‘ನಿತ್ಯಾನಂದ ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ; ಹೀಗಾಗಿ ನೋಟಿಸ್​​ ತಲುಪಿಸಲು ಸಾಧ್ಯವಿಲ್ಲ‘: ಹೈಕೋರ್ಟ್​ಗೆ ಪೊಲೀಸರು

ಇನ್ನು ಪೊಲೀಸರ ವಿರುದ್ಧ ಕಿಡಿಕಾರಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ತಮ್ಮ ಅಸಮಾಧಾನ ಹೊರಹಾಕಿದರು. ಕೋರ್ಟ್​ ನೋಟಿಸ್​ ನೀವು ತಲುಪಿಸುತ್ತಿರುವುದು ಇದೇ ಮೊದಲ ಸಲವೇ? ಹೀಗೆ ನ್ಯಾಯಲಯಕ್ಕೆ ಕ್ಷುಲ್ಲಕ ಕಾರಣ ನೀಡಲು ನಾಚಿಕೆಯಾಗುವುದಿಲ್ಲವೇ? ಏನು ಆಟವಾಡುತ್ತಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ಧಾರೆ.

news18-kannada
Updated:February 3, 2020, 8:43 PM IST
‘ನಿತ್ಯಾನಂದ ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ; ಹೀಗಾಗಿ ನೋಟಿಸ್​​ ತಲುಪಿಸಲು ಸಾಧ್ಯವಿಲ್ಲ‘: ಹೈಕೋರ್ಟ್​ಗೆ ಪೊಲೀಸರು
ನಿತ್ಯಾನಂದ ಸ್ವಾಮಿ
  • Share this:
ಬೆಂಗಳೂರು(ಫೆ.03): ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಹಾಗಾಗಿ ನ್ಯಾಯಲಯ ನೀಡಿದ ನೋಟಿಸ್​ ಸ್ವಾಮೀಜಿಗೆ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಪೊಲೀಸರು ಹೈಕೋರ್ಟ್​​ಗೆ ತಿಳಿಸಿದ್ಧಾರೆ. ಇಂದು ನಿತ್ಯಾನಂದ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಕ್ಕಿರುವ ಜಾಮೀನು ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್​ಗೆ ಪೊಲೀಸರು ಹೀಗೆ ಅಫಿಡವಿಟ್‌ ಸಲ್ಲಿಸಿದ್ದಾರೆ.

ಕೋರ್ಟ್​ ನೀಡಿದ ನೋಟಿಸ್​​ ನಿತ್ಯಾನಂದ ಸ್ವಾಮೀಜಿಗೆ ನೀಡಲು ಆಗುತ್ತಿಲ್ಲ. ಆದರೆ, ನಾವು ನೋಟಿಸ್​​ ತನ್ನ ಸಹವರ್ತಿ ಕುಮಾರಿ ಅರ್ಚನಾನಂದರಿಗೆ ನೀಡಿದ್ದೇವೆ. ಸದ್ಯ ನಿತ್ಯಾನಂದ ಸ್ವಾಮೀಜಿ ಬಿಡದಿ ಆಶ್ರಮದಲ್ಲಿ ಲಭ್ಯವಿಲ್ಲ. ಅವರು ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕುಮಾರಿ ಅರ್ಚನಾನಂದರಿಗೆ ಈ ನೋಟಿಸ್​ ನೀಡಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲರಾಜ್ ಬಿ. ಹೈಕೋರ್ಟ್‌ಗೆ ನೀಡಿದ ವರದಿಯಲ್ಲಿ ತಿಳಿಸಿದ್ಧಾರೆ.

ಸದ್ಯ ನಿತ್ಯಾನಂದ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ನಿತ್ಯಾನಂದರಿಗೆ ನೋಟಿಸ್ ತಲುಪಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ನಾವು ನೋಟಿಸ್​​ ಸ್ವೀಕರಿಸುವಂತೆ ಹಲವು ಬಾರಿ ಬಲವಂತ ಮಾಡಿದ್ದೇವೆ. ಕುಮಾರಿ ಅರ್ಚನಾನಂದ ಕೂಡ ನಿತ್ಯಾನಂದ ಸ್ವಾಮೀಜಿಗೆ ತಿಳಿಸಿದ್ದಾರೆ. ಆದರೂ ಏನು ಪ್ರಯೋಜವಾಗಿಲ್ಲ ಎಂದು ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ದೂರಿದ್ದಾರೆ.

ಇನ್ನು ಪೊಲೀಸರ ವಿರುದ್ಧ ಕಿಡಿಕಾರಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ತಮ್ಮ ಅಸಮಾಧಾನ ಹೊರಹಾಕಿದರು. ಕೋರ್ಟ್​ ನೋಟಿಸ್​ ನೀವು ತಲುಪಿಸುತ್ತಿರುವುದು ಇದೇ ಮೊದಲ ಸಲವೇ? ಹೀಗೆ ನ್ಯಾಯಲಯಕ್ಕೆ ಕ್ಷುಲ್ಲಕ ಕಾರಣ ನೀಡಲು ನಾಚಿಕೆಯಾಗುವುದಿಲ್ಲವೇ? ಏನು ಆಟವಾಡುತ್ತಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ಧಾರೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಹೆಗಡೆಗೆ ಬಿಜೆಪಿಯಿಂದ ನಿಷೇಧ, ಶೋಕಾಸ್​ ನೊಟೀಸ್​

ಈ ವೇಳೆ ಲೆನಿನ್ ಪರ ವಕೀಲರು ವಾದ ಮಂಡಿಸಿ, ಬೆಲ್ಲೀಸ್ ದೇಶದ ಪಾಸ್ ಪೋರ್ಟ್ ಪಡೆದು ನಿತ್ಯಾನಂದ ಸ್ವಾಮಿ ದೇಶದಿಂದ ಪರಾರಿಯಾಗಿದ್ದಾನೆ. ಇಲ್ಲಿಯವರೆಗೂ ಒಮ್ಮೆಯೂ ಕೋರ್ಟ್​ಗೆ ಹಾಜರಾಗಿಲ್ಲ. ನಿತ್ಯಾನಂದನ ಪಾಸ್ ಪೋರ್ಟ್ ಅವಧಿ ಮುಗಿದಿದೆ. ಆದರೂ, ನಿತ್ಯಾನಂದ ಬೇರೆ ದೇಶದಲ್ಲಿದ್ದಾನೆ. 2ನೇ ಆರೋಪಿಯೂ ಸಹ ಕೋರ್ಟ್​ಗೆ ಹಾಜರಾಗುತ್ತಿಲ್ಲ. ಹೈಕೋರ್ಟ್ ನೀಡಿರುವ ಸಮನ್ಸ್ ಅಚಲಾನಂದ ಸ್ವೀಕಾರ ಮಾಡಿದ್ದಾರೆ. ಆದ್ದರಿಂದ ಜಾಮೀನು ರದ್ದು ಪಡಿಸಬೇಕು ಅಂತಾ ಲೆನಿನ್ ಪರ ವಕೀಲರು ವಾದಿಸಿದರು.

ಇದನ್ನು ಆಲಿಸಿದ ಹೈಕೋರ್ಟ್​, ಜಾಮೀನು ರದ್ದು ಕೋರಿ ಅರ್ಜಿ ವಿಚಾರಣೆ ನಡೆಸಿದ ತೀರ್ಪನ್ನ ಫೆಬ್ರವರಿ 5ಕ್ಕೆ ಪ್ರಕಟಿಸೋದಾಗಿ ತಿಳಿಸಿದೆ.
First published: February 3, 2020, 8:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading