Schools Protest - ಇಂದು ಖಾಸಗಿ ಕನ್ನಡ ಶಾಲೆಗಳು ಬಂದ್; ಸಚಿವರ ಮನೆ ಮುಂದೆ ನಡೆಯಲಿದೆ ಸತ್ಯಾಗ್ರಹ

ಸರ್ಕಾರ ಸೂಚಿಸಿದ ಶೇ. 70ರಷ್ಟು ಬೋಧನಾ ಶುಲ್ಕವನ್ನು ಪೋಷಕರು ಕಟ್ಟುತ್ತಿಲ್ಲ ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಖಾಸಗಿ ಕನ್ನಡ ಶಾಲೆಗಳು ಇಂದು ಪ್ರತಿಭಟನೆ ನಡೆಸುತ್ತಿವೆ.

ಶಿಕ್ಷಣ ಸಚಿವ ಸುರೇಶ್​ ಕುಮಾರ್​​

ಶಿಕ್ಷಣ ಸಚಿವ ಸುರೇಶ್​ ಕುಮಾರ್​​

  • Share this:
ಬೆಂಗಳೂರು: ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ನೆರವಿಗೆ ಸರ್ಕಾರ ಇದುವರೆಗೂ ಬಂದಿಲ್ಲ. ಇದರಿಂದ ಬೇಸತ್ತು ಶಿಕ್ಷಣ ಇಲಾಖೆ ಧೋರಣೆ ವಿರುದ್ಧ ರಾಜ್ಯದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ಪ್ರತಿನಿಧಿಗಳು ಮತ್ತೆ ಬೀದಿಗಿಳಿಯುತ್ತಿದ್ದಾರೆ. ಇಂದು ತಮ್ಮ ಖಾಸಗಿ ಶಾಲೆಗಳನ್ನು ಬಂದ್ ಮಾಡಿ, ಶಿಕ್ಷಣ ಸಚಿವರ ಮನೆ ಮುಂದೆ ಐದು ಸಾವಿರಕ್ಕೂ ಹೆಚ್ಚು ಜನರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೊರೋನಾ ಕಾರಣದಿಂದ ಈ ಶೈಕ್ಷಣಿಕ ವರ್ಷ ಪೋಷಕರಿಗೂ, ಶಾಲೆಗಳಿಗೂ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಗಮನಹರಿಸಬೇಕಾದ ಶಿಕ್ಷಣ ಇಲಾಖೆ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿ ಭರವಸೆ ಮಾತ್ರ ನೀಡುತ್ತಿದೆ. ಆದರೆ ಇವ್ಯಾವುವೂ ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂದು ಅನುದಾನರಹಿತ ಖಾಸಗಿ ಶಾಲೆಗಳು‌ ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಖಾಸಗಿ ಶಾಲೆಗಳ ಒಕ್ಕೂಟ ಕಳೆದ ವಾರ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ಕರೆದಿತ್ತು. ಸಭೆಯಲ್ಲಿ ಖಾಸಗಿ ಶಾಲೆಗಳ ಸಂಕಷ್ಟ, ಸರ್ಕಾರ ಸ್ಪಂದಿಸದೇ ಇರುವುದರ ಬಗ್ಗೆ ಸುದೀರ್ಘವಾಗಿ ಚರ್ಚೆಯಾಯಿತು. ಈ ಮೊದಲು ಭರವಸೆ ನೀಡಿದಂತೆ ಆರು ಬೇಡಿಕೆಗಳು ಈಗಲೂ ಈಡೇರದೇ ಇರುವ ಹಿನ್ನೆಲೆ ಮತ್ತೆ ರಸ್ತೆಗಿಳಿದು ಹೋರಾಟ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ.

ಇದನ್ನೂ ಓದಿ: ಬೆಳಗಾವಿ ಲೋಕಸಭಾ ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ಬೇಡಿಕೆಗಳೇನು..?

1) ಈ ವರ್ಷದ ಶೇ.70 ರಷ್ಟು ಬೋಧನಾ ಶುಲ್ಕ ಕಟ್ಟುವಂತೆ ಪೋಷಕರಿಗೆ ಸೂಚನೆ ನೀಡಬೇಕು
2) 1995 ರಿಂದ 2005ರವರೆಗೆ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು
3) ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ವಿಷಯದಲ್ಲಿ ಹತ್ತು ಸಾವಿರ  ಶಾಲೆಗಳು ಬಂದ್ ಆಗಲಿವೆ. ಈ ವಿಚಾರದಲ್ಲಿ ಸರ್ಕಾರ ಪರಿಶೀಲಿಸುವುದು
4) ಶಿಕ್ಷಕರ ಕಲ್ಯಾಣ ನಿಧಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೂ ಪರಿಹಾರ ಸಿಗುವಂತೆ ಮಾಡುವುದು
5) ಬಿಸಿಯೂಟ ಕಾರ್ಯಕ್ರಮವನ್ನ ಅನುದಾನರಹಿತ ಶಾಲಾ ಮಕ್ಕಳಿಗೂ ಯೋಜನೆ ವಿಸ್ತರಿಸಬೇಕು
6) ಕರ್ನಾಟಕ ಖಾಸಗಿ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕೆಂದು ಒತ್ತಾಯ
7) ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೂ ನೀಡಬೇಕು

ಇದನ್ನೂ ಓದಿ: ಸಂಚಾರಿ ಪೊಲೀಸರ ತಪಾಸಣೆ ವೇಳೆ ಬಿದ್ದು ಬೈಕ್ ಸವಾರ ಸಾವು: ರೊಚ್ಚಿಗೆದ್ದ ಜನರಿಂದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ!

ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸದ ಕಾರಣ, ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಸತ್ಯಾಗ್ರಹ ಮಾಡೋಕೆ ನಿರ್ಧರಿಸಲಾಗಿದೆ. ಐದು ಸಾವಿರಕ್ಕೂ ಅಧಿಕ ಶಾಲಾ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಬೆಳಗ್ಗೆ 9 ಗಂಟೆಗೆ ಪ್ರತಿಭಟನೆಗೆ ಮುಂದಾಗಲಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ನೌಕರರ ಸಂಘ, ರುಪ್ಸಾ (RUPSA) ಕರ್ನಾಟಕ, ಕಲ್ಯಾಣ ಕರ್ನಾಟಕ, ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ವಿವಿಧ ಶಿಕ್ಷಕರ ಸಮನ್ವಯ ಸಮಿತಿಯಿಂದ ಹೋರಾಟಕ್ಕೆ ಕರೆ ನೀಡಲಾಗಿದೆ. ಸರ್ಕಾರ ಆದೇಶದಂತೆ ಶೇ.70ರಷ್ಟು ಟ್ಯೂಷನ್ ಫೀಸ್ ಕಟ್ಟಬೇಕೆಂದು ಹೇಳಿದೆ. ಆದ್ರೆ, ಅದನ್ನೂ ಕೂಡ ಪೋಷಕರು ಕಟ್ಟುತ್ತಿಲ್ಲ. ಇದರಿಂದ ಶಾಲೆ ನಡೆಸುವುದು ಕಷ್ಟವಿದೆ‌. ಇದೂ ಸೇರಿದಂತೆ ಉಳಿದ ಹಲವು ಬೇಡಿಕೆ ಈಡೇರಿಸಲು ಮಾ. 23ರವರೆಗೆ ಸರ್ಕಾರಕ್ಕೆ ರುಪ್ಸಾ ಕರ್ನಾಟಕ ಸಂಘಟನೆ ಡೆಡ್ ಲೈನ್ ನೀಡಿತ್ತು‌.  ಆದ್ರೆ ಸರ್ಕಾರಕ್ಕೆ ಇದಕ್ಕೆ ಸ್ಪಂದಿಸದ ಕಾರಣ ರಾಜ್ಯದಲ್ಲಿರುವ 6 ಸಾವಿರ ಅನುದಾನ ರಹಿತ ಕನ್ನಡ ಮಾಧ್ಯಮಗಳ ಶಾಲೆಗಳನ್ನ ಬಂದ್ ಮಾಡಿ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ.

ವರದಿ: ಶರಣು ಹಂಪಿ
Published by:Vijayasarthy SN
First published: