HOME » NEWS » State » UNANSWERED QUESTIONS IN SHIVAMOGGA BLAST CASE SNVS

Shivamogga Blast - ಶಿವಮೊಗ್ಗ ಸ್ಫೋಟ: ಘಟನೆಯಲ್ಲಿ ಹಲವು ಅನುಮಾನಾಸ್ಪದ ಸಂಗತಿ; ಉತ್ತರ ಸಿಗದ ಪ್ರಶ್ನೆಗಳು

ಶಿವಮೊಗ್ಗದ ಹುಣಸೋಡು ಬಳಿಯ ಸ್ಟೋನ್ ಕ್ರಷರ್ನಲ್ಲಿ ನಿನ್ನೆ ಭಾರೀ ಸ್ಫೋಟಕ್ಕೆ ಜಿಲೆಟಿನ್ ಕಡ್ಡಿ ಸ್ಫೋಟಗೊಂಡಿದ್ದು ಕಾರಣ ಎಂದು ನಂಬಲಾಗಿದೆ. ಆದರೆ, ಸ್ಫೋಟಕ್ಕೆ ಬೇರೆ ರಾಸಾಯನಿಕ ಅಥವಾ ಸ್ಫೋಟಕಗಳು ಕಾರಣವೇ ಎಂಬುದು ಬೆಳಕಿಗೆ ಬರಬೇಕಿದೆ.

news18-kannada
Updated:January 22, 2021, 12:07 PM IST
Shivamogga Blast - ಶಿವಮೊಗ್ಗ ಸ್ಫೋಟ: ಘಟನೆಯಲ್ಲಿ ಹಲವು ಅನುಮಾನಾಸ್ಪದ ಸಂಗತಿ; ಉತ್ತರ ಸಿಗದ ಪ್ರಶ್ನೆಗಳು
ಸಾಂದರ್ಭಿಕ ಚಿತ್ರ
  • Share this:
ಶಿವಮೊಗ್ಗ(ಜ. 22): ತಾಲೂಕಿನ ಹುಣಸೋಡು ಬಳಿಯ ಕಲ್ಲಿನ ಕ್ವಾರಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದ ರಭಸಕ್ಕೆ ನೂರು ಕಿಮೀ ದೂರದವರೆಗೆ ಭೂಮಿ ಕಂಪಿಸಿರುವುದು ತಿಳಿದುಬಂದಿದೆ. ಸ್ಫೋಟ ಸ್ಥಳದ ಅಕ್ಕಪಕ್ಕದ ಹಳ್ಳಿಯ ಮನೆಗಳು ಅಲುಗಾಡಿ ಹೋಗಿವೆ. ಕೆಲ ವರದಿಗಳ ಪ್ರಕಾರ 15 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ. ಆದರೆ, ಸಾವಿನ ಸಂಖ್ಯೆ ಎಷ್ಟು ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಈವರೆಗೆ ಎರಡು ಶವಗಳನ್ನ ತೆಗೆಯಲಾಗಿದೆ. ಮೃತ ದೇಹಗಳು ಛಿದ್ರಛಿದ್ರಗೊಂಡಿರುವುದರಿಂದ ಸಾವಿನ ಸಂಖ್ಯೆ ನಿರ್ದಿಷ್ಟವಾಗಿ ಹೇಳಲು ಅಸಾಧ್ಯವಾಗಿದೆ.

ಗಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂಬ ಮಾತು ಕೇಳಿಬರುತ್ತಿದೆ. 50 ಬಾಕ್ಸ್​ಗಳ ಗಿಲೆಟಿನ್ ಕಡ್ಡಿ ಹೊತ್ತಿತ್ತೆನ್ನಲಾದ ಒಂದು ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಘಟನೆಯನ್ನು ಉನ್ನತ ಮಟ್ಟದ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಮೊದಲಾದವರು ಟ್ವೀಟ್ ಮೂಲಕ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ, ಬಿ.ವೈ. ವಿಜಯೇಂದ್ರ ಮೊದಲಾದವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Shivamogga Blast: ಶಿವಮೊಗ್ಗ ಡೈನಮೈಟ್ ಸ್ಫೋಟ - ಕ್ರಷರ್ ಮಾಲೀಕ ಸೇರಿ ಮೂವರ ಬಂಧನ

ಇದೇ ವೇಳೆ ಘಟನೆಯಲ್ಲಿ ಇನ್ನೂ ಉತ್ತರ ಸಿಗದ ಹಲವು ಪ್ರಶ್ನೆಗಳಿವೆ:

* ಲಾರಿ ತುಂಬಾ ಜಿಲೆಟಿನ್ ಬಾಕ್ಸ್​ಗಳಿದ್ದವು. ಸುಮಾರು 50 ಜಿಲೆಟಿನ್ ಬಾಕ್ಸ್ ಗಳಿದ್ದವೆನ್ನಲಾಗಿದೆ. ಒಂದು ಕ್ರಷರ್ ಕಂಪನಿಗೆ ಇಷ್ಟು ಜಿಲೆಟಿನ್ ಯಾಕೆ ಬೇಕಿತ್ತು? ಅಷ್ಟು ಡೈನಮೈಟ್ ಸರಬರಾಜಿಗೆ ಅನುಮತಿ ಇರುವುದಿಲ್ಲ. ಹೀಗಿರುವಾ ಇಷ್ಟು ಸ್ಫೋಟಕ ಹೇಗೆ ಬಂತು?
* ಜಿಲೆಟಿನ್ ತಾನಾಗೇ ಸ್ಫೋಟಗೊಳ್ಳುವುದಿಲ್ಲ. ಅದಕ್ಕೆ ಡಿಟೋನೇಟರ್ ಬೇಕು. ಇಲ್ಲಿ ಸ್ಫೋಟ ಹೇಗಾಯಿತು?
* ಜಿಲೆಟಿನ್ ಸ್ಫೋಟವಾಯಿತೋ ಅಥವಾ ಬೇರೆ ಸ್ಫೋಟಕಗಳಿದ್ದವೋ? ಅಮೋನಿಯಮ್ ಫಾಸ್​ಫೇಟ್, ಅಮೋನಿಯಮ್ ನೈಟ್ರೇಟ್​ನಂಥ ಸ್ಫೋಟಕ ರಾಸಾಯನಿಕಗಳು ಅಲ್ಲಿದ್ದವಾ?* ಕಲ್ಲು ಕ್ರಶರ್​ನಲ್ಲಿ ಸ್ಫೋಟಕ್ಕೆ ಬೆಳಗ್ಗೆಯಿಂದ ಸಂಜೆಯವರೆಗೆ ನಿರ್ದಿಷ್ಟ ಸಮಯ ಇರುತ್ತದೆ. ರಾತ್ರಿ 10:30ಕ್ಕೆ ಸ್ಫೋಟ ಹೇಗಾಯಿತು?
* ಜಿಲೆಟಿನ್ ಸ್ಫೋಟದಿಂದ ಇಷ್ಟು ಶಬ್ದ, ಕಂಪನ ಬರುವುದಿಲ್ಲ. ಇಲ್ಲಿ IED (ಸುಧಾರಿತ ಸ್ಫೋಟಕ ಸಾಧನ) ಬಾಂಬ್ ಬಳಕೆ ಆಗಿದೆಯಾ?
* ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚಟುವಟಿಕೆ ಹಿನ್ನೆಲೆಯಲ್ಲಿ, ಸ್ಫೋಟದಲ್ಲಿ ನಕ್ಸಲ್ ಅಥವಾ ಬೇರೆ ಸಮಾಜ ಘಾತುಕ ಶಕ್ತಿಯ ಕೈವಾಡ ಇದೆಯೋ?
* ಸಾವಿನ ಸಂಖ್ಯೆ ಎಷ್ಟು?

ಇದನ್ನೂ ಓದಿ: Huge Blast; ಶಿವಮೊಗ್ಗ ಬ್ಲಾಸ್ಟ್​ ಕುರಿತು ಉನ್ನತ ಮಟ್ಟದ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ; ಯಡಿಯೂರಪ್ಪ ಭರವಸೆ

ಸ್ಫೋಟ ಹೇಗಾಯಿತು, ಯಾವುದರಿಂದ ಆಯಿತು ಎಂಬುದನ್ನು ಮೊದಲು ಪತ್ತೆ ಮಾಡಬೇಕು. ಮುಂಜಾಗ್ರತಾ ಕ್ರಮ ಇಲ್ಲದೆ ಆಕಸ್ಮಿಕವಾಗಿ ಸ್ಫೋಟವಾಗಿದ್ದರೆ ಕ್ರಮ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಅನಾಹುತವಾಗದಂತೆ ತಡೆಯಬಹುದು. ಆದರೆ, ಉದ್ದೇಶಪೂರ್ವಕವಾಗಿ ಸಮಾಜಘಾತುಕ ಶಕ್ತಿಗಳು ಈ ಸ್ಫೋಟ ಮಾಡಿದ್ದಾರಾ ಇಲ್ಲವಾ ಎಂಬುದನ್ನು ಪತ್ತೆ ಹಚ್ಚುವುದು ಬಹಳ ಮುಖ್ಯ. ಆದ್ದರಿಂದ ಈ ಘಟನೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎಯಿಂದ ತನಿಖೆಗೆ ಒಳಪಡಿಸಬೇಕು ಎಂದು ನ್ಯೂಸ್18 ಕನ್ನಡ ಜೊತೆ ಮಾತನಾಡಿದ ವಿಧಿವಿಜ್ಞಾನ ಶಾಸ್ತ್ರಜ್ಞ ದಿನೇಶ್ ರಾವ್ ಮತ್ತು ಭೂಗರ್ಭ ಶಾಸ್ತ್ರಜ್ಞ ಹೆಚ್.ಎಸ್.ಎಂ. ಪ್ರಕಾಶ್ ಅವರು ಅಭಿಪ್ರಾಯಪಟ್ಟಿದ್ಧಾರೆ.
Published by: Vijayasarthy SN
First published: January 22, 2021, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories