ? ನ್ಯೂಸ್18 ಕನ್ನಡಕ್ಕೆ ಇಂಥದ್ದೊಂದು ಮಾಹಿತಿ ಲಭ್ಯವಾಗಿದೆ. ಯೋಗೇಶ್ವರ್, ಆರ್. ಅಶೋಕ್ ಮತ್ತು ಅಶ್ವಥ್ ನಾರಾಯಣ್ ಈ ಮೂವರೂ ಒಕ್ಕಲಿಗರೇ ಆಗಿದ್ದಾರೆ. ಒಕ್ಕಲಿಗರ ಮುನಿಸನ್ನು ತಡೆಯುವ ಉದ್ದೇಶದಿಂದ ಈ ಮೂರು ಒಕ್ಕಲಿಗರನ್ನು ಮುಂದೆ ಬಿಡಲಾಗಿದೆ ಎಂಬ ಮಾಹಿತಿ ಇದೆ.

ಪೊಲೀಸರ ಬೆಂಗಾವಲು?
Loading...

ಇವತ್ತು ಮಾಧ್ಯಮಗಳಲ್ಲಿ ಮಾತನಾಡುವಾಗ ಸಿಎಂ ಕುಮಾರಸ್ವಾಮಿ ಅವರು ಸೋಮವಾರದಿಂದ ಆಡಳಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವ ಕೆಲಸ ಮಾಡುವುದಾಗಿ ಹೇಳಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲೇ ಮತ್ತೊಂದು ಮಹತ್ವದ ಮಾಹಿತಿಯೊಂದು ನ್ಯೂಸ್18 ಕನ್ನಡಕ್ಕೆ ಲಭ್ಯವಾಗಿದೆ. ಸಮ್ಮಿಶ್ರ ಸರಕಾರವು ಇನ್ನೆರಡು ದಿನಗಳಲ್ಲಿ ಬೆಂಗಳೂರಿನ ಪೊಲೀಸ್ ತಂಡವನ್ನು ಪುನಾರಚಿಸಲಿದೆ. ಸರಕಾರ ಉರುಳಿಸಲು ನಿಂತಿರುವ ಅಪರಾಧಿಗಳಿಗೆ ಬೆಂಗಾವಲಾಗಿ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ನಿಂತಿರುವುದು ಸಿಎಂ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಬೀಟರ್ ಬಡ್ಡಿ ದಂಧೆ, ಬ್ಯುಲ್ಡಿಂಗ್ ಮಾಫಿಯಾ ಮತ್ತು ಇಸ್ಪೀಟ್ ದಂಧೆಗೆ ಕಡಿವಾಣ ಹಾಕಿದ್ದೇ ಈ ಬೆಳವಣಿಗೆಗೆ ಕಾರಣ. ಸರಕಾರವನ್ನು ಉರುಳಿಸಲು ಸುಪಾರಿ ಕೊಟ್ಟಿರುವ ನಾಲ್ವರು ಅಂಡರ್​ವರ್ಲ್ಡ್ ಕ್ರಿಮಿನಲ್​ಗಳಿಗೆ ಬೆಂಗಾವಲಾಗಿ ಕೆಲ ಹಿರಿಯ ಪೊಲೀಸರಿರುವ ಮಾಹಿತಿ ಕುಮಾರಸ್ವಾಮಿ ಅವರಿಗೆ ಸಿಕ್ಕಿದೆ. ಹೀಗಾಗಿ, ಅವರು ಬೆಂಗಳೂರಿನ ಪೊಲೀಸ ತಂಡದ ಪುನಾರಚನೆ ಮಾಡಹೊರಟಿದ್ದಾರೆನ್ನಲಾಗಿದೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ